Saturday, January 27, 2018

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ನಿಗೂಢ ಸಾವಿಗೆ ಕೊನೆ ಎಂದು ?

ಮೂಡಬಿದ್ರೆಯ ಆಳ್ವಸ್ ಕಾಲೇಜ್ ವಿಧ್ಯಾರ್ಥಿನಿ ಕಾವ್ಯ ಸಾವಿನ ರಹಸ್ಯ ಇನ್ನೂ ನಿಗೂಡವಾಗಿ ಇರುವಾಗಲೇ ... ಆಳ್ವಾಸ್ ನಲ್ಲಿ ಮತ್ತೆರಡು ಆತ್ಮಹತ್ಯೆ ಪ್ರಕರಣಗಳು‌ ನಡೆದಿದೆ. ನಿನ್ನೆ ನಡೆದ ಸಾವು ಕೂಡ ನಿಗೂವಾಗಿದೆ.

ಬಿಲ್ಲವ ಸಮಾಜದ ವಿಧ್ಯಾರ್ಥಿನಿ ಕೆಲ ತಿಂಗಳ ಹಿಂದೆ ನಿಗೂಡವಾಗಿ ಸಾವನ್ನಪ್ಪಿದಳು. ಕೆಲವು ವಿದ್ಯಾರ್ಥಿ ಸಂಘಟನೆಗಳು ನೆಪ ಮಾತ್ರಕ್ಕೆ ಪ್ರತಿಭಟನೆಗಳನ್ನು ಮಾಡಿತ್ತು. ಕಾವ್ಯಳ ತಾಯಿಯು ಕಾವ್ಯ ಆತ್ಮಹತ್ಯೆ ಮಾಡಕೊಂಡಿಲ್ಲ .. ಕಾವ್ಯಳನ್ನು ಹತ್ಯೆ ಗೈದಿದ್ದಾರೆ ಎಂದು ನೇರ ಆರೋಪ ಮಾಡಿದ್ದರು. ಆಳ್ವಾಸ್ ಕಾಲೇಜಿನ ವರ್ತನೆ ಆ ತರಹನೆ ಇತ್ತು. ಅಂದು ಡ್ರಾಮ ಚೆನ್ನಾಗಿಯೆ ನಡೆಯಿತು. ಕರಾವಳಿಯಲ್ಲಿ ಸಣ್ಣ ಪ್ರಕರಣ ನಡೆದರು ಬೀದಿಗಿಳಿದು ಪ್ರತಿಭಟನೆ ಮಾಡುವ ಹಿಂದುಸಂಘಟನೆಗಳು ಪ್ರತಿಭಟನೆ ಮಾಡಲಿಲ್ಲ.. ಯುವಕರ ಹತ್ಯೆಯಾದಗ ಬಂದ್ ಗೆ ಕರೆಕೊಡುವ , ಶವ ಮೆರವಣಿಗೆ ಮಾಡುವ ಸಂಘಟನೆಗಳು ಕಾವ್ಯ ನಿಗೂಡ ಸಾವಿನ ತನಿಖೆಗಾಗಿ ಒಂದೆ ಒಂದು ಪ್ರತಿಭಟನೆಯನ್ನು ಮಾಡಿಲ್ಲ. ಬದಲಾಗಿ ಎಲ್ಲರೂ ಕಾವ್ಯನ ಮನೆಗೆ ಭೇಟಿ ಕೊಟ್ಟು ಹಿಂದುಗಡೆ ಬಾಗಿಲಿನಿಂದ ಆಳ್ವನ ಪರ ಬ್ಯಾಟ್ ಬಿಸಿದರು.

ಸಾವಿನ ಮನೆಯಲ್ಲಿ ರಾಜಕೀಯ ಮಾಡುವ, ಬಿಜೆಪಿ, ಕಾಂಗ್ರೆಸ್ ಈ ಪ್ರಕರಣದಲ್ಲಿ ಅಣ್ಣ ತಮ್ಮಂದಿರಂತೆ ಆರೋಪಿಗಳ ಪರ ಬ್ಯಾಟ್ ಬೀಸಿದರು. ಮೂಡಬಿದ್ರೆಯ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯಂತು ಕಾವ್ಯ ಮನೆಗೆ ಹೋಗಿ ಸಾಂತ್ವಾನ ಹೇಳಿ, ನಂತರ ಆಳ್ವನ ಪರವಾಗಿ ನಡೆದ ಬೆಂಬಲ ಸಬೆಯಲ್ಲೂ ಪಾಲ್ಗೋಂಡು ತಾನು ಎರಡು ತಲೆಯ ಹಾವು ಎಂದು ಸಾಭಿತುಪಡಿಸಿದ. ಕಾವ್ಯ ಅಮ್ಮನ ಕಣ್ಣಿರ ಕೂಗಿಗೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನಾಯಕರು ಸ್ಪಂದಿಸಲಿಲ್ಲ. ಎಲ್ಲರೂ ಆಳ್ವನ ಪರ ನಿಂತರು. ಕಾಣದ ಕೈಗಳ ಪ್ರಭಾವ ಎಷ್ಟಿತ್ತಂದರೆ ಮೂಡಬಿದ್ರೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಮಾಡದಂತೆ ತಡೆದರು.

ಕಾವ್ಯ ಪರ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಗಳಲ್ಲಿ ಸಂಘಪರಿವಾರದ ಯಾವ ನಾಯಕನು ವೇದಿಕೆ ಏರಿ ಭಾ಼ಷಣ ಮಾಡಲಿಲ್ವಲ. ಮೂಡಬಿದ್ರೆಯ ಪ್ರಭಾವಿ ವ್ಯಕ್ತಿ ಕಾವ್ಯ ಪರ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಕಾರ್ತಿಕ್ ರಾಜ್ ಪ್ರಕರಣದ ಸಂದರ್ಭದಲ್ಲಿ ಬೆಂಕಿ ಹಚ್ಚುವ ಬಾಷಣ ಮಾಡಿದ್ದ ಸಂಸದರು ಮೌನಕ್ಕೆ ಶರಣದರು. ಮೂಡಬಿದ್ರೆಯ ಜೆಡಿಎಸ್ ಮುಖಂಡ ಪ್ರಭಾವಿ ವ್ಯಕ್ತಿಯ ರಕ್ಷಣೆಗೆ ನಿಂತರು. ಕಾಂಗ್ರೆಸ್ ಸಚಿವರು ಜಿಲ್ಲಾ ಉಸ್ತುವರಿ ಮಂತ್ರಿಗಳು ಕಾವ್ಯಳ ನಿಗೂಡ ಸಾವು ಪ್ರಕರಣವನ್ನು ಆತ್ಮಹತ್ಯೆ ಎಂದು ಸಾಭಿತು ಮಾಡಿಸುವ ತನಕ ನಿದ್ದೆ ಮಾಡಲಿಲ್ಲ. ಕೊನೆಗೆ ಆತ್ಮಹತ್ಯೆ ಎಂದು ಸಾಭಿತು ಮಾಡಿದರು. ಅಷ್ಟೋತ್ತಿಗೆ ಕಾವ್ಯಳದು ಹತ್ಯೆ ಎಂದು ಇಡೀ ಮೂಡಬಿದ್ರೆ ಮಾತನಾಡುತ್ತಿತ್ತು. ಗೃಹ ಸಚಿವ ರಾಮಲಿಂಗರೆಡ್ಡಿ ಬಂದರು ..ಇವರು ಕಾವ್ಯಾ ಪ್ರಕರಣವನ್ನು ಪ್ರಾಮಾಣಿಕ ತನಿಖೆಗೆ ಒಪ್ಪಿಸುವ ಬದಲಾಗಿ. ಪ್ರಭಾವಿ ವ್ಯಕ್ತಿಯ ಜೊತೆ ಕುಳಿತು ಪಾರ್ಟಿ ಮಾಡಿ ಹೋದರು.

ನ್ಯಾಯ ಮರೀಚಿಕೆಯಾಯಿತು. ಬಡವರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಸಾಭಿತಾಯಿತು. ದುಡ್ಡು ಚೆಲ್ಲಿ ಆಟವಾಡುತ್ತಿರುವ ಪ್ರಭಾವಿ ವ್ಯಕ್ತಿಗಳ ಮುಂದೆ ಕಾವ್ಯ ಹೆತ್ತವರ ಕಣ್ಣೀರು ಕಣ್ಣೀರಾಗಿಯೇ ಉಳಿಯಿತು.

ಕಾವ್ಯ ಪ್ರಕರಣ ಜೀವಂತವಾಗಿರುವಾಗಲೇ ಆಳ್ವಾಸ್ ಕಾಲೇಜಿನಲ್ಲಿ ಮತ್ತೆರಡು ನಿಗೂಡ ಆತ್ಮಹತ್ಯೆ ಪ್ರಕರಣಗಳು ನಡೆದಿದೆ. ಆದರೆ ಯಾವ ವಿದ್ಯಾರ್ಥಿ ಸಂಘಟನೆಗಳು ಇದರ ವಿರುದ್ದ ಧ್ವನಿ ಎತ್ತುತ್ತಿಲ್ಲ. ದುಡ್ಡು ಎಲ್ಲರನ್ನು ಮೌನವಾಗಿಸಿದೆ. ಮೂಡಬಿದ್ರೆಯಲ್ಲಿ ನಡೆಯುತ್ತಿರುವ ನಿಗೂಡ ಸಾವುಗಳು ಕೊನೆಯಾಗಬೇಕಾದರೆ.

ಸೌಜನ್ಯ ಪರ ನಡೆದ ಹೊರಾಟಗಳಂತೆ ಮೂಡಬಿದ್ರೆಯಲ್ಲೂ ನಡೆಯಬೇಕು. ಸೌಜನ್ಯ ಹತ್ಯೆಯ ವಿರುದ್ದ ನಡೆದ ಪ್ರತಿಭಟನೆ ಒಂದು ಇತಿಹಾಸವಾಯಿತು.ಪ್ರತಿಭಟನೆ ಅಲ್ಲಿಯ ಪ್ರಭಾವಿ ವ್ಯಕ್ತಿಗಳ ನಿದ್ದೆಗೆಡಿಸಿತು. ಸೌಜನ್ಯ ಸಾವಿಗೆ ನ್ಯಾಯ ಸಿಗಲಿಲ್ಲ ಆದರೆ ಸೌಜನ್ಯ ಪರ ನ್ಯಾಯಕ್ಕಾಗಿ ನಿರಂತರ ನಡೆದ ಹೊರಾಟಗಳು ಧರ್ಮಸ್ಥಳದ ಸುತ್ತ ಮುತ್ತ ಆಗುತ್ತಿದ್ದ ನಿಗೂಡ ಸಾವುಗಳಿಗೆ ಬ್ರೇಕ್ ಹಾಕಿತು. ಇದೇ ರೀತಿಯ ಪ್ರತಿಭಟನೆಗಳು ಮೂಡಬಿದ್ರೆಯಲ್ಲೂ ನಡೆದರೆ ಇಲ್ಲಿ ನಡೆಯುತ್ತಿರುವ ನಿಗೂಡ ಸಾವುಗಳಿಗೆ ಬ್ರೇಕ್ ಹಾಕಬಹುದು.

0 comments: