Saturday, October 28, 2023

ಕುದ್ರೋಳಿ ಕ್ಷೇತ್ರ ಮತ್ತು ಬಿಲ್ಲವರ ಅವಹೇಳನ ಮಾಡಿದರೆ ನ್ಯಾಯ ದೊರಕಿತೇ ?

ಪ್ರಸ್ತುತ ದಿನಗಳಲ್ಲಿ ಆಗುತ್ತಿರುವ ಬೆಳೆವಣಿಗೆಯಲ್ಲಿ ಕುದ್ರೋಳಿ ಕ್ಷೇತ್ರ ಮತ್ತು ಬಿಲ್ಲವರ ಅವಹೇಳನ ಮಾಡುವುದು ಸಾಮಾಜಿಕ ಜಾಲ ತಾಣದಲ್ಲಿ ಕಂಡು ಬಂದಿದೆ.ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಂಪನ್ನ ಗೊಂಡ ಮಂಗಳೂರು ದಸರಾವನ್ನು ಕಂಡು ಕೆಲ ನಂಜು ಜೀವಿಗಳ ಕಾಲಿನ ಬುಡಕ್ಕೆ ಬೆಂಕಿ ಬಿದ್ದ ಹಾಗೆ ವರ್ತಿಸುತ್ತಿದ್ದಾರೆ .ವಿವಿಧತೆಯಲ್ಲಿ ಏಕತೆ ,ಕೋಮುವಾದ ನಡುವೆ ಸಾಮರಸ್ಯದ ಬದುಕಿನ ಸಂದೇಶ ಸಾರಿ ಮೆರೆವಣಿಗೆಯ ಉದ್ದಕೂ ಎಲ್ಲ ಧರ್ಮದ ಜನರು ಹೆಜ್ಜೆ ಹಾಕಿದ್ದು ,ಕೆಲವರ ಕಣ್ಣು ಕುಕ್ಕಿದಂತಿದೆ . ಕುದ್ರೋಳಿ ಕ್ಷೇತ್ರದ ಬ್ರಹ್ಮ ಶ್ರೀ ನಾರಾಯಗುರುವಿನ ಹಿಂಬಾಲಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲು ಟೊಂಕ ಕಟ್ಟಿ ನಿಂತ ಜನರೇ ,

ಸೌಜನ್ಯಳಿಗೆ ನ್ಯಾಯ ಸಿಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ,ಎಂಬುವುದು ಕೂಡ ನಮ್ಮ ಆಗ್ರಹವಾಗಿದೆ .ಹೋರಾಟವನ್ನು ಹೋರಾಟ ಮಾಡುವ ವೇದಿಕೆಯಲ್ಲಿ ಮಾಡಬೇಕು ಹೊರತು ಸ್ವಯಂ ಪ್ರತಿಷ್ಠೆ ,ಸ್ವಾರ್ಥ ಮನೋಭಾವನೆ ,ಮತ್ತು ದುಷ್ಟರ ಕುಮ್ಮಕ್ಕಿನಿಂದ ಕುದ್ರೋಳಿ ಮತ್ತು ಬಿಲ್ಲವ ಸಮುದಾಯದ ವಿರುದ್ಧ ಹುಳಿ ಹಿಂಡಲು ನಿಮಗೆ ನಮ್ಮ ದಸರಾ ಬೇಕಾ ? ಕುದ್ರೋಳಿ ಸಮಿತಿಯವರ ನಿರ್ಧಾರ ,ಸ್ಥಳೀಯ ಜಿಲ್ಲಾಡಳಿತದ ಕ್ರಮ ನಿಮಗೆ ಕಹಿ ಎನಿಸಿದರೆ ,ನೀವು ಕಹಿಯನ್ನು ನುಂಗಿ ಜೀರ್ಣಿಸಿ ಕೊಳ್ಳಿ,ಅದನ್ನು ಬಿಟ್ಟು ಕೆಲ ಅಸ್ತಿತ್ವ ಇಲ್ಲದ ಮೇಲ್ವರ್ಗದ ಜನರನ್ನು ಚು ಬಿಟ್ಟು ,ಮಂಗಳೂರು ದಸರಾವನ್ನು ಕ್ಯಾಬರೆ ,ಇನ್ನಿತರ ಶಬ್ದ ಪ್ರಯೋಗ ಮಾಡಿ ತೀಟೆ ತೀರಿಸಿಕೊಂಡಿದ್ದೀರಾ ! ಕುದ್ರೋಳಿ ಕ್ಷೇತ್ರದ ಸಮಿತಿ ,ಬಿಲ್ಲವ ಸಂಘದ ಅಧ್ಯಕ್ಷರು ಮೌನವಾಗಿದ್ದಾರೆ ಎಂದು ಹಲ್ಲಿಗೆ ಕಡ್ಡಿ ಹಾಕಿ ನಸು ನಗಬಹುದು ,ಬಿಲ್ಲವ ಸಮುದಾಯ ರಕ್ತ ಬಿಸಿಯ ಯುವಕರ ಶೌರ್ಯ ಇತಿಹಾಸದ ಪುಟಗಳಲ್ಲಿ ಇನ್ನು ಇದೆ ನಮ್ಮ ಯುವಕರ ತಾಳ್ಮೆ ಪರೀಕ್ಷಿಸಿ ನಮ್ಮ ನಾರಾಯಗುರು ಸ್ಥಾಪಿಸಿದ ಕ್ಷೇತ್ರದ ಕೇಡು ಬಯಸಿದರೆ ಉತ್ತರ ನೀಡಲು ಬಿಲ್ಲವ ಸಮುದಾಯ ಬದ್ಧವಾಗಿದೆ .

Sunday, August 1, 2021

ನಟನಾ ಕ್ಷೇತ್ರದಲ್ಲಿ ಚಿಗುರುತ್ತಿರುವ ಯುವ ಪ್ರತಿಭೆ ಕಾಪು ತಾಲೂಕಿನ ಮೂಳುರಿನ ಚರಿಷ್ಮಾ ಪೂಜಾರಿ..
*ನಾವು ಇಂದು ಪರಿಚಯಿಸುವ ನಟನಾ ಕ್ಷೇತ್ರದಲ್ಲಿ ಚಿಗುರುತ್ತಿರುವ ಯುವ ಪ್ರತಿಭೆ ಕಾಪು ತಾಲೂಕಿನ ಮೂಳುರಿನ ಚರಿಷ್ಮಾ ಪೂಜಾರಿ...*






ಅದೆಷ್ಟೋ ಯುವ ಪ್ರತಿಭೆಗಳು ತುಳುನಾಡಿನಲ್ಲಿ ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುತ್ತಾರೆ ಅಂತೆಯೇ ತಾನು ಕೂಡ ನಟನೆಯ ಮೂಲಕ ಜನರ ಮನಸ್ಸಿಗೆ ಹತ್ತಿರ ವಾಗಬೇಕೆಂಬ ಉದ್ದೇಶದಿಂದ ನಟನಾ ಕ್ಷೇತ್ರದಲ್ಲಿ ಅಂಬೆಗಾಲು ಇಡುತ್ತಿರುವ ಯುವ ಪ್ರತಿಭೆ ಚರಿಷ್ಮಾ ಪೂಜಾರಿ.
 ಮೂಳೂರಿನ ಹರೀಶ್ ಪೂಜಾರಿ ಹಾಗೂ ಮೋಹಿನಿ ಪೂಜಾರ್ತಿ ಅವರ ಮಗಳಾದ ಇವರು ಪ್ರಸ್ತುತ ವಿಜಯ ಕಾಲೇಜು ನಲ್ಲಿ ಬಿಕಾಂ ಪದವಿ ಪಡೆದಿರುತ್ತಾರೆ. ಬಾಲ್ಯದಿಂದಲೇ ಎಲ್ಲಾ ಚಟುವಟಿಕೆಗಳಲ್ಲಿ ಮುಂದಿರುತ್ತಿದ್ದ ಇವರು ನಟನೆಗೆ ಬರಲು ಸಹಕಾರಿಯಾಗಿದೆ. 
ಇವರು ಈಗಾಗಲೇ ಫಿಲ್ಮ್ ಬಾಯ್ಸ್ ತಂಡದೊಂದಿಗೆ ಮೂಡಿಬಂದ  "ಪನಿಪನಿ" "rawdy baby" ಹಾಗೂ "ತುಳು friendship song " ಆಲ್ಬಂ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ   ನಟಿಸಿ ಸೈ ಏನಿಸಿಕೊಂಡಿದ್ದಾರೆ.
ಇನ್ನಷ್ಟು ಹೆಚ್ಚಿನ ಸಾಧನೆ ಇವರಿಂದ ಮೂಡಿಬರಲಿ ಎಲ್ಲ ದೈವ ದೇವರ ಆಶೀರ್ವಾದ ಇವರ ಮೇಲೆ ಇರಲಿ..ಎಂದು ಹಾರೈಸುವ ಟೀಮ್ ನಮ್ಮ ಬಿಲ್ಲವೆರ್

Monday, July 5, 2021

ಸ್ಯಾಂಡಲ್ವುಡ್ ನಲ್ಲಿ ಸದ್ದಿಲ್ಲದೆ ಪಾದರ್ಪಣೆ ಮಾಡಿರುವ  ಕರಾವಳಿಯ ಅಪೂರ್ವ ಕೋಟ್ಯಾನ್

 ಚಿತ್ರರಂಗ ಎನ್ನುವ ಬಣ್ಣದ ಲೋಕದಲ್ಲಿ ಅದೆಷ್ಟೋ ತುಳುನಾಡಿನ ಮಂದಿ ಸಾಧನೆ ಮಾಡಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಯುವ ಪ್ರತಿಭೆಯೆ ಅಪೂರ್ವ ಕೋಟ್ಯಾನ್..

ಬರಹ:-ಸುಪ್ರೀತಾ ಎಸ್ ಪೂಜಾರಿ

ಮೂಲತಃ ಮಂಗಳೂರಿನವರಾದ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಶಂಕರ್ ಹಾಗೂ ಸ್ವಾತಿ ದಂಪತಿಗಳ ಸುಪುತ್ರಿಯೆ ಈ ಯುವ ಪ್ರತಿಭೆ ಅಪೂರ್ವ ಕೋಟ್ಯಾನ್...ಇವರ ತಂದೆಯವರು ಮೈಸೂರಿನ ಪ್ರಜಾ ಸತ್ಯ ಎನ್ನುವ ವಾರ್ತಾಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ತಾಯಿ ಗೃಹಿಣಿಯಾಗಿದ್ದಾರೆ.ಬಾಲ್ಯದಿಂದಲೇ ಚಟುವಟಿಕೆಯಿಂದ ಇರುತ್ತಿದ್ದ ಇವರು ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂಬ ಕನಸು ನನಸಾಗುತ್ತಿದೆ.ಕರಾವಳಿಯ ಅದೆಷ್ಟೋ ಪ್ರತಿಭೆಗಳು ದೇಶಾದ್ಯಂತ ಹೆಸರು ಮಾಡುತ್ತಿದ್ದಾರೆ ಅವರಂತೆ ತಾನು ಬೆಳೆಯಬೇಕು ಎಂಬುದು ಇವರ ಕನಸು.ಓಂ ಪ್ರಕಾಶ್ ಅವರ ಪರಿ ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದು  ಪಂಚಮ ಅಧ್ಯಾಯ ಎನ್ನುವ ಸಿನಿಮಾ ಬಿಡುಗಡೆಗೆ ಸಿಧ್ಧವಾಗಿದೆ..ಧಾರಾವಾಹಿಯಲ್ಲಿ ಕೂಡಾ ನಟಿಸಲಿದ್ದು ಶೂಟಿಂಗ್ ಇನ್ನೆನು ಪ್ರಾರಂಭವಾಗಬೇಕಿದೆ.ಮುಂದೆ ಕೂಡಾ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಇವರಿಂದ ಮೂಡಿ ಬರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್








Thursday, July 1, 2021

 ವಿಶ್ವಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರ ಅಭ್ಯುದಯಕ್ಕಾಗಿ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು ವತಿಯಿಂದ ರೂಪಾಯಿ *ಒಂದುಲಕ್ಷ ವನ್ನು* ನೀಡಲಾಯಿತು

 *🔥ಬಿಲ್ಲವ ಬ್ರಿಗೇಡ್.ಕೇಂದ್ರೀಯ ಮಂಡಳಿ.ಮಂಗಳೂರು*🔥


🖋️ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನದಿಂದ ಮೃತಪಟ್ಟವರನ್ನು ಸದ್ಗತಿಒದಗಿಸುವ ಮಹತ್ಕಾರ್ಯ ಮಾಡುತ್ತಿರುವ ವಿಶ್ವಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರ ಅಭ್ಯುದಯಕ್ಕಾಗಿ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು ವತಿಯಿಂದ ರೂಪಾಯಿ *ಒಂದುಲಕ್ಷ ವನ್ನು*(1 lakh RS) ಧೇನಿಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತಿ 

 *ವಿಶ್ವ ಹಿಂದು ಪರಿಷದ್ ವಿಭಾಗ* ಕಾರ್ಯದರ್ಶಿ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಶರು ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ಬಜರಂಗದಳ ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಹಕಾರ್ಯದರ್ಶಿ ರವಿ, ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಹಾಗು ಪ್ರಮೋದ್ ಪಂಪವೆಲ್ ಉಪಸ್ಥಿತರಿದ್ದರು. *ಬಿಲ್ಲವ ಬ್ರಿಗೇಡ್* ನ ಅವಿನಾಶ್ ಸುವರ್ಣ ಸ್ಥಾಪಕ ಅಧ್ಯಕ್ಷರು , ಜೀವನ್ ಪೂಜಾರಿ ನೀರ್ ಮಾರ್ಗ ಅಧ್ಯಕ್ಷರು , ಕಿಶನ್ ಅಮೀನ್ ಕಾಟಿಪಳ್ಳ  ಕಾರ್ಯಾಧ್ಯಕ್ಷರು , ಶ್ರೀಮತಿ ಗಾಯತ್ರಿ - ಮಹಿಳಾ ಘಟಕ ಪ್ರಮುಖ್ ,ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ವಿವೇಕ್ ಅಮೀನ್, ಕಿಶೋರ್ ಸನಿಲ್ ಉಪಸ್ಥಿತರಿದ್ದರು.🙏🏻🙏🏻


Wednesday, June 30, 2021

ಸುಮಧುರ ಕಂಠದ ಗಾಯಕಿ ಗೀತಾ ಬೈಂದೂರ್

 #ಸುಮಧುರ ಕಂಠದ ಗಾಯಕಿ ಗೀತಾ ಬೈಂದೂರ್#



✍🏻ಶ್ರವಣ್ ಬಿ.ಸಿ.ರೋಡ್ 


ಸ.ರಿ.ಗ.ಮ.ಪ.ದ.ನಿ.ಸ..ಈ ಏಳು ಅಕ್ಷರಗಳು ಕೆಲವರ ಹೆಸರನ್ನು ಏಳೇಳು ಜನ್ಮಕ್ಕೂ ನೆನಪಿನಲ್ಲಿಡುವಂತೆ ಮಾಡುತ್ತದೆ. ತನ್ನ ಸುಮಧುರ ಕಂಠದ ಮೂಲಕ ಕರಾವಳಿಯ ಗಾಯನ ಲೋಕದಲ್ಲಿ ಸದ್ದು ಮಾಡುತ್ತಿರುವ ಇವರೇ ಗೀತಾ ಬೈಂದೂರ್.. ಬಾಲ್ಯಜೀವನದಲ್ಲಿ ಭಜನೆಯ ಮೂಲಕ ಹಾಡಲು ಆರಂಭಿಸಿದ ಇವರ. ನಂತರ ಶಾಲಾದಿನಗಳಲ್ಲಿ ವೇದಿಕೆ ಹತ್ತಿ ಹಾಡಲು ಪ್ರಾರಂಭಿಸಿದರು. ಇವರು ಗಾಯನಕ್ಕೆ ಮನಸೋತ ಗುರುಗಳು ಮುಂದೆ ಇವರನ್ನು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತಾರೆ.ಮುಂದೆ  ಕರ್ನಾಟಕ ಶಾಸ್ತ್ರೀಯ ಸಂಗೀತ 

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಒಂದು ವರ್ಷಗಳ ತರಬೇತಿಯನ್ನು ಪಡೆದು .ಜಿಲ್ಲೆಯ ಪ್ರಸ್ಥಿದ ಆರ್ಕೆಸ್ಟ್ರಾ ತಂಡದಲ್ಲಿ ಹಾಡಲು ಆವಕಾಶ ಸಿಗುತ್ತಾದೆ. ಬಂದ ಆವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಇವರು ಭಟ್ಕಳದ  'ಝೇಂಕಾರ್ ಮೆಲೋಡಿಸ್" ತಂಡದ ಮೂಲಕ ಹತ್ತಾರು ಊರುಗಳಲ್ಲಿ ಅನೇಕ ಕಾರ್ಯಕ್ರಮ ನಡೆಸುತ್ತಾರೆ.ಇದರೊಂದಿಗೆ "ಶ್ಯಾಡ್ಸ್ ಆರ್ಕೆಸ್ಟ್ರಾ "ತಂಡದ ಮುಖೇನ ತುಳು,ಹಿಂದಿ,ಕನ್ನಡ,ಮಲಯಾಳಂ, ಮರಾಠಿ, ಹಳೆಯ ಹಿಂದಿ ಹಾಡುಗಳನ್ನು ಕರಗತ ಮಾಡಿಕೊಂಡ ಇವರು ಎಲ್ಲಾ  ರೀತಿಯ ಹಾಡುಗಳಿಗೆ ಧ್ವನಿಯಾಗುವ  ಮೂಲಕ  ಸಂಗೀತ ಪ್ರೇಮಿಗಳ  ಮನಗೆದ್ದವರು. ಜೊತೆಗೆ ಆಕಾಶವಾಣಿ ಮತ್ತು  ಚಂದನ ವಾಹಿನಿಯ "ಮಧುರ ಮಧುರವೀ ಮಂಜುಳಗಾನ" ಕಾರ್ಯಕ್ರಮದಲೂ  ಸಂಗೀತದ ರಸದೌತಣ ನೀಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯ "ಹಾಡು ಕರ್ನಾಟಕ" ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅದ್ಧುತ ಧ್ವನಿಯ ಮೂಲಕ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶ್ವಸಿಯಾಗಿದ್ದಾರೆ.ಗೀತಾ ಬೈಂದೂರು ಈ ವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಉಡುಪಿ ಪರ್ಯಾಯ ಮಹೋತ್ಸವದಲ್ಲಿ. ಜನ್ನಾಡಿ ಮಹೋತ್ಸವದಲ್ಲಿ,ಶಿರಸಿ ನಾಟ್ಯ ರಿದಂ ಶಾಲೆ,ಸುರಭಿ ನೃತ್ಯ  ಕಲಾ ಶಾಲೆ,ರೋಟರಿ ಕಬ್ಲ್ ಬೈಂದೂರು, ಹೀಗೆ ಹಲಾವರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.ಇವರ ಈ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ.ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ..

ಟೀಮ್ ನಮ್ಮ ಬಿಲ್ಲವೆರ್.

ನಾಟಿ_ವಿದ್ಯೆಡು_ಪುಗರ್ತೆ_ಪಡೆಯಿನ_ಮುಜಿನ_ಬರ್ಕೆದ  ತಿಮ್ಮಪ್ಪ_ಅಂಚನೆರ್ 😍

 #ನಾಟಿ_ವಿದ್ಯೆಡು_ಪುಗರ್ತೆ_ಪಡೆಯಿನ_ಮುಜಿನ_ಬರ್ಕೆದ

#ತಿಮ್ಮಪ್ಪ_ಅಂಚನೆರ್ 😍


ಮೆರ್ನ ಪುದರ್ ತಿಮ್ಮಪ್ಪ ಅಂಚನ್, ದ.ಕ. ಜಿಲ್ಲೆದ ಇತ್ತೆದ ಬೆದ್ರ ತಾಲೂಕುದ ಪುಚ್ಚಮೊಗರು ಗ್ರಾಮದ ಮುಜಿನ ಬರ್ಕೆಡ್ ಮುದರ ಪೂಜಾರಿ ಬೊಕ್ಕ ಸುಂದರಿ ಅಂಚನ್ ದಂಪತಿಲೆನ ಐನ್'ನೇ ಮಗೆಯಾದ್ 1972ನೇ ಇಸವಿಡ್ ಪುಟ್ಟಿನ ಮೇರ್, ಕೈತಲ್ದ ಇರುವೈಲು ಶಾಲೆಡ್ 4ನೇ ಕ್ಲಾಸ್ ಮಟ್ಟ ಕಲ್ತ್'ದ್ ಅಮ್ಮೆರ್ ಮಲ್ತೊಂತಿ ನಾಟಿ ವೈದ್ಯೋಡು ಪುದರ್ ಪಡೆಯಿನ ವ್ಯಕ್ತಿ, 

    ರಾಜಂದೈವ ಕೊಡಮಂದಾಯೆ ನಂಬಿ ಇಲ್ಲ್ ಮುಜಿನ ಬರ್ಕೆದ ಪೆರ್ಮೆದ ಮಣ್ಣ್'ಡ್ ಹಿರಿಯ ಪೆರಿಯಾಕ್ಲೆ ಕಾಲಡ್ದ್ ನಾಟಿ ವೈದ್ಯ ಪದ್ಧತಿ ಇತ್ತ್ಂಡ್. ಅಜ್ಜೆರ್  ಐತಪ್ಪ ಪೂಜಾರಿ(ತಾಯಿಯ ತಂದೆ), ಲೋಕಯ್ಯ ಪೂಜಾರಿ(ತಂದೆಯ ತಂದೆ), ಅಮ್ಮೆರ್ ಮುದರ ಪೂಜಾರ್ಲೆಡ್ದ್  ಬೊಕ್ಕ ತಿಮ್ಮಪ್ಪ ಪೂಜಾರ್ಲು ಮರ್ದ್ ಅರೆದ್ ಹಿರಿಯಾಕ್ಲೆ ತಾದಿಡ್ ಇನಿಕ್ಲಾ ಕಾಯಕೊನು ಒರಿಪಾದೆರ್ ಪಂಡ ಬಿರುವೆರೆಗ್ ಪೆರ್ಮೆದ ಇಚಾರ...


   ಮುಜಿನ ಬರ್ಕೆ ಪಂಡ ಬಾರಿ ಪಿರಾಕ್'ದ ಕಾಲಡೇ ನಾರ್, ಬೇರ್, ಕೆತ್ತೆ, ತಪ್ಪುಲೆನ ಗುರ್ತ ಪೊಲಪು ಪತ್ತಿನ ಮಣ್ಣ್ಂದೆ ಪುಗಾರ್ತೆ ಇತ್ತ್ಂಡ್, ತಿಮ್ಮಪ್ಪೆರ್ ಆರೆನ ಅಮ್ಮೆರ್ ತತ್ತಿ ಕಾಲೊಗು ನಾಟಿ ಬೈದ್ಯ ಕಜ್ಜೊನು ಮುಂದರ್ತೊಂದು ಬತ್ತೆರ್, ಕಂಜಿ ಕೈಕಂಜಿಗ್ ಕಾರ್ ತುಂಡಾಂಡ, ಪಾರೆ ಜಾರ್‌ಂಡ ಮರ್ದ್ ಕೊರ್ಪೆರ್, ಅವ್ ಅತ್ತಂದೆ ಜನಮಾಣಿಲೆಗ್ ತರೆ ಕೂಜಲ್ ತಾಲುನೆಕ್ಕ್, ಬೆರು ಮೇಪುನೆಕ್ಕ್ ಎಣ್ಣೆ,  ಬೊಕ್ಕ ಬಂಜಿ ಬೇನೆಗ್ ಕಷಾಯ, ಆತೆ ಅತ್ತಂದೆ ವಾತದ ಸೀಕ್'ಗ್, ಮಂಜಲ್ ಸೀಕ್‌ ಇಂಚ ಅವ್ವೇತೋ ನಮುನೆ ನಮುನೆದ ಕಾಯಿಲೆಗ್ ಮರ್ದ್ ಅಡ್ಪೆರ್, 

      ತಾನ್ ಮಲ್ಪುನ ಈ ಸೇವೆಗ್ ಪಡಿ ಪಣವು ಕೇನುನ ಕ್ರಮ ಇಜ್ಜಿ, ದುಂಬುದ ಕಾಲೊಡು ಸೀಕ್ ಗುಣ ಆಂಡ ಒಂಜಿ ಕೋರಿಲ ದೈವೊಗು ಒಂಜಿ ಚೆಂಡ್ ಮಲ್ಲಿಗೆಲ ಕೊರ್ಪಿನ ಕ್ರಮ ಇತ್ತ್ಂಡ್... ಇತ್ತೆ ಜನಕುಲು ಕೈಯಾರೆ ಕೊರಿನ ಪಣವುನೇ ಪರ್ವತಂದ್ ಉದಾರವಾದ್ ಸ್ವೀಕಾರ ಮಲ್ಪುನ ಮಲ್ಲ ಮನಸ್ದ ತಿಮ್ಮಪ್ಪ ಪೂಜರ್ಲು, ಕಂಡ, ಬೆನ್ನಿ ಸಾಗೋಲಿ ಪಂದ್ ಎಲ್ಯ ಮಟ್ಟ್'ದ ಕೃಷಿ ಮಂತ್ತೋಂದು ಬೇನೆ ಬೆಸರ್‌ಡ್ ಬತ್ತಿನ ಜನಮಾನಿಲೆಗೆ ಕಣ್ಣನೀರ್ ಒಚ್ಚೊಂದು ಇಪ್ಪುನ ವ್ಯಕ್ತಿಯಾದ್, ಶಕ್ತಿಯಾದ್ ತಿಮ್ಮಪ್ಪನ್ನೆ ನನ ದುಂಬಗ್ಲ ಇಂಚೆನೆ ಈರ್ನ ನಾಟಿ ವೈದ್ಯ ಜೀವನ ಇಂಚೆನೆ ಉಜ್ವಲವಾದ್ ಇಪ್ಪಡ್ ಪಂದ್ ಮಣ್ಣ್'ಡ್ ನಿಲೆಯಾತಿ ದೈವ ದೇವೆರೆಡ ನಟ್ಟೋನುವ


ಇಚಾರ ದಾಲ ಕೇನ್ಯೆರೆ ಇತ್ತ್ಂಡ ಅರೆಡ ಪಾತೆರ್ಲೆ.

ತಿಮ್ಮಪ್ಪ ಅಂಚನ್ :- 9449355605 


                 ✍🏻ಸಂತೋಷ್ ಎಂ. ಪುಚ್ಚೇರಿ


ಬಡವರ ಕಷ್ಟಗಳಿಗೆ ಸ್ಪಂದಿಸುವ ಕಾರ್ಕಳದ ಯುವ ನಾಯಕ ಜೆ.ಸಿ.ಪ್ರಕಾಶ್ ಪೂಜಾರಿ

 ಮಾರ್ಗದರ್ಶನ ನೀಡುವವರು ಇಲ್ಲದಿದ್ದರೆ ಏನು? ಹೊಸ ಮಾರ್ಗ ಸೃಷ್ಟಿಸುವ ದೈರ್ಯ,ತಾಕತ್ತು ನಿನ್ನಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ ಎಂಬ ಮಾತಿನ ಪ್ರಕಾರ ಬೆಳೆದು ನಿಂತ ಬಿಲ್ಲವ ನಾಯಕ  ಜೆ.ಸಿ.ಪ್ರಕಾಶ್ ಪೂಜಾರಿ.

ಬರಹ:- ಸುಪ್ರೀತಾ ಎಸ್ ಪೂಜಾರಿ








ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಸಣ್ಣ ಗ್ರಾಮದಿಂದ ಬೆಳೆದು ಬಂದು ಇವರು ಮಾಡಿದ ಸಮಾಜ ಸೇವೆ ಅಪಾರ. 

ತಂದೆ ಕುರಗ ಪೂಜಾರಿ ಹಾಗೂ ತಾಯಿ ವಸಂತಿ 

ಕಡು ಬಡತನದಲ್ಲಿ ಬೆಳೆದು ಬಂದ ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ತೊಟ್ಟು ಹಲವಾರು ಸಮಾಜಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡು ತಾನು ಬೆಳೆದು ತನ್ನವರನ್ನು ಅವರ ಮಾರ್ಗದರ್ಶನದಂತೆ ಪ್ರೋತ್ಸಾಹಿಸಿ ಮುನ್ನಡೆಸುತ್ತಿದ್ದಾರೆ.

J.C.I ಕಾರ್ಕಳ ಇದರಲ್ಲಿ 2020 ರ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಊರಿನಲ್ಲಿ ಬಡವರಿಗೆ 3 ಮನೆಯನ್ನು ತಮ್ಮ ಸ್ವಂತ ದುಡಿಮೆಯಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.ಊರಿನಲ್ಲಿ ಬಸ್ಸ್ ಸ್ಟ್ಯಾಂಡ್ ಸೇರಿದಂತೆ  ಕೋರೋಣ ಸಮಯದಲ್ಲಿ 300ಕ್ಕು ಅಧಿಕ ಮನೆಗಳಿಗೆ ದಿನಸಿ ವಸ್ತುಗಳನ್ನು ವಿಸ್ತರಿಸಿದರು.ಹಾಗೂ ಬಡ ಮಕ್ಕಳಿಗೆ ಪ್ರತಿ ವರ್ಷ ಕೂಡ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.

ಇವರಿಂದ ಇನ್ನಷ್ಟು ಸಮಾಜಸೇವೆ ಮುಂದುವರಿಯಲಿ ಎಂದು ನಮ್ಮ ಆಶಯ .

ಟೀಂ ನಮ್ಮ ಬಿಲ್ಲವೇರ್