ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಳೆ ಅಥವಾ ಈಚಲು ಮರದ ಸೇಂದಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದೆಂದು ನಮ್ಮ ಪೂರ್ವಜರು ಆ ಕಾಲದಲ್ಲೇ ಹೇಳಿದ್ದಾರೆ.ಅದೀಗ ಸತ್ಯವೆಂದು ಋಜುವಾತಾಗಿದೆ…ಈ ಮಾತುಗಳನ್ನು ನಾವು ಹೇಳುತ್ತಿಲ್ಲ. ಉಸ್ಮಾನಿಯಾ ಬಯಲಾಜಿಕಲ್ ಸೈನ್ಸ್ ಪ್ರೊಫೆಸರ್ ಆಗಿರುವ ಭೂಕ್ಯಾ ಭೀಮಾ ರವರ ಪ್ರಕಾರ, ಮಸಾಲೆ ಪದಾರ್ಥಗಳು, ಮಾಂಸಾಹಾರ, ಜಂಕ್ ಫುಡ್ ಸೇವಿಸುವುದರಿಂದ ಅಸ್ತವ್ಯಸ್ತಗೊಂಡಿರುವ ನಮ್ಮ ಜೀರ್ಣಾಂಗಗಳ ವ್ಯವಸ್ಥೆಯನ್ನು ಸರಿಪಡಿಸುತ್ತದೆಂದು ಸಂಶೋಧಕರು ಹೇಳುತ್ತಾರೆ. ಅಷ್ಟೇ ಅಲ್ಲದೆ ತಾಳೆ ಮರದ ಸೇಂದಿ ಕುಡಿಯುವುದರಿಂದ ಕ್ಯಾನ್ಸರ್ ರೋಗವನ್ನು ಹೊಡೆದೋಡಿಸಬಹುದೆಂದು ಉಸ್ಮಾನಿಯಾ ಸಂಶೋಧನಾ ವಿಭಾಗ ಹೇಳುತ್ತದೆ. ತಾಳೆ ಸೇಂದಿಯಲ್ಲಿರುವ 53 ಬಗೆಯ ಸೂಕ್ಷ್ಮ ಜೀವಿಗಳಲ್ಲಿ, 18 ಬಗೆಯ ಸೂಕ್ಷ್ಮ ಜೀವಿಗಳು ಮನುಷ್ಯನಲ್ಲಿರುವ ರೋಗಕಾರಕ ಸೂಕ್ಷ್ಮ ಜೀವಿಗಳನ್ನು ನಾಶಮಾಡುತ್ತವೆಂದು ಐಐಸಿಟಿ ವಿಜ್ಞಾನಿಗಳು ಗುರುತಿಸಿದ್ದಾರೆ. ತಾಳೆ ಸೇಂದಿಯಲ್ಲಿರುವ ‘ಸ್ಯಾಕರೋಮೈಸೆಸ್ ‘ಎಂಬ ಸೂಕ್ಷ್ಮ ಜೀವಿಗಳು, ಮಾನವನ ಹೊಟ್ಟೆಯಲ್ಲಿರುವ ಕ್ಯಾನ್ಸರ್ ರೋಗಕ್ಕೆ ಕಾರಣವಾದ ಓಬಿಎಸ್2 ಎಂಬ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿರೋಧಿಸುವ ಗುಣವಿದೆಯೆಂದು… ಅತಿಸಾರ,ಟೈಫಾಯ್ಡ್ ರೋಗಗಳು ಬರಲು ಕಾರಣವಾದ ವೈರಸ್ ಗಳ ಮೇಲೆ ತಾಳೆ ಸೇಂದಿಯಲ್ಲಿರುವ ಸೂಕ್ಷ್ಮಾಣುಗಳು ಆಂಟಿಬಯಾಟಿಕ್ ಆಗಿ ಕೆಲಸ ಮಾಡುತ್ತವೆಂದು ಹೇಳುತ್ತಾರೆ. ಆದರೆ, ಹುಳಿಯಾದ ಸೇಂದಿಯನ್ನು ಕುಡಿಯುವುದು ಅನಾರೋಗ್ಯಕರವೆಂದು, ಸೇಂದಿಯನ್ನು ಮರದಿಂದ ಇಳಿಸಿದ ಒಂದು ಗಂಟೆಯೊಳಗೆ ಕುಡಿಯಬೇಕೆನ್ನುತ್ತಾರೆ. ಇಲ್ಲವಾದಲ್ಲಿ ಸೇಂದಿಯಲ್ಲಿ ಆಲ್ಕೊಹಾಲ್ ಅಂಶ ಹೆಚ್ಚಾಗಿ ಅನಾರೋಗ್ಯವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಗಳ ಸಂಖ್ಯೆ ಹೆಚ್ಚಾಗುತ್ತವೆಂದು ಉಸ್ಮಾನಿಯ ಯೂನಿವರ್ಸಿಟಿ ಸಂಶೋಧನಾ ವಿಭಾಗದ ವಿಜ್ಞಾನಿಗಳು ಹೇಳುತ್ತಾರೆ.
ಸೇಂದಿ ಮಾರಲು ಈ ಪರಿಯ ಪ್ರಚಾರವೇ..
ReplyDeleteಇದು ನಿಜವೇ ಆಗಿದ್ದರೆ ಸೇಂದಿ ಮಾರಾಟ ಔಷಧ ಮಳಿಗೆಯಲ್ಲಿ ಆಗಬೇಕಿತ್ತು.
ಅಥವ ಸೆಂದಿ ಕುಡಿಯುವ ಜನ ಕ್ಯಾನ್ಸರ್ ಮುಕ್ತವಾಗಿರಬೇಕಿತ್ತು.
ಮಾರುವವರೂ ಶ್ರೀಮಂತರಾಗಬೇಕಿತ್ತು