Sunday, January 28, 2018

ಮಂತ್ರದೇವತೆ : ದೈವಿ ಶಕ್ತಿಯ ಬಗ್ಗೆ ನಿಮಗೆಷ್ಟು ತಿಳಿದಿದೆ

ಮಂತ್ರದೇವತೆ:- ಒಂದು ದೈವಿ ಶಕ್ತಿ ಇದನ್ನು ತುಳುನಾಡಿನ ಹಲವಾರು ಮನೆಗಳಲ್ಲಿ ನಂಬಿಕೊಂಡು ಬಂದಿರುವ ಈ ದೇವತೆಯನ್ನು ಭಯ-ಭಕ್ತಿಯಿಂದ ಪೋಜಿಸುವವರನ್ನು ಕಾಪಾಡುವ ದೇವತೆ,ತುಳುನಾಡಿನಲ್ಲಿ ತಾಯಿ,ಮಕ್ಕಳು. ಅಣ್ಣ,ತಮ್ಮಂದಿರು. ಸತಿ,ಪತಿಗಳು. ಜಾಗದವಿಷಯದಲ್ಲಿ, ಒಡವೆ,ಅಭರಣಗಳವಿಷಯದಲ್ಲಿ ತಮ್ಮ-ತಮ್ಮಲೇ ಬಡಿದಾಡುವುದನ್ನು ಕಂಡ ದೇವಿ ಪಾರ್ವತಿಯ ಮನಸ್ಸಿನಲ್ಲಿ ಬೇಸರ ಮೂಡಿ ಪತಿ ಶಿವದೇವನಲ್ಲಿ ಇದಕ್ಕೆ ಏನು ಪರಿಹಾರ ಎಂದು ಕೇಳಿದಾಗ. ನಿನೇ ಏನಾದರು ಪರಿಹಾರ ಹುಡುಕು ಎಂದು ಶಿವನು ಹೇಳಿದನು.

ಪಾರ್ವತಿದೇವಿಯು ತಾನು ಶಾಂತರೂಪದಲ್ಲಿ ಬೊಮಿಯಲ್ಲಿ ಹಲವಾರು ರೂಪದಲ್ಲಿ ಇದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ತಾನು ಇನ್ನುಮಂದೆ ಉಗ್ರರೂಪದಲ್ಲೆ ಭೂಮಿಗೆ ಇಳಿಯುವುದಾಗಿ ತಳಿಸಿ. ತಾಳೆಗರಿಯ ಮಂತ್ರದ ಕಟ್ಟೊಂದನ್ನು ನದಿಯ ನೀರಿಗೆ ಬೀಟ್ಟು ಸರಿಯಾದ ಸಮಯಕ್ಕಾಗಿಕಾದಳು.

ಕೇರಳ ರಾಜ್ಯದ ಕುಂಟಲ ತಂತ್ರಿ ಎಂಬ ಬ್ರಾಹ್ಮಣರೊಬ್ಬರು ದರ್ಮನಿಷ್ಠೆಯಿಂದ ಬಾಳುತ್ತಿದರು. ಮೇಲಾಗಿ ಪಾರ್ವತಿ ದೇವಿಯು ಪರಮ ಭಕ್ತರಾಗಿದ್ದರು.ಒಂದು ದಿನ ಬೆಳ್ಳಗಿನ ನಿತ್ಯಪೂಜೆಗೆ ನೀರುತರಳು ನದಿಬಳಿ ತೆರಳಿದ ತಂತ್ರಿಗಳಿಗೆ ಕೆಲಮುಖ ಹರಿಯುತ್ತಿರುವ ನೀರಿನಿಂದ ಮೆಲ್ಮುಕವಾಗಿ ತೇಲಿಬರುತ್ತಿರುವ ತಾಳೆಗರಿಯನ್ನು ಕಂಡು ಇದರಲೇನೊ ದೈವೀಕ ಶಕ್ತಿ ಇದೆ ಎಂದು ತಿಳಿದು ಮನೆಗೆ ತೆಗೆದುಕೋಂಡು ಹೋದರು.

ತಾನು ಬೋಮಿಯಲ್ಲಿ ಆವಾತರ ಎತ್ತುವ ಸಮಯ ಸನ್ನಿಹಿತವಾಯಿತು ಎಂದು ತಿಳಿದ ಪಾರ್ವತಿ ದೇವಿಯು ಗುಬ್ಬಿ ರೂಪದರಿಸಿ ಕುಂಟಾಲ ತಂತ್ರಿಯವರನ್ನು ಹಿಂಬಾಲಿಸಿ ಹೊರಟಳು.ಇತ್ತ ತಂತ್ರಿಗಳು ತಾಳೆಗರಿಯಲ್ಲಿರುವ ಮಂತ್ರವನ್ನು ಸುಂದರವಾಗಿ ಜಪಿಸಲು ಮಾರುಹೋದ ಪಾರ್ವತಿ ಮಾತೆಯು ಸುಣ್ಣದ್ದ ಕಲ್ಲಿನರೂಪದಲ್ಲಿ ಅವರ ಮಡಿಲಿಗೆ ಬಿದ್ದಳು.

ಆ ಸುಣ್ಣದ ಕಲ್ಲನ್ನು ನೋಡಿ ಅಪರೂಪದ ಈ ಕಲ್ಲನ್ನು ತೆಗೆದು "ಕಲ್ಲಕಲೆಂಬಿ" ಎಂಬ ತಮ್ಮ ಕಪಾಟಿನಲ್ಲಿ ಇಟ್ಟು ಬಾಗಿಲು ಹಾಕುತ್ತಾರೆ.ದಿನಕಳೆದಂತೆ ಒಂದು ಸಂಜೆ ಆ ಕಪಾಟಿನ ಒಳಗಿನಿಂದ ಕುಂಟಾಲ ತಂತ್ರಿಗಳೆ.ನಾನು ಬರೇ ಸುಣ್ಣದ ಕಲ್ಲಲ, ನೀವು ಪೂಜೀಸುವ ಪಾರ್ವತಿ ದೇವಿಯ ಅನುಗ್ರಹದಿಂದ ನೀವು ಸ್ತುತಿಸಿದ ಮಂತ್ರದ ಪರಿಣಾಮವಾಗಿ ನಿನಗೆ ಒದಗಿ ಬಂದ ದೈವಶಕ್ತಿ, ನಿನ್ನ ಮಂತ್ರ ಕಾಯಕದೊಂದಿಗೆ ನನ್ನನು ನೆನೆದು ಮುನ್ನಡೆಯಿರಿ. ತೂಗುಯ್ಯಲೆ ಕಟ್ಟಿಸಿ ನನ್ನನು ಅದರಲ್ಲಿ ಪ್ರತಿಷ್ಠಪಿಸಿ ನನಗೆ ಹಾಲು- ಹಣ್ಣು ನೀಡಿ ಭಯ-ಭಕ್ತಯಿಂದ ಆರಾದಿಸಿಕೊಂಡು ಬಂದರೆ

ನಿಮ್ಮನ್ನು ಸಕಲ ಸಂಪತ್ತುನೀಡಿ ರಕ್ಷಿಸಿಕೊಂಡು ಬರುತ್ತೆನೆ. ನಂಬಿಕೊಳ್ಳಿ ಎಂಬ ಅಪ್ಪಣೆಯಾಯಿತು. ಮರುದಿನವೇ ಆ ದೈವದ ಅಪ್ಪಣೆ ಪ್ರಕಾರ ವಿಧಿ-ವಿದಾನಗಳ್ಳನ್ನು ನೆರವೇರಿಸಿದರು.ಮುಂದಿನ ದಿನಗಳಲ್ಲಿ ತನ್ನ ಮಂತ್ರದಿಂದ ವೈದಿಕ ಕ್ರಿಯೇಗಳಲ್ಲಿ ಈ ದೈವಿಶಕ್ತಿಯನ್ನು ಬಳಸಿಕೊಂಡು "ಮಂತ್ರದೇವತೆ ಎಂಬ ಹೇಸರಿನಿಂದಲೆ ಪೂಜೆಮಾಡಿಕೊಂಡು ಬರತ್ತಾರೆ, ದಿನಕಳೆದಂತೆ ಈ ಮಂತ್ರದೇವತೆಯ ಶಕ್ತಿ ಸರ್ವ ಊರಿಗೂ ಸುದ್ದಿತಿಳಿದು ನಿತ್ಯ ಭಕ್ತದಿಗಳು ಸೇರಲು ಈ ಕುಂಟಾಲ ತಂತ್ರೀಗಳ ಮನಸ್ಸಿನಲ್ಲಿ ಆಸೆಯೊಂದು ಸೇರಿತು. ಈ ಶಕ್ತಿ ನನ್ನ ಮಂತ್ರದ ಬಲದಲ್ಲಿದೆ,

ಇದನ್ನು ಉಪಯೊಗಿಸಿ ದರ್ಮರಾಜ್ಯ ಸ್ತಾಪಿಸಿ ಆ ರಾಜ್ಯವನ್ನು ಆಳಬೇಕು ಎಂಬ ಅಸೆಯನ್ನು ಮಂತ್ರದ ಮೂಲಕ ದೇವಿಯನ್ನು ಸ್ತುತಿಸಿ ತನ್ನ ಆಸೆಯನ್ನು ತಿಳಿಸದ ತಂತಿಗೆ, ದೇವತೆಯು ನಿನ್ನ ಅಸೆ ನೇರವೇರಬೇಕಾದರೆ ಸಮಯ ಬೇಕು, ಯಾರಿಗದರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಹೇಳುತ್ತಾಳೆ. ಅದರಂತೆ ತಂತ್ರಿಯು ಯಾರಿಗೂ ಏನಾದರು ಮಾತು ಕೊಟ್ಟರ ಅದರಂತೆ ನಡೆಯುವೆ ಎಂದು ತಿಳಿಸುತ್ತಾನೆ.

ಇತ್ತ ಮಂತ್ರದೇವತೆ ಯ ಸುದ್ದಿ ಮೂಡಬಿದಿರೆಯ ಇರುವೈಲು ಎಂಬ ಊರಿನ ತೊತ್ನಡ್ ಬರ್ಕೆಯ ಕರಿಯ ಕಾಂತು ಬೈದ್ಯರ ಕಿವಿಗೂ ದೇವತೆಯ ಕಾರ್ಣಿಕದ ಸುದ್ದಿ ಬಿತ್ತು.ಆವಿದ್ಯವಂತರಾಗಿದ್ದ ತೊತ್ನಡ್ ಬರ್ಕೆಯ ಕಾಂತು ಬೈದರದ್ದು ದೊಡ್ಡ ಗುತ್ತಿನ ಮನೆ. ವಿಶಾಲವಾದ ಗದ್ದೆ ತೋಟವಿರುವ ಕಾಂತುಬೈದರ ಮುಗ್ದತೆ ಕಂಡು ಜನರು ಇವರಿಗೆ ಮೋಸಮಾಡುತ್ತಿದರು, ಆವಿದ್ಯವಂತರಾದ ಇವರು ಇತರರಿಂದ ಬೇಗನೆ ಮೊಸಕ್ಕೆ ಒಳಗಾಗುತ್ತಿದರು. ಅವರ ಭೂಮಿಯಲ್ಲಿ ಯಾವುದೆ ಪಸಲು ಬಂದರು ಅದು ಕಳ್ಳ-ಕಾಕರ ಪಲಾಗುತ್ತಿತ್ತು.

ಇದರಿಂದ ನೊಂದು-ಬೆಂದ ಕಾಂತುಬೈದರು ಚಿಂತೆಯಲ್ಲಿ ಮುಳುಗಿರುವಾಗ, ಅವರ ಮನೆಗೆ ನೆಂಟರಾಗಿ ಬಂದ ಅವರ ಬಾವ ಪದ್ದೊಂಚಿಬೈದರು ಕೇರಳ ರಾಜ್ಯದಲ್ಲಿ ಒಂದು ಕಾರಣಿಕದ ಮಂತ್ರದೇವತೆ ಇದೆಯಂತೆ ಅದನ್ನು ಕೇಳಿತಂದು ಪೂಜಿಸಲು ಹೇಳುತ್ತಾರೆ. ಇದನ್ನು ನಂಬಿದ ಕಾಂತುಬೈದರು ನೆರವಾಗಿ ಕುಂಟಾಲತಂತ್ರಿಯನ್ನು ಬೇಟಿಮಾಡಿ ಮಂತ್ರದೇವತೆಯನ್ನು ತನಗೆ ನೀಡುವಂತೆ ಕೇಳಿಕೊಳ್ಳುತ್ತಾರೆ,

ಈ ಮಾತನ್ನು ಕೇಳಿಕೊಂಡ ತಂತ್ರಿಗಳು ಇದು ದೇವತೆಯ ಏನೂ ಪರಿಕ್ಷೆಎಂದು ತಿಳಿದು ಕಾಂತುಬೈದರಲ್ಲಿ 16ದಿನದಲ್ಲಿ 16ರಾಜ್ಯಸುತ್ತಿ 16 ಬಾಷೆ ಕಲಿತು ಬಂದರೆ ಈ ದೇವತೆಯನ್ನು ನೀಡುತ್ತೆನೆ ಎಂದು ತಿಳಿಸುತ್ತಾರೆ. ಆ ಮಾತಿನಂತೆ ಕಾಂತುಬೈದರರು 16 ದೇಶ ಸುತ್ತಿ 16 ಬಾಷೆಗಳನ್ನು ತಿಳಿದು ಬರತ್ತಾರೆ.

ತಂತ್ರಿಗಳು ಕಾಂತುಬೈದರಿಗೆ ಕೋಟ್ಟ ಮಾತಿನಂತೆ ಒಂದು ತೆಂಗಿನಕಾಯಿ,ಒಂದು ಅಡಿಕೆ, ಒಂದು ಹಾಳೆ ಪಿಂಗಾರ,ಪುಷ್ಪದಲ್ಲಿ ಎಲೆ ಆಡಿಕೆ ಸುಣ್ಣ ಸಹಿತ ಮಂತ್ರದೇವತೆಯನ್ನು ಸ್ತುತಿಸಿ ದೇವತೆಯನ್ನು ಬೀಟ್ಟುಕೊಡುತ್ತಾರೆ, ಕಾಂತುಬೈದರ ಜೋತೆ ನಡೆವದೇವತೆ ಕುಂಟಲ ತಂತ್ರಿಯಲ್ಲಿ, ನನ್ನನು ಪೂಜಿಸಿ ದರ್ಮರಾಜ್ಯ ದ ಆಸೆ ಪಡೆದೆ ಈ ತಪ್ಪಿಗೆ ನಿನಗೆ ಶಿಕ್ಷೆ ನಾನು ನಿನ್ನಲ್ಲಿ ಸುಳ್ಳನು ಆಡಿದೆ, ಇನ್ನು ಮುಂದೆ 1000 ಸುಳ್ಳಿನಲ್ಲಿ 1_ಸತ್ಯದ ನುಡಿ ನನ್ನದ, ಇನ್ನು ಯಾರ ಕೈಗೂ ನಾನು ಮಂತ್ರದ ಪ್ರಬಾವದಿಂದ ಸಿಗುವುದಿಲ್ಲ, ನಿನಗೆ ತಿಳಿದ ಮಂತ್ರ ನಿನ್ನಿಂದತೆ ಅಂತ್ಯ ಎಂದು ತಂತ್ರಿಗಳಿಗೆ ಮುಕ್ತಿ ನಿಡುತ್ತಾಳೆ.

ಹೀಗೆ ಕಾಂತುಬೈದರ ಜೋತೆ ತುಳುನಾಡಿಗೆ ಬಂದ ಮಂತ್ರದೇವತೆಗೆ ಬೈದರು ತೋಡಿನನೀರು, ಕೇಪುಲದ ಹೂ, ಒಂದು ಸಣ್ಣ ಕೋಳಿ ಪದಾರ್ತ, ಮದ್ಯ(ಸಾರಯಿ) ಹಾಗೂ ಅಕ್ಕಿರೋಟಿ ಮಾಡಿ ಮಣ್ಣಿನಚಿಟೆ ಮಾಡಿ ಪೂಜಿಸುತ್ತಾರೆ.ಮುಂದೆ ದೇವತೆಯ ಭಯ-ಭಕ್ತಿಯಿಂದ ಊರಿನ ರಾಜನ ಸಹಿತ ಎಲ್ಲಾರೂ ಭಯ-ಭಕ್ತಿಯಿಂದ ಕರಿಯ ಕಾಂತುಬೈದರ ಜೋತೆ ಮಾತನಾಡುತ್ತರೆ,

ಇದರ ಪರಿಣಾಮ ಅಹಂಕಾರ ಹೊಂದಿದ ಬೈದರು ದೇವತೆ ಇಲ್ಲಿಗೆ ಬರಲು ಕಾರಣ ನಾನು. ನಾನು ಇದರೆ ಮಾತ್ರ ಇವಳಿಗೆ ಪೂಜೆ. ಎಂದು ಮದ್ಯದ ಅಮಲಿನಲ್ಲಿ ದೇವಿಗೆ ಪೂಜೆ ಮಾಡುವ ಸಲುವಾಗಿ ಇರುವೈಲು ಕೆರೆಗೆ ಸ್ನಾನಕೆ ಇಳಿಯತ್ತಾರೆ.

ಮೋದಲೆ ಬೈದರ ವರ್ತನೆಯಿಂದ ಕೋಪಗೊಂಡಿದ ದೇವತೆ ಉಗ್ರರೂಪದಿಂದ ಇರವೈಲು ಕೆರೆಯಲ್ಲಿ ಕಾಲಿನಿಂದ 3 ರಾತ್ರಿ 3 ಹಗಳು ತುಳಿದು 3ಸಲ ಮೇಲೆ ಎಳೆದು ಮತ್ತೆ ತುಳಯುತ್ತಾಳೆ. ತನ್ನ ತಪ್ಪಿನ ಅರಿವಾದ ಕಾಂತುಬೈದರು ಪರಿ ಪರಿಯಾಗಿ ದೇವಿಯನ್ನು ಸ್ತುತಿಸಿ ನಾನು ನಿನ್ನ ಭಕ್ತ ನಿನ್ನ ಜೊತೆಯೇ ಇರುತ್ತೆನೆ ಎಂದು ಹೇಳುತ್ತಾರೆ, ದೇವಿಯು ದೈವಿಕ ವಿದಾನದಲ್ಲಿ ನನ್ನ ಪೂಜಿಸಬೇಕಾದ ನೀನು ಮದ್ಯ ಮದು-ಮಾಂಸ ಇಟ್ಟು ಪೂಜಿಸಿದ ಕಾರಣ ಇನ್ನು ಮುಂದೆ ಕಾಂತುಬೈದರ ಪದ್ದತಿಯ ರೀತಿ ಕೋಳಿ ಅಕಿರೊಟ್ಟಿ ಮದ್ಯ ನಿನಗೆ, ಹಣ್ಣು ಹಂಪಲು ಪಂಚಕಾಜಯದ ಪೂಜೆ ನನಗೆ, ಇನ್ನೂ ಮುಂದೆ ನಾನು ಪೂಜಿಸುವ ಯಾರು ಮೊದಲು ನಿನಗೆ ಅಹಾರ ಇಟ್ಟ ನಂತರ ನನ್ನ ಪೂಜೆ ಎಂದು ಹರಸಿ ಕಾಂತುಬೈದರಿಗೆ ಮೋಕ್ಷ ನೀಡುತ್ತಾಳೆ.

ನಂತರ ಉಗ್ರ ರೂಪದಲ್ಲೆ ಪಾತಳ ಲೊಕ್ಕಕೆ ಇಳಿಯುತ್ತಾಳೆ.ಕಪ್ಪು ರೂಪದ ಈ ಶಕ್ತಿಯಿಂದ ಪಾತಳಲೊಕವೆ ಭಯಪಡುತೆ, ಇದರಿಂದ ಪಾತಳದ ನಾಗರಾಜನು ಮಂತ್ರದೇವತೆಗೆ ಶಿಕ್ಷಿಸುವ ಸಲುವಾಗಿ ದೇವತೆಯ ದಾರಿ ತಡೆಯುತ್ತಾನೆ, ಸತ್ಯದರ್ಮ ಪ್ರಿಯನಾದ ನಾಗರಾಜ ಮಾತ್ರವಲ್ಲ ಮಹಾ ಶೀವಭಕ್ತನೆಂದು ತಿಳಿದ ಮಂತ್ರದೇವತೆಯು ಯುದ್ದದ ಮದ್ಯದಲ್ಲಿ ದುರ್ಗರೂಪ ದರಿಸಿದಳು. ಇದರಿಂದ ಭಯ ಹೊಂದಿದ ನಾಗರಾಜ ನಾನು ಮಾತೆ ಪಾರ್ವತಿ ಯ ಜೊತೆ ಯುದ್ದ ನಡೆಸಿದನು ತಿಳಿದು ಶಾರಣದನು, ದೇವಿಯ ಕ್ಷಮೇ ಯಾಚಿಸಿದನು.

ತದನಂತರ ದುರ್ಗೆಯ ಈ ರೂಪದ ತಿಳಿದು ಮಂತ್ರದೇವತೆಗೆ ಕಾಣಿಕೆ ರೂಪದಲ್ಲಿ ನಾಗರಬೆತ್ತ ಹಾಗೂ ಮನಿಗಂಟೆಯನ್ನು ನೀಡಿ ಇನ್ನೂ ಮಂದೆ ದುರುಳರಿಗೆ ಶಿಕ್ಷಿಸಲು ಉಗ್ರ ರೂಪ ಪಡೆದರೂ ನಿನ್ನ ಭಕ್ತರಿಗೆ ಅವರ ತಪ್ಪಿಗೆ ಮನಿಗಂಟೆಯಿಂದ ಎಚರಿಸು, ಈ ನಾಗರಬೆತ್ತದಿಂದ ಶಿಕ್ಷಿಸುವಂತೆ ಕೋರಿಕೆಯನ್ನು ನಿವೆದಿಸುತ್ತನೆ. ನಾಗರಾಜನ ಭಕ್ತಿಗೆ ಮೇಚಿದ ಮಂತ್ರದೇವತೆಯ ಸುಂದರ ರೂಪ ಹೊಂದಿ ನಿನ್ನ ಇಚ್ಚಯಾಂತೆ ದುಷ್ಟರಿಗೆ ನನ್ನ ಉಗ್ರರೂಪ ಭಕ್ತರಿಗೆ ಈ ರೂಪ ಎಂದು ಭೂಲೊಕಕೆ ಮರಳುತ್ತಾಳೆ.

ಶಿವಂಶರಾದ ಸಾವಿರಮಣಿ ದೈವಗಳು ಘಟದಿಂದ ಇಳಿದು ತುಳುನಾಡಿಗೆ ದರ್ಮರಕ್ಷಣಗೆ ಇಳಿದು ಬರುವುದನ್ನು ಕಂಡ ಮಂತ್ರದೇವತೆ ತಾನು ಪಂಜುರ್ಲಿ ಸಹಿತ ಸಾರಮನಿದೈವಗಳ ದಾರಿಗೆ ಎದುರು ನಿಲುತ್ತಾಳೆ. ದಾರಿಗೆ ಎದುರು ನಿಂತ ಇವಳನ್ನು ದರ್ಪದಿಂದ ಸಾರಮನಿದೈವಗಳು ಯುದ್ದಕೆ ನಿಲುತ್ತಾರೆ. ಈ ಯುದ್ದದಿಂದ ದನಿದ ಮಂತ್ರದೇವತೆ ಇವರಿಗೆ ತಾನು ಯಾರೆಂದು ತಿಳಿಸುವ ಸಲುವಾಗಿ ತನ್ನ ಹಲವಾರು ರೂಪದರಿಸಿ ಯುದ್ದ ಮುಂದುವರೆಸಿ ತಾನು ತೂಗುಯ್ಯಾಲೆ ತೂಗುತ್ತಳೆ.

ತಮ್ಮ ತಪಿನ ಅರಿವಾದ ದೈವಗಳು ಕ್ಷಮೆಯಾಚಿಸಿ. ತಮ್ಮಂದಿಗೆ ಬರವಂತೆ ನಿವೆದಿಸುತ್ತಾರೆ, ಅದರೆ ಮಂತ್ರದೇವತೆ ನಾನು ನಿಮ್ಮ ಜೋತೆ ಬರುವವಳ್ಳಳ. ನೀವು ಮನೆ ಹೋರಗೆ ನಿಂತರೆ ನಾನು ಇನ್ನು ಮುಂದೆ ‌ಮನೆ ಒಳಗೆ ತೂಗೂಯ್ಯಲೆ ಪೂಜೆ ಪಡೆಯುವೆ ಸಮಯ ಬಂದಾದ ನಿಮ್ಮ ಜೋತೆ ಸೇರುವೆ ಎಂದು ಮುಂದೆ ನಡೆದಳು.ಮುಂದೆ ಬಂದ ದೇವತೆಗೆ ದರ್ಪದಿಂದ ನಡೆದು ಹೋಗುತ್ತಿರುವ ವೈದ್ಯನಾಥ ಬಬ್ಬುಸ್ವಾಮಿ ಯ ನೊಡುತ್ತಳೆ.

ಬಬ್ಬುವಿನ ಪರಿಕ್ಷೆಗಾಗಿ ರೂಪ ಬದಲಾಯಿಸಿ ಉಗ್ರರೂಪದಲೆ ದಾರಿಗೆ ಆಡ್ಡಲಾಗಿ ನಿಳುತ್ತಾಳೆ.ದಾರಿಗೆ ಅಡ್ಡನಿಂತ ದೇವತೆಗೆ ದಾರಿ ಬಿಡುವಂತೆ ಬಬ್ಬುಸಾಮಿ ನಿವೆದಿಸುತಾನೆ.ಮಂದೆಹೊಗಬೆಕಾದರೆ ನನ್ನ ಜೋತೆ ಯುದ್ದ ಮಾಡು ಎಂದ ದೇವತೆ ಹೆಳುತ್ತಾಳೆ. ಈ ದೇವತೆಯಾರು ಎಂದು ಅರಿವಿದ್ದ ಬಬ್ಬುಸ್ವಾಮಿಯು ದೇವತೆಯನ್ನು ಭಕ್ತಯಿಂದ‌ನೊಡಿ ತಾನು ತಾಯಿಯ ಜೋತೆ ಯುದ್ದ ಮಾಡುವುದಿಲ್ಲ ಎಂದು ಪೂಜಿಸುತ್ತಾನೆ,

ಬಬ್ಬುವಿನ ಈ ಭಕ್ತಿಗೆ ಒಳಿದ ದೇವತೆ ನಿನಗೆ ನನ್ನ ಮಾರಿಕಾಂಬ ರೂಪದ ವರದ ಪ್ರಕಾರ ಯಾರೆ ನಿನ್ನನು ಪೂಜಿಸಿ ಯಾವುದೆ ಬಾದೆಯನ್ನು ಪರಿಹಾರ ಮಾಡಬಹುದಾಗಿದೆ, ಇನ್ನು ಮಂದೆ ನಾನು ಯಾವುದೆ ಮನೆ ಸೇರಿ ದುಷ್ಟಬುದಯವರಿಗೆ ತೋಂದರೆ ನಿಡಿದಾಗ. ನಿನ್ನಲಿ ಪರಿಹಾರ ಕೇಳಿದರೆ ನಿನಗಾಗಿ 48 ದಿನಗಳ ಕಾಲ ನಿನೂ ನನನ್ನು ಅ ಮನೆಯಿಂದ ದೂರವಿಡಬಹುದು, ಅದರೆ 49 ದಿನ ನಾನು ಮರಳಿ ಮನೆ ಹೋಕ್ಕರೆ ನಾನು ಅ ಮನೆಯಲ್ಲಿ ಸಾಶ್ವತ ನೆಲೆಸುವೆ ಎಂದು ತಾನು ಇ ಭೂಮಿಗೆ ಇಳಿದ ಉದೇಶ ನೇರವೇರಿಸಲು ಮುಂದೆ ನಡೆದಳು.

(ಮಂತ್ರದೇವತೆ ಚರೀತ್ರೆ ಸಂಪೂರ್ಣಮಂ ). ( "ಶ್ರೀಭೂತಕಲ್ಪಂ ದಿಂದ ಈ ಮಂತ್ರ:- ಈಶ ಋಷಿಂ | ಅನುಷ್ಟುಪ್ ಛಂದಂ || ಭಗವತೀ ಮಂತ್ರದೇವತಾ ದೇವಾತಾ|| ಹ್ರಾಂ ಬೀಜಂ ಹ್ರೀಂ ಶಕ್ತಿಂ ಹ್ರೂಂ ಕೀಲಕಮ್. ಹ್ರಾಮಿತ್ಯಾದಿ ಷಡಂಗಮ್. ಧ್ಯಾನಮ್:- ಅಸಿತವರ್ಣೇ ಮಹಾಕಾಯೇ ರಕ್ತನೇತ್ರೇ ಭಯಂಕರೇ || ಪ್ರಣಮಾಮಿ ಸದಾ ದೇವಿ ನೂಪುರಧ್ವನಿಶೋಭಿತೇ || ಮೂಲಮ್ - ಏಹಿ ಏಹಿ ಭಗವತಿ ಕ್ಷಿಪ್ರಂ ದೇಹಿ ಇಷ್ಟಸಿದ್ದಿಂ ಮೇ ಕುರುಕುರು ಹುಂ ಫಟ್ ಸ್ವಾಹಾ. " ಮಂಗಳಂ" ಲೋಹಿತ್ ಕುಮಾರ್ ಕಾವೂರು (ಚೇತನ್ ಕುಮಾರ್ ಕಾವೂರು)

2 comments:

  1. 🕉🕉 ಶ್ರೀ ಶ್ರೀ ಮಹಾ ಶಕ್ತಿ ಮಾತೇ ಪಾರ್ವತಿ ದೇವಿ ನಮಃ 🕉🕉🔱

    ReplyDelete