Tuesday, June 18, 2019

ಧ್ಯಾನ ಎಂದರೇನು ? ಧ್ಯಾನದಿಂದ ಆಗುವ ಪ್ರಯೋಜನಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಧ್ಯಾನ ಎಂದರೇನು ? ಇದೊಂದು ಸಾಮಾನ್ಯ ಪ್ರಶ್ನೆ ಎನಿಸಬಹುದು, ಆದರೆ ಇದರ ಅರ್ಥ ವಿಶಾಲವಾದುದು ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ದೇವರ ನಾಮ ಜಪಿಸುವುದು ಧ್ಯಾನ ಎಂದು ತಿಳಿಯಲಾಗುತ್ತದೆ .ಆದರೆ ಧ್ಯಾನದ ಅರ್ಥ ಮನಸ್ಸು ಮತ್ತು ದೇಹ ಒಂದೆಡೆ ಸೇರುವುದು ಧ್ಯಾನವೆಂಬುದು ಗುಪ್ತ ವಿದ್ಯೆಗಳಲ್ಲಿ ಒಂದೆಂದರೆ ಅತಿಶಯೋಕ್ತಿಯೇನಲ್ಲ.ಮನಸ್ಸಿಗೆ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡುವ ಸಾಮರ್ಥ್ಯ ಧ್ಯಾನದಲ್ಲಿದೆ. ಅಸಾಧ್ಯವಾದ ಕೆಲಸಗಳನ್ನು ಅದರ ಮೂಲಕ ಸಾಧಿಸಬಹುದು. ನಿರಂತರವಾಗಿ ಕೆಲವು ಕ್ಷಣ ಧ್ಯಾನ ಪರವಶವಾದರೆ ಆಂತರಿಕ ಶಕ್ತಿ ಜಾಗೃತವಾಗುತ್ತದೆ. ಭವಿಷ್ಯದಲ್ಲಿ ಉಂಟಾಗುವ ಆಗು ಹೋಗುಗಳು ಅರಿವಾಗುತ್ತದೆ. ಅದು ಆತ್ಮ ಚೈತನ್ಯವನ್ನು ವದ್ಧಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಧ್ಯಾನದ ಕಡೆ ಮನಸ್ಸು ಹರಿಸುವುದು ತುಸು ಕಷ್ಟವೇ ಸರಿ, ಆದರೆ ದೃಢ ನಿರ್ಧಾರ ಸಂಕಲ್ಪದಿಂದ ಮಾತ್ರ ಸಾಧ್ಯ. ಧ್ಯಾನ ಮಾಡುವುದನ್ನು ರೂಢಿಸಿ ಕೊಂಡಷ್ಟು ಹೆಚ್ಚು ಆನಂದ ಉಂಟಾಗುತ್ತದೆ. ಧ್ಯಾನವನ್ನು ಪ್ರಾರಂಭಿಸುವ ಮೊದಲು ಗುರುಗಳ ಸಲಹೆ ಸೂಚನೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಕಣ್ಣು ಮುಚ್ಚಿಕೊಂಡು ದೇವರ ಸ್ಮರಣೆ ಮಾಡುವುದನ್ನು ಧ್ಯಾನ ಎಂದು ತಿಳಿಯಲಾಗುತ್ತದೆ. ಆದರೆ ಇದು ಹೇಳಿಕೊಳ್ಳುವ ಅರ್ಥವಲ್ಲ ಮನಸ್ಸು ಮತ್ತು ದೇಹ ಒಂದೆಡೆ ಸೇರುವುದೇ ಧ್ಯಾನ .ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ವಸ್ತುವಿನ ಎಡಬಿಡದೆ ಸಮಚಿತ್ತದಿಂದ ಏಕಾಗ್ರತೆಯಿಂದ ಗಮನದಲ್ಲಿ ಸಿಕೊಳ್ಳುವ ಸ್ಥಿತಿ ಧ್ಯಾನ. ಧ್ಯಾನ ಯಾರು ಬೇಕಾದರೂ ಮಾಡಬಹುದು ಇದಕ್ಕೆ ವಯಸ್ಸಿನ ಜಾತಿ ಧರ್ಮದ ಲಿಂಗ ಬೇಧವಿಲ್ಲ ಧ್ಯಾನ ಶಕ್ತಿಗನುಗುಣವಾಗಿ ಎಷ್ಟು ಹೊತ್ತಾದರೂ ಮಾಡಬಹುದು. ಧ್ಯಾನಾಸಕ್ತರು ಪ್ರಾರಂಭಿಕ ಹಂತದಲ್ಲಿ ಹದಿನೈದು ನಿಮಿಷದಿಂದ ಇಪ್ಪತ್ತು ನಿಮಿಷಗಳವರೆಗೆ ಮಾಡಬೇಕು ನಂತರದ ದಿನಗಳಲ್ಲಿ ಕಾಲವನ್ನು ಹೆಚ್ಚಿಸಿಕೊಳ್ಳಬಹುದು.

ಧ್ಯಾನದಲ್ಲಿ ಪಾಲಿಸಬೇಕಾದ ಕೆಲವು ಪ್ರಮುಖ ನಿಯಮಗಳು

ಧ್ಯಾನ ಮಾಡಲು ಪ್ರಾರಂಭಿಸುವ ಮುನ್ನ ಖಾಲಿ ಹೊಟ್ಟೆಯಲ್ಲಿರಬೇಕು

ಮಲಮೂತ್ರ ವಿಸರ್ಜನೆ ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಬೇಕು

ಶುಭ್ರವಾದ ಹಾಗೂ ಸರಳವಾದ ಉಡುಪನ್ನು ಧರಿಸಬೇಕು

ಧ್ಯಾನಕ್ಕೆ ಮೊದಲು ಸ್ನಾನ ಮಾಡಿದರೆ ಒಳ್ಳೆಯದು

ನೆಲದ ಮೇಲೆ ಕುಳಿತು ಧ್ಯಾನ ಮಾಡಬಾರದು ಅದಕ್ಕಾಗಿ ಜಮಖಾನ ಉಪಯೋಗಿಸಬೇಕು

ಧ್ಯಾನದಿಂದ ಪಂಚೇಂದ್ರಿಯಗಳ ನಿಯಂತ್ರಣ :ಕಣ್ಣು ನೋಡುವುದಿಲ್ಲ, ಮೂಗು ವಾಸನೆಯನ್ನು ಗ್ರಹಿಸುವುದಿಲ್ಲ, ನಾಲಿಗೆ ಕಿವಿ ಚರ್ಮ ಇವುಗಳು ತಮ್ಮ ಕಾರ್ಯವನ್ನು ಕೆಲವು ಕಾಲ ತಗ್ಗಿಸುತ್ತದೆ. ಧ್ಯಾನವನ್ನು ನಿರಂತರವಾಗಿ ಮಾಡುತ್ತಿದ್ದರೆ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.

ಧ್ಯಾನ ಮಾಡುವಾಗ ಮಂತ್ರ ಪಠಣೆ ಬಹಳ ಮುಖ್ಯ, ಮೃತ್ಯುಂಜಯ ಮಹಾಮಂತ್ರ, ಗಾಯತ್ರಿ ಮಂತ್ರ, ಓಂಕಾರ ಬೀಜಾಕ್ಷರ ಮಂತ್ರ ಹೇಳಿಕೊಳ್ಳುವುದು ಸೂಕ್ತ ಹಾಗೂ ಶ್ರೇಷ್ಠ.

ಧ್ಯಾನ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ನಿರ್ಧಾರಗಳು

ಮಾವಿನ ಗಿಡ ನೆಟ್ಟ ಕೂಡಲೇ ಹಣ್ಣು ದೊರೆಯುವುದಿಲ್ಲ ಅದು ಕಾಯಿ ನೀಡಬೇಕಾದರೆ ಹಲವಾರು ವರ್ಷಗಳೇ ಬೇಕಾಗುತ್ತದೆ ಅದೇ ರೀತಿ ಧ್ಯಾನದಲ್ಲೂ ಕೂಡ ಕೂಡಲೇ ಫಲ ದೊರೆಯದಿದ್ದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ನಿರೀಕ್ಷಿತ ಫಲ ದೊರೆಯುತ್ತದೆ ಇದಕ್ಕೆ ಸಂದೇಹ ಬೇಡ

ಯಾವುದೇ ಕಾರಣಕ್ಕೂ ಧ್ಯಾನವನ್ನು ನಿಲ್ಲಿಸಬಾರದೆಂಬ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ತನ್ನ ಬಗ್ಗೆ ಸಂಪೂರ್ಣ ನಂಬಿಕೆ ಇರಬೇಕು ಸರಿಯಾದ ಸಮಯವನ್ನು ನಿರ್ಣಯ ಮಾಡಿಕೊಳ್ಳಬೇಕು ಮನೋಸಂಕಲ್ಪವಿರಬೇಕು. ಆಹಾರ ವಿಹಾರ ನಿದ್ದೆ ಎಂಬಂತೆ ಧ್ಯಾನವೂ ಕೂಡ ಒಂದು ನಿತ್ಯ ಕರ್ಮ ಎಂದು ತಿಳಿಯಬೇಕು.

ಧ್ಯಾನದ ಮೊದಲು ಯಾವ ರೀತಿ ಪೂರ್ವ ಸಿದ್ಧತೆ ಮಾಡಬೇಕು :

ಧ್ಯಾನ ಮಾಡುವಾಗ ಒತ್ತಡದಿಂದ ಮುಕ್ತರಾಗಿರಬೇಕು.

ಸಮಯವನ್ನು ಪ್ರಾರಂಭಿಕವಾಗಿ ನಿರ್ಧರಿಸಿಕೊಳ್ಳಬೇಕು

ಮನಸ್ಸು ಪ್ರಶಾಂತ ವಾಗಿರುವಂತೆ ನೋಡಿಕೊಳ್ಳಬೇಕು

ವಜ್ರಾಸನ ಮತ್ತು ಪದ್ಮಾಸನದಲ್ಲಿ ಕುಳಿತರೆ ಬಹಳ ಒಳ್ಳೆಯದು ಬೆನ್ನು ಕುತ್ತಿಗೆ ಹರವು ಎಲ್ಲವೂ ನೇರವಾಗಿರುವಂತೆ ಎಚ್ಚರ ವಹಿಸಬೇಕು

ಧ್ಯಾನದಲ್ಲಿ ಪ್ರಮುಖ ವಿಧಗಳು : ಓಂಕಾರ ಧ್ಯಾನ, ಮಂತ್ರ ಧ್ಯಾನ ,ವೃಕ್ಷಾಸನ ಧ್ಯಾನ

ಓಂಕಾರ ಧ್ಯಾನದಲ್ಲಿ ಪ್ರಾರಂಭಿಕವಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ಓಂಕಾರ ಮಂತ್ರವನ್ನು ನಿಧಾನವಾಗಿ ಹೇಳಿಕೊಳ್ಳಬೇಕು.

ಮಂತ್ರ ಧ್ಯಾನ ಮಾಡುವಾಗ ಪ್ರಾರಂಭಿಕವಾಗಿ ಎಡ ಹಸ್ತದ ಮೇಲೆ ಬಲ ಹಸ್ತವನ್ನು ಇಟ್ಟುಕೊಳ್ಳಬೇಕು ಕಣ್ಣು ಮುಚ್ಚಿಕೊಂಡು ಪರಸ್ಪರ ಹೆಬ್ಬೆರಳುಗಳ ಹಾಕಿಸುವಂತೆ ಮಾಡಬೇಕು ಹಸ್ತದಲ್ಲಿ ಅರಕ್ಷತೆಯನ್ನು ಇಟ್ಟುಕೊಂಡು ಓಂಕಾರ ಮಂತ್ರವನ್ನು ನೂರ ಎಂಟು ಬಾರಿ ಹೇಳಿಕೊಳ್ಳಬೇಕು .

ವೃಕ್ಷಾಸನ ಧ್ಯಾನದಲ್ಲಿ ನೇರವಾಗಿ ನಿಂತು ಬಲ ಪಾದವನ್ನು ಎಡಗಾಲಿನ ತೊಡೆಯ ಮೇಲೆ ಇರಿಸಿಕೊಳ್ಳಬೇಕು ಕಣ್ಣುಗಳನ್ನು ಮುಚ್ಚಿ ಉಸಿರಾಟದ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಧ್ಯಾನದಿಂದ ದೊರೆಯುವ ಪ್ರಯೋಜನಗಳು : ಮನಸ್ಸು ಶಾಂತಿಯುತ ವಾಗುತ್ತದೆ, ನಕಾರಾತ್ಮಕ ಚಿಂತನೆಗಳು ದೂರವಾಗುತ್ತದೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ, ನೆಮ್ಮದಿ ತಾಳ್ಮೆ ಸಹನೆ ಉಂಟಾಗುತ್ತದೆ. ದೈಹಿಕ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ಮನಸ್ಸು ಉಲ್ಲಾಸಗೊಳ್ಳುತ್ತದೆ ಗುರಿಯನ್ನು ಸಾಧಿಸಲು ಮಾರ್ಗವಾಗುತ್ತದೆ. ಒತ್ತಡದ ಜೀವನದಿಂದ ಮುಕ್ತಿ ದೊರೆಯುತ್ತದೆ .

ಲೇಖಕರು : ಜಿ ಎಸ್ ಪ್ರಕಾಶ್ ,ref book :ಪ್ರಾಣಾಯಾಮ

0 comments: