Friday, February 8, 2019

೧೮ ರೂಪಾಯಿ ಸಂಬಳಕ್ಕೆ ಪಾತ್ರೆ ತೊಳೆಯುತ್ತಿದ್ದ ಉಡುಪಿಯ ಪೂಜಾರಿಯವರು ಇಂದು ಕೋಟ್ಯಾಂತರ ವಹಿವಾಟು ಮಾಡುವ ಹೋಟೆಲಿನ ಮಾಲೀಕರಾದ ಕಥೆ!!

೧೮ ರೂಪಾಯಿ ಸಂಬಳಕ್ಕೆ ಪಾತ್ರೆ ತೊಳೆಯುತ್ತಿದ್ದ ಉಡುಪಿಯ ಪೂಜಾರಿಯವರು ಇಂದು ಕೋಟ್ಯಾಂತರ ವಹಿವಾಟು ಮಾಡುವ ಹೋಟೆಲಿನ ಮಾಲೀಕರಾದ ಕಥೆ!! ಚಿಕ್ಕವನಿದ್ದಾಗ ಚಿಕ್ಕಚಿಕ್ಕ ವಿಷಯಗಳಿಗಾಗಿ ಮನೆಯವರಿಂದಲೇ ಕಿರುಕುಳ ಎದುರಿಸಿದ್ದ ಹುಡುಗ. ಇವತ್ತು ಜಯರಾಮ್​ ” ಸಾಗರ್ ರತ್ನ” ಅನ್ನುವ ಉದ್ಯಮವೊಂದರ ಮಾಲೀಕ. ಸ್ಫೂರ್ತಿದಾಯಕ ಕಥೆ.ಜಯರಾಮ್ ಬನಾನ್ ಹುಟ್ಟಿದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ. ಸಣ್ಣ ವಯಸ್ಸಿನಲ್ಲಿ ಹೆದರಿಕೆ, ಗೊಂದಲದ ಸ್ವಭಾವ ಹೊಂದಿದದ ಜಯರಾಮ್ ಅಪ್ಪನ ಕೈಯಿಂದ ಯಾವಾಗಲು ಏಟು ಬೀಳುತ್ತಿತ್ತು. 13 ನೇ ವಯಸ್ಸಿನಲ್ಲಿ, ಜಯರಾಮ್ ರವರು ಪರೀಕ್ಷೆಯಲ್ಲಿ ಫೇಲ್ ಆದಾಗ ತನ್ನ ತಂದೆಯ ಹಣದಿಂದ ಸ್ವಲ್ಪ ಹಣವನ್ನು ಕದ್ದು ಮನೆಯಿಂದ ಹೋಗಿದ್ದರು.

ಆಗ ಜಯರಾಮ್ ಕಾರ್ಕಳದಿಂದ ಮುಂಬೈಗೆ ಬಸ್ ಹತ್ತಿದರು. ಅವರು ಮುಂಬೈನ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದಾಗ. ಅಲ್ಲಿ ಉಡುಪಿಯಿಂದ ಬಂದ ಗ್ರಾಮಸ್ಥನೊಬ್ಬ ಅವರನ್ನು ನವಿ ಮುಂಬಯಿಯ ಪನ್ವೇಲ್ನಲ್ಲಿ ಹಿಂದೂಸ್ತಾನ್ ಆರ್ಗ್ಯಾನಿಕ್ ಕೆಮಿಕಲ್ಸ್ (HOC) ಕ್ಯಾಂಟೀನ್ಗೆ ಕರೆದೊಯ್ಯಲಾಯಿತು. ಅಲ್ಲಿ ಪಾತ್ರೆ ತೊಳೆಯುವ ಮೂಲಕ ಜೀವನ ಆರಂಭಿಸಿದರು. ಅಲ್ಲಿ ಅವರಿಗೆ ತಿಂಗಳಿಗೆ 18 ರೂಪಾಯಿಗಳು ಸಿಗುತ್ತಿತ್ತು. ಕಠಿಣ ಕೆಲಸ ಮಾಡಿದರೂ ಕ್ಯಾಂಟೀನ್ ಮಾಲೀಕ ಜಯರಾಮ್​ಗೆ ಚಪ್ಪಲಿಯಲ್ಲಿ ಹೊಡೆದ ದಿನಗಳು ಕೂಡ ಕಂಡಿದ್ದರು. ಮುಂಬೈ ಅನ್ನುವ ಮಹಾನಗರಿಯಲ್ಲಿ ಕಠಿಣ ದಿನಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಿ ನಿಧಾನವಾಗಿ ಹೊಟೇಲ್​ನಲ್ಲಿ ವೇಟರ್ ಆಗಿ ಬೆಳದು. ನಂತರ ಮ್ಯಾನೇಜರ್ ಆದರು. ಈ ಎಲ್ಲಾ ಅನುಭವಗಳು ಅವರಲ್ಲಿ ಹಲವು ಬದಲಾವಣೆಗೆ ಕಾರಣವಾಯಿತು.

ನಾನು ಹೀಗೆ ಇರಬಾರದು ಅನ್ನೋದನ್ನ ನಿರ್ಧಾರ ಮಾಡಿಬಿಟ್ಟರು. ಹೀಗೆ ಮುಂಬೈನಲ್ಲಿ ದಕ್ಷಿಣ ಭಾರತದ ಹೊಟೇಲ್ ಒಂದನ್ನು ಆರಂಭಿಸುವ ಕನಸು ಅವರಲ್ಲಿ ಹುಟ್ಟಿತು. ಆ ಸಂದರ್ಭದಲ್ಲಿ ದೆಹಲಿಯಲ್ಲಿ ದೋಸೆಗಳು ಹೆಚ್ಚು ದುಬಾರಿ ಆಗಿತ್ತು. ಅತ್ಯುತ್ತಮ ಬೆಲೆಗೆ ಉತ್ತಮ ಕ್ವಾಲಿಟಿ ದೋಸೆಗಳನ್ನು ನೀಡುವ ನಿರ್ಧಾರ ಜಯರಾಮ್ ಮಾಡಿಯೇ ಬಿಟ್ಟರು. ಗ್ರಾಹಕರ ತೃಪ್ತಿ ಜೊತೆಗೆ ಅತ್ಯುತ್ತಮ ಕ್ವಾಲಿಟಿ ಕೊಡುವ ಉದ್ದೇಶದಿಂದ 4 ಡಿಸೆಂಬರ್ 1986 ರಂದು ದೆಹಲಿಯ ಡಿಫೆನ್ಸ್ ಕಾಲೋನಿ ಮಾರುಕಟ್ಟೆಯಲ್ಲಿ ತನ್ನ ಮೊದಲ ರೆಸ್ಟಾರೆಂಟ್ ಅನ್ನು 5,000 ರೂಪಾಯಿಗಳ ಉಳಿತಾಯದೊಂದಿಗೆ ತೆರೆಯಲಾಯಿತು. ತನ್ನ ಅಂಗಡಿಗೆ “ಸಾಗರ್” ಅಂತ ಹೆಸರಿಟ್ಟರು. ಅವರ ಕನಸು ನನಸಾಗಲು ಸಾಕಷ್ಟು ಸಮಯ ಹಿಡಿಯಿತು. ಆಹಾರದ ಉತ್ತಮ ಗುಣಮಟ್ಟ, ಕೈಗೆಟುಕುವ ದರಗಳು ಮತ್ತು ವೈಯಕ್ತೀಕರಿಸಿದ ಸೇವೆಯು ಸಾಗರ್ ಅನ್ನು ಎತ್ತಿಹಿಡಿಯಿತು.

ಅಷ್ಟಕ್ಕೇ ನಿಲ್ಲದ ಜಯರಾಮ್ 4 ವರ್ಷಗಳ ಬಳಿಕ “ಲೋಧಿ” ಅನ್ನುವ ಹೈ ಕ್ಲಾಸ್ ಹೊಟೇಲ್ ಅನ್ನು ಆರಂಭಿಸಿದರು. ತನ್ನ ಹಳೆಯ ಹೊಟೇಲ್​ನಲ್ಲಿದ್ದ ಮೆನುವನ್ನೇ ಇಲ್ಲಿ ಬಳಸಿದ್ದರು. ಆದ್ರೆ ದರದಲ್ಲಿ ಶೇಕಡಾ 20ರಷ್ಟು ಹೆಚ್ಚಿತ್ತು. ನಂತರ ದೆಹಲಿಯಲ್ಲೇ ಜಯರಾಮ್ ರವರ ಸಾಂಬರ್ ಶ್ರೇಷ್ಟತೆಯನ್ನು ಪಡೆಯಿತು. ಜಯರಾಮ್ ದೆಹಲಿಯಲ್ಲೇ ಮತ್ತೊಂದು ಹೊಟೇಲ್ ಆರಂಭಿಸಿದ್ರು. ಅದಕ್ಕೆ “ ಸಾಗರ್ ರತ್ನ” ಎಂದು ಹೆಸರಿಟ್ಟರು. ಈಗ “ ಸಾಗರ್ ರತ್ನ”ದ ಪ್ರಸಿದ್ಧಿ ಎಲ್ಲಾ ಕಡೆ ವ್ಯಾಪಿಸಿದೆ.ಜನರ ಸೇವೆಗಾಗಿ ರೆಸ್ಟೋರೆಂಟ್​ಗಳನ್ನು ಆರಂಭಿಸಿದ್ದ ಜಯರಾಮ್ನಾ ಪ್ರತಿದಿನ ಮನೆಗೆ ಹೋಗುವುದು ರಾತ್ರಿ 9 ಗಂಟೆಗೆ. ಮಧ್ಯರಾತ್ರಿಯಲ್ಲಿ ಮತ್ತೆ ಬಂದು ಎಲ್ಲಾ ಔಟ್​ಲೆಟ್​ಗಳಿಗೆ ತೆರಳಿ ಸ್ವತಃ ತಾವೇ ಪರೀಕ್ಷೆ ನಡೆಸುತ್ತಿದ್ದರು. ಹೀಗೆ ಹೊಸದಿಲ್ಲಿ, ಪಂಜಾಬ್, ಚಂಡೀಗಢ ಸೇರಿದಂತೆ ಉತ್ತರ ಭಾರತದಾದ್ಯಂತ 90 ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಿದರು. ಅಷ್ಟೇ ಅಲ್ಲ ಉತ್ತರ ಅಮೆರಿಕಾ, ಕೆನಾಡಾ, ಬ್ಯಾಂಕಾಕ್ ಮತ್ತು ಸಿಂಗಪೂರಗಳಲ್ಲೂ ಜಯರಾಮ್ ಹುಟುಹಾಕಿದ “ಸಾಗರ್ ರತ್ನ”ದ ಶಾಖೆಗಳಿವೆ. ಬೆಂಗಳೂರು ಹಾಗೂ ಹುಬ್ಬಳ್ಳಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಇನ್ನೂ 75 ರೆಸ್ಟೋರೆಂಟ್‌ಗಳನ್ನು ಆರಂಭಿಸಲಾಗಿದೆ.ಹೀಗೆ ದೈರ್ಯ ಮತ್ತು ಶ್ರದ್ಧೆಯ ಜೊತೆಗೆ ಕಠಿಣ ಪರಿಶ್ರಮದಿಂದ ಜಯರಾಮ್ ಇವತ್ತು ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಜಯರಾಮ್ ಬದುಕಿನ ಕಥೆ ಛಲ, ದೈರ್ಯ, ಶ್ರದ್ಧೆ ಮತ್ತು ಆತ್ಮ ವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ.

1 comment:

  1. ಅತ್ಯಂತ ಕೆಳ ಹಂತದಿಂದ ಈ ಮಟ್ಟದ ಬೆಳವಣಿಗೆ ಸ್ಪೂರ್ತಿದಾಯಕ!.

    ReplyDelete