Saturday, March 30, 2019

ಬಿಲ್ಲವ ಸಮಾಜದ 75% ಹುಡುಗರ ನಿಜ ಕತೆಯನ್ನು ಅರಿಯಲು ಇದನ್ನು ಓದಿ

ಸ್ನೇಹಿತರೇ,ನಾನು ಅಕ್ಷತ್ ಸುವರ್ಣ ಪಡುಮನೆ ಮಾಳ, ಕಾರ್ಕಳ. ನಾನೂ ಬಿಲ್ಲವ ಸಮೂದಾಯದ ಯುವಕ.ನಾನೂ ಸಂಘದ ಸಿದ್ದಾಂತಗಳಿಗೆ ಮಣಿದು 2011ರಿಂದ 2016ರ ವರೆಗೆ ಬಜರಂಗದಳದ ಸಾಮಾನ್ಯ ಕಾರ್ಯಕರ್ತನಿಂದ,ಮಾಳ ಘಟಕ ಸಂಚಾಲಕನಾಗಿ,ಬಜಗೋಳಿ ವಲಯ ಸಹಸಂಚಾಲಕನಾಗಿ,ಬಜಗೋಳಿವಲಯ ಸಂಚಾಲಕನಾಗಿ ಬಜರಂಗದಳವರೇ ನನ್ನ ಉಸಿರಾಗಿಸಿ ಹಲವಾರು ನಾಯಕರನ್ನು ಆದರ್ಶವಾಗಿಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಸಂಘಟನಗೆ ಯಾವೂದೇ ಧಕ್ಕೆಯಾಗದಂತೆ ನಿಬಾಯಿಸಿದ್ದೆನೆ.

ಬಜರಂಗದಳದ *"ಸೇವಾ ಸಂಸ್ಕಾರ ಸುರಕ್ಷಾ"* ಧ್ಯೇಯದಂತೆ *ಸೇವೆ* ಯ ಕಡೆ ಹೆಚ್ಚು ಒಲವು ಹೊಂದಿದವನಾಗಿರುತ್ತೆನೆ.ಅದರಂತೆ ಅಶಕ್ತರಿಗೆ ನೆರವು,ರಕ್ತದಾನ ಹಾಗೂ ಬಜರಂಗದಳ ಕಾರ್ಕಳ ಪ್ರಖಂಡದ ಇತಿಹಾಸದಲ್ಲೆ ಹೊಸ ಪ್ರಯತ್ನ ಬಡಕುಟುಂಬಕ್ಕೆ ಮನೆ ಕಟ್ಟಿ ಕೊಡುವ *ಆಸರೆ* ಮನೆ ನಿರ್ಮಾಣ ಮಾಡಿಕೊಡುವಲ್ಲಿ ನಾನು ಪಟ್ಟ ಕಷ್ಟ ಸಾಮಾನ್ಯವಾದುದು ಏನಲ್ಲ.

*ಆಸರೆ* ಯೋಜನೆ ಹಲವಾರು ದಾನಿಗಳ,ವಾಟ್ಸಪ್ ಸಹಾಯಕ ಗ್ರೂಪ್ಗಳ ಹಾಗೂ ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಯಶಸ್ವಿಯಾಗಿ‌ಸಾಗುತ್ತಿರುವಾಗ ಸಂಘಟನೆಯವರು ನಮ್ಮ ಕೈ ಹಿಡಿಯದೇ ಇರುವಾಗ ಹಠಕ್ಕೆ ಬಿದ್ದು ನಾನು ಕೊನೆಗೆ ಸಾಲ ಮಾಡಿ,ನನ್ನ ಹಾಗೂ ಗೆಳೆಯ ಮತ್ತು ಅವರ ಸಹೋದರಿಯ ಚಿನ್ನ ಅಡವಿಟ್ಟು ಯೋಜನೆ ಪೂರ್ಣಗೊಳಿಸಿ ಜನವರಿ 3 2016ರಂದು ಹಲವಾರು ಗಣ್ಯರ ಉಪಸ್ತಿತಿಯಲ್ಲಿ ಗೃಹಪ್ರವೇಶ ಮಾಡಿ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿರುತ್ತೆವೆ.

ಆ ದಿನದಿಂದ ನಾನು ಮಾನಸಿಕವಾಗಿ ನೊಂದು ಎಲ್ಲ ರೀತಿಯ ಸಂಘ ಸಂಸ್ಥೆಗಳಿಂದ ದೂರವಿದ್ದೆನೆ. ಯಾಕಂದರೆ ಇಂದಿನವರೆಗೂ ನನ್ನ ಮನೆಯ ಕೆಲಸ ಪೂರ್ಣವಾಗಿಲ್ಲ ಸುಮಾರು ಹತ್ತುವರುಷಗಳಿಂದ ನಾನು ನನ್ನ ಕನಸಿನ ಮನೆ ನಿರ್ಮಾಣ ಮಾಡುವಲ್ಲಿ ಕನಸಾಗಿಯೇ ಉಳಿಸಿ ಸಾಲದ ಸುಳಿಯಲ್ಲಿ ಸಿಲುಕಿ ಪಡಬಾರದ ಕಷ್ಟ ಪಡುತ್ತಿದ್ದೆನೆ.ನಾನು ಮಾಡುತ್ತಿರುವ ಸಣ್ಣ ವ್ಯವಹಾರ ಹಾಗೂ ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲನಾಗಿರುತ್ತೆನೆ.ಬದುಕು ಶೋಚನೀಯ ಸ್ತಿತಿಯಲ್ಲಿದೆ.ಆದ್ದರಿಂದ ನಾನೂ ನನ್ನ ಮನೆ,ತಂಗಿಯ ಮದುವೆ ಹಾಗೂ ನನ್ನ ವಯಕ್ತಿಕ ಜೀವನ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವಾಗ ನನಗೆ ಪ್ರಪಂಚನೆ ಕತ್ತಲೆಯಾಗಿರುತ್ತದೆ.ಆ ಸಂಧರ್ಭದಲ್ಲಿ ನಾನೂ ಅಶಕ್ತರಿಗೆ ಬೇರೆಯವರಿಂದ ಸಂಘ ಸಂಸ್ಥೆಗಳಿಂದ ಬೇಡಿ ಸಹಾಯ ಯಾಚಿಸುತ್ತಿದ್ದ ನಾನೂ ಇಂದು ನನಗೆ ವಯಕ್ತಿಕವಾಗಿ ಸಹಾಯ ಮಾಡಿ ಎಂದು ಯಾಚಿಸಲು ಹೋದಾಗ ಸಹಾಯಗಳು ಸಿಗಲಿಲ್ಲ, ಬರೀ ಆಶ್ವಾಸನೆಗಳೇ ಸಿಕ್ಕಿವೆ.

ಸಾಲ ಸೌಲಭ್ಯ ಪಡೆಯಲು ನನ್ನ ಬಳಿ ಯಾವೂದೇ ಪೂರಕ ದಾಖಲೆಗಳು ಇಲ್ಲ.ಏನೋ ಒಂದು ಬಹು‌ದೊಡ್ಡ ನಿರೀಕ್ಷೆಯಲ್ಲಿ ಬೆಳಕನ್ನು ನೀಡುವರು ಎಂದು ನನ್ನ ವ್ಯವಹಾರದ ದಾಖಲೆಗಳನ್ನು ಕೊಟ್ಟು ಸಾಲದ ರೂಪದಲ್ಲಿ ಸಹಾಯ ಕೇಳಲೂ ಹಲವಾರು ಪ್ರಯತ್ನ ಪಟ್ಟೆ. ಬರೀ ಆಶ್ವಾಸನೆಗಳೇ ಸಿಕ್ಕಿವೆ.ಸಹಾಯ ಬೇಕಾದ ಅನಿವಾರ್ಯ ಪರಿಸ್ತಿತಿಯಲ್ಲಿ ನನಗೆ ಸಹಾಯ ಸಿಗಲಿಲ್ಲ.

ಈ ಸಂಧರ್ಬದಲ್ಲಿ ನಾನು ಪರಿಚಯ ಇರುವ ಹಲವಾರು ನಾಯಕರನ್ನು ಭೆಟಿಯಾಗಿ ನನ್ನ ಕಷ್ಟಗಳನ್ನು ಹಂಚಿಕೊಂಡಿರುತ್ತೆನೆ.ಆದರೂ ಇಲ್ಲಿವರೆಗೂ ಯಾರು ನನ್ನ ನೆರವಿಗೆ ಬಂದಿರೊದಿಲ್ಲ. ದಿಕ್ಕೆ ತೋಚದ ಈ ಸಮಯದಲ್ಲಿ ಕೊನೆ ಪ್ರಯತ್ನ ಎಂಬಂತೆ ಹಿಂದೆ ಬಜರಂಗದಳ ನಾಯಕರಾಗಿದ್ದ *ಮಹೇಂದ್ರ ಕುಮಾರ್* ಅವರನ್ನು ಸಂಪರ್ಕಿಸಿದೆ.ಯಾಕೆಂದರೇ ಅವರು ಸಂಘಟನೆ ಬಿಡುವ ಸಮಯದಲ್ಲಿ ನಾನು ಸಂಘಟನೆಗೆ ಬಂದವನು.ಅವರ ಸಂಪರ್ಕ ಇರಲಿಲ್ಲ.ಆದರೇ ಅವರ ಬಗ್ಗೆ ಎಲ್ಲರೂ ಇತ್ತೀಚೆಗೆ ಬಂದವರು ಹಾಗೇ ಹೀಗೆ ಎಂದು ಹೇಳೋದು ಕೇಳಲ್ಪಟ್ಟಿದ್ದೆ.ಕೆಲವರು ಒಳ್ಳೆ ಮಾತು ಆಡೋದು ಕೇಳಿದ್ದೆ.ನನಗೇನು ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ.ಆದರೇ ಅವರೊಬ್ಬ ಸಾಮಾನ್ಯ ನಾಯಕನಲ್ಲ ಕಷ್ಟಗಳಿಗೆ ಖಂಡಿತ ದನಿಯಾಗುವವರು ಎಂದು ಕೇಳಿದ್ದೆ.ಆ ಒಂದು ಕಾರಣಕ್ಕೆ ನಾನೂ ಏನೋ ಒಂದು ಆಶಾಕಿರಣವಿಟ್ಟು ಅವರನ್ನು ಸಂಪರ್ಕಿಸಿದೆ. ಸಂಪರ್ಕಿಸಿ ನನ್ನೆಲ್ಲ ಕಷ್ಟಗಳನ್ನ ಅವರ ಬಳಿ ಹೇಳಿದೆ.ಆಗ ಅವರು *" ಅಕ್ಷತ್, ನಾನೇ ಕಷ್ಟದಲ್ಲಿರೋ ಮನುಷ್ಯ ನನಗೆ ಈ ತರ ಸಹಾಯ ಮಾಡುವ ಶಕ್ತಿ ನನ್ನ ಬಳಿ ಇಲ್ಲ ಆದರೇ ನಾನೂ ಬೇರೆಯವರನ್ನು ಸಂಪರ್ಕಿಸಿ ಸಹಾಯ ಮಾಡುತ್ತೆನೆ.ಯಾಕಂದರೇ ನಿನ್ನ ಕಷ್ಟ ನನಗೆ ಅರ್ಥವಾಯ್ತು,ಸಂಜೆ ನಾನು ವಾಪಸ್ ಕರೆ ಮಾಡುತ್ತೆನೆ."* ಎಂದು ಹೇಳಿದವರು ಸಂಜೆ ಕರೆ ಮಾಡಿ 2ದಿನದಲ್ಲಿ ಬೆಂಗಳೂರಿಗೆ ಬಾ ಎಂದು ಕರೆದಾಗ ನಾನು ಅವರ ಬಳಿ ಹೊಗಿದ್ದೆ.ಅಲ್ಲಿಂದ ಒಬ್ಬರ ಬಳಿ ನನ್ನ ಕರೆದುಕೊಂಡು ಹೋಗಿ ನನಗೆ ಸಹಾಯ ಮಾಡಿಸುತ್ತಾರೆ.ಆ ವ್ಯಕ್ತಿಯು ವಯಕ್ತಿಕವಾಗಿ ನನಗೆ ಪರಿಚಯ ಇರುವುದಿಲ್ಲ.ಆದರೇ ಅವರು ತುಂಭಾ ಪ್ರೀತಿಯಿಂದ ಮಾತನಾಡಿಸಿ ನನಗೆ ಸಹಾಯ ಮಾಡುತ್ತಾರೇ.....ಅವರೇ ಆಹಾರ ಮತ್ತು ನಾಗರಿಕ ಸರಬರಾಜು ಸಚೀವ *"ಜಮೀರ್ ಅಹ್ಮದ್"* ಸಾರ್.ಅವರು ತೋರಿಸಿದ ಪ್ರೀತಿ,ನನಗೆ ನನ್ನ ಜೀವನ ರೂಪಿಸಿಕೊಳ್ಳುವಲ್ಲಿ ನೀಡಿದ ಭರವಸೆ ನೋಡಿ ನಾನೇಂತಹ ತಪ್ಪು ಮಾಡಿದೇ ಎಂದು ನನಗೆ ಗೊತ್ತಿಲ್ಲದಂತೆ ಕಣ್ಣೀರು ಹರಿಸಿದೆ.

ಆ ಸಂಧರ್ಭ ನನಗನಿಸಿದ್ದು ನಾನು ಹಲವಾರು ವರುಷಗಳಿಂದ ಪರಿಚಯ ಇದ್ದ ಸಂಘದ ನಾಯಕರ ಬಳಿ ಸಾಲದ ರೂಪದಲ್ಲಿ‌ ಸಹಾಯ ಬೇಡಿದಾಗ ಭರವಸೇ ಮಾತ್ರ ನೀಡಿದವರ ಮದ್ಯೆ ಇವರು ಯಾರೋ ಗುರುತು ಪರಿಚಯವಿಲ್ಲದವರು,ನಾನು *ಮಹೇಂದ್ರ ಅಣ್ಣ* ನಿಗೆ ಕರೆಮಾಡಿ ಎರಡೇ ದಿನದಲ್ಲಿ ನನ್ನ ಕರೆಸಿಕೊಂಡು ಸಹಾಯ ಮಾಡಿದ *ಜಮೀರ್ ಅಣ್ಣ* ನನಗೇ ತುಂಬಾನೇ ಹೆಮ್ಮೆ ಅನಿಸುತ್ತಿದೆ.*ಜಮೀರ್ ಅಣ್ಣ* ಕೊಟ್ಟ ಭರವಸೆ *"ನೀನು ಏನೂ ಕಣ್ಣರು ಹಾಕಿ ಕೊರಗಬೇಡ ನಿನಗೆ ಅಣ್ಣನ ತರಹ ನಾನಿದ್ದೆನೆ.ತಲೆ ಕೆಡಿಸಬೇಡ ನಿನ್ನ ಜೊತೆ ನಾನಿದ್ದೆನೇ ಮುಂದೆ ಕೂಡ ನಾನೂ ನಿನಗೆ ಬೇಕಾದ ಸಹಾಯ ಮಾಡುವೇ"* ಎಂದು ಭರವಸೆ ನೀಡಿ ನನ್ನ ಪ್ರೀತಿಯಿಂದ ಕಳುಹಿಸಿ ಕೊಟ್ಟರು. ಇದೇ ಅಲ್ಲವೇ ನನಗೆ ನನ್ನ ಜೀವನಕ್ಕೆ ಸ್ಪೂರ್ತಿ?ಎಲ್ಲಿ ಕಳೆದು ಹೊಗಿದ್ದೆ, ಎಲ್ಲಿ ದಾರಿ ತಪ್ಪಿದ್ದೆ ಎಂದು ನನಗೀಗ ಅರ್ಥವಾಗಿದೆ.ಸಂಘಟನೇಯೆ ನನ್ನುಸಿರು,ನನ್ನ ಸಂಘದ ನಾಯಕರೇ ನನಗೇ ಆದರ್ಶ ಇದೆಲ್ಲಾ ಬರಿ ಭ್ರಮೆಯಷ್ಟೆ ಎಂಬುದು ನನ್ನ ಸ್ವಂತ ಅನುಭವ. ನಮ್ಮ ಕಷ್ಟಕ್ಕೆ ಹೇಳಿಕೊಂಡಾಗ ನಾನು ಆದರ್ಶವಾಗಿಸಿ ಪೂಜಿಸುತ್ತಿದ್ದ ನಾಯಕರು ನನ್ನ ಸಹಾಯಕ್ಕೆ ಬರಲ್ಲ, ಬರೀ ಕೇಸು,ಪ್ರತಿಭಟನೆ, ಹೋರಾಟಕ್ಕಷ್ಟೆ ನಾವು ಸೀಮಿತವೇ.ನಮ್ಮ ಮನೆ,ಕುಟುಂಬದವರ ಮಾತನ್ನು ಧಿಕ್ಕರಿಸಿ ಬರ್ತಿವೀ ಆದರೇ ಕೊನೆಗೆ ನಮ್ಮ ಕಷ್ಟದ ಪರಿಸ್ಥಿತಿ ಎದುರಾದಾಗ ಉಸಿರಾಗಿಸಿಕೊಂಡ ಸಂಘಟನೆ ನಮ್ಮ ಜೊತೆ ಇರಲ್ಲ ಎಂದು ನನಗೀಗ ಅರ್ಥವಾಗಿದೆ.ಯುವಕರೇ ನೀವಾದರೂ ಇನ್ನು ಮುಂದೆ ದಾರಿ‌ ತಪ್ಪದಂತೆ ಎಚ್ಚೆತ್ತುಕೊಳ್ಳಿ. ತಂದೆ ತಾಯಿ,ಅಕ್ಕ,ತಂಗಿ ಯ ಕಣ್ಣಿರಿಗೆ ಕಾರಣರಾಗದಿರಿ.ಏನೇ ಆಗಲಿ ಆದರೆ ನಾವು ಸಮಾಜವನ್ನು ಯಾವ ರೀತಿ ಕಟ್ಟಬೇಕು ಎಂದು ಸ್ಪೂರ್ತಿ ನೀಡಿದ*ಮಹೇಂದ್ರ ಕುಮಾರ್* ಮತ್ತು *ಜಮೀರ್ ಅಹ್ಮದ್* ಅವರ ಬೇಟಿಯ ಬಳಿಕ ಅರ್ಥಪೂರ್ಣ ವಾಗಿದೆ.

ಧನ್ಯವಾದಗಳು ಸಾರ್ ನಿಮಗಿಬ್ಬರಿಗೂ....ಇಂತೀ ನಿಮ್ಮ ಅಕ್ಷತ್ ಸುವರ್ಣ

0 comments: