Saturday, October 28, 2023

ಕುದ್ರೋಳಿ ಕ್ಷೇತ್ರ ಮತ್ತು ಬಿಲ್ಲವರ ಅವಹೇಳನ ಮಾಡಿದರೆ ನ್ಯಾಯ ದೊರಕಿತೇ ?

ಪ್ರಸ್ತುತ ದಿನಗಳಲ್ಲಿ ಆಗುತ್ತಿರುವ ಬೆಳೆವಣಿಗೆಯಲ್ಲಿ ಕುದ್ರೋಳಿ ಕ್ಷೇತ್ರ ಮತ್ತು ಬಿಲ್ಲವರ ಅವಹೇಳನ ಮಾಡುವುದು ಸಾಮಾಜಿಕ ಜಾಲ ತಾಣದಲ್ಲಿ ಕಂಡು ಬಂದಿದೆ.ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಂಪನ್ನ ಗೊಂಡ ಮಂಗಳೂರು ದಸರಾವನ್ನು ಕಂಡು ಕೆಲ ನಂಜು ಜೀವಿಗಳ ಕಾಲಿನ ಬುಡಕ್ಕೆ ಬೆಂಕಿ ಬಿದ್ದ ಹಾಗೆ ವರ್ತಿಸುತ್ತಿದ್ದಾರೆ .ವಿವಿಧತೆಯಲ್ಲಿ ಏಕತೆ ,ಕೋಮುವಾದ ನಡುವೆ ಸಾಮರಸ್ಯದ ಬದುಕಿನ ಸಂದೇಶ ಸಾರಿ ಮೆರೆವಣಿಗೆಯ ಉದ್ದಕೂ ಎಲ್ಲ ಧರ್ಮದ ಜನರು ಹೆಜ್ಜೆ ಹಾಕಿದ್ದು ,ಕೆಲವರ ಕಣ್ಣು ಕುಕ್ಕಿದಂತಿದೆ . ಕುದ್ರೋಳಿ ಕ್ಷೇತ್ರದ ಬ್ರಹ್ಮ ಶ್ರೀ ನಾರಾಯಗುರುವಿನ ಹಿಂಬಾಲಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲು ಟೊಂಕ ಕಟ್ಟಿ ನಿಂತ ಜನರೇ ,

ಸೌಜನ್ಯಳಿಗೆ ನ್ಯಾಯ ಸಿಗಬೇಕು ಆರೋಪಿಗಳಿಗೆ ಶಿಕ್ಷೆ ಆಗಬೇಕು ,ಎಂಬುವುದು ಕೂಡ ನಮ್ಮ ಆಗ್ರಹವಾಗಿದೆ .ಹೋರಾಟವನ್ನು ಹೋರಾಟ ಮಾಡುವ ವೇದಿಕೆಯಲ್ಲಿ ಮಾಡಬೇಕು ಹೊರತು ಸ್ವಯಂ ಪ್ರತಿಷ್ಠೆ ,ಸ್ವಾರ್ಥ ಮನೋಭಾವನೆ ,ಮತ್ತು ದುಷ್ಟರ ಕುಮ್ಮಕ್ಕಿನಿಂದ ಕುದ್ರೋಳಿ ಮತ್ತು ಬಿಲ್ಲವ ಸಮುದಾಯದ ವಿರುದ್ಧ ಹುಳಿ ಹಿಂಡಲು ನಿಮಗೆ ನಮ್ಮ ದಸರಾ ಬೇಕಾ ? ಕುದ್ರೋಳಿ ಸಮಿತಿಯವರ ನಿರ್ಧಾರ ,ಸ್ಥಳೀಯ ಜಿಲ್ಲಾಡಳಿತದ ಕ್ರಮ ನಿಮಗೆ ಕಹಿ ಎನಿಸಿದರೆ ,ನೀವು ಕಹಿಯನ್ನು ನುಂಗಿ ಜೀರ್ಣಿಸಿ ಕೊಳ್ಳಿ,ಅದನ್ನು ಬಿಟ್ಟು ಕೆಲ ಅಸ್ತಿತ್ವ ಇಲ್ಲದ ಮೇಲ್ವರ್ಗದ ಜನರನ್ನು ಚು ಬಿಟ್ಟು ,ಮಂಗಳೂರು ದಸರಾವನ್ನು ಕ್ಯಾಬರೆ ,ಇನ್ನಿತರ ಶಬ್ದ ಪ್ರಯೋಗ ಮಾಡಿ ತೀಟೆ ತೀರಿಸಿಕೊಂಡಿದ್ದೀರಾ ! ಕುದ್ರೋಳಿ ಕ್ಷೇತ್ರದ ಸಮಿತಿ ,ಬಿಲ್ಲವ ಸಂಘದ ಅಧ್ಯಕ್ಷರು ಮೌನವಾಗಿದ್ದಾರೆ ಎಂದು ಹಲ್ಲಿಗೆ ಕಡ್ಡಿ ಹಾಕಿ ನಸು ನಗಬಹುದು ,ಬಿಲ್ಲವ ಸಮುದಾಯ ರಕ್ತ ಬಿಸಿಯ ಯುವಕರ ಶೌರ್ಯ ಇತಿಹಾಸದ ಪುಟಗಳಲ್ಲಿ ಇನ್ನು ಇದೆ ನಮ್ಮ ಯುವಕರ ತಾಳ್ಮೆ ಪರೀಕ್ಷಿಸಿ ನಮ್ಮ ನಾರಾಯಗುರು ಸ್ಥಾಪಿಸಿದ ಕ್ಷೇತ್ರದ ಕೇಡು ಬಯಸಿದರೆ ಉತ್ತರ ನೀಡಲು ಬಿಲ್ಲವ ಸಮುದಾಯ ಬದ್ಧವಾಗಿದೆ .

0 comments: