Sunday, November 12, 2017

ಬಿಲ್ಲವ ಪ್ರತಿಭೆಗಳು

ನಮ್ಮ ಬಿಲ್ಲವೆರ್ ಪೇಜ್. ಚಂದ್ರಶೇಖರ್ ಸುವರ್ಣ ಮೂಲ್ಕಿ. ಇವರ ವಿದ್ಯಾಭ್ಯಾಸ ಬೋರ್ಡ್ ಸ್ಕೂಲ್ ಮೂಲ್ಕಿ ಮತ್ತು ಜೂನಿಯರ್ ಕಾಲೇಜು ಮೂಲ್ಕಿ. ತಂದೆಯ ಹೆಸರು ಚೆನ್ನಪ್ಪ ಸುವರ್ಣ ತಾಯಿಯ ಹೆಸರು ಲಲೀತ ಸಿ ಸುವರ್ಣ ತುಳುನಾಡಿನ ಜನಪ್ರಿಯ ಕಾರ್ಯಕ್ರಮ ತುಳುನಾಡ ವೈಭವದ ಬೆನ್ನೆಲುಬು. ತುಳುನಾಡ ವೈಭವ ದ ರಚನೆ ನಿರ್ದೇಶನ ಪರಿಕಲ್ಪನೆ ಇವರದೇ.ಇಲ್ಲಿಯ ವರೆಗೆ ಸುಮಾರು 242 ಕಾರ್ಯಕ್ರಮ ಚೆನ್ನೈ,ದೆಹಲಿ,ಬಹ್ರೆನ್,ದುಬೈ,ಪುಣೆ,ಮುಂಬೈ ಮುಂತಾದ ಕಡೆಗಳಲ್ಲಿ ನಡೆಸಿಕೊಟ್ಟ ಹೆಮ್ಮೆ ಇವರ ತಂಡಕ್ಕಿದೆ.ಕರ್ನಾಟಕ ರಾಜ್ಯ ಪ್ರಶಸ್ತಿ ್ತಿಪುರಶ್ಕ್ರರತರು.ಮೂಲ್ಕಿ ಯುವವಾಹಿನಿಯ ಮುಖಾಂತರ ಪ್ರಥಮಱಾಗಿ ಆಟಿಡೊಂಜಿ ದಿನ 13ನೇ ವರುಷದಿಂದ ,ತುಳುನಾಡ ತುಡರ್ ಕಾರ್ಯಕ್ರಮ ನಡೆಸಿಕೊಂಡು ಬಂದ ಹೆಗ್ಗಳಿಕೆ ಇವರದು. ರಾಷ್ಟ್ರ ಪ್ರಶಸ್ತಿ ಪಡೆದ ಕೋಟಿಚೆನ್ನಯ ತುಳು ಚಲನಚಿತ್ರದ ಆರ್ಟ್ ಡೈರೆಕ್ಟರ್ ಹಾಗೂ ಬ್ರಹ್ಮಶ್ರೀನಾರಯಣ ಗುರು ಚಲನಚಿತ್ರಕ್ಕೆ ಕಥೆ ಹಾಗೂ ಹಾಡನ್ನು ರಚಿಸಿದ್ದಾರೆ. . ಮೂಲ್ಕಿ ಯುವ ವಾಹಿನಿಯ ಸ್ಥಾಪಕ ಅಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು.ಸುವರ್ಣ ಆರ್ಟ್ಸ್ನ ಮಾಲಕರು.ಶ್ರೀ ಕ್ಷೇತ್ರ ಕುದ್ರೋಳಿ ದೇವಾಲಯದ ದಸರಾ ಉತ್ಸವಕ್ಕೆ ಸುಮಾರು 25ವರುಷಗಳಿಂದ ಇವರದ ತಂಡದಿಂದಲೇ ಅದ್ಭುತ ಅಲಂಕಾರ. ಹೆಮ್ಮೆಯ ಬಿಲ್ಲವರು.ಇವರ.ತಂಡ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮ ನಿಡಲಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಲಿ ಇವರಿಗೆ ಮತ್ತು ಇವರ ಕುಟುಂಬದವರಿಗೆ ಗುರುದೇವರು ಆಯುರ್ಭಾಗ್ಯ ಕರುಣಿಸಲಿ ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್ ಕ್ರಪೆ:ದೀಕ್ಷಾ ಸುವರ್ಣ

0 comments: