Saturday, November 4, 2017

ತುಳುನಾಡಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರು ನಾವಿಂದು ಅಲ್ಪಸಂಖ್ಯಾತರಂತೆ ಬದುಕುತ್ತಿದೇವಾ ? ನಮಗ್ಯಾಕೆ ಜಾತಿ ಪದದ ವ್ಯಾಮೋಹವಿಲ್ಲ !

ತುಳುನಾಡಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರು ನಾವಿಂದು ಅಲ್ಪಸಂಖ್ಯಾತರಂತೆ ಬದುಕುತ್ತಿರುವುದು ವಿಷಾದನೀಯ. ಬಹುಷ ಅಸ್ತಿತ್ವವನ್ನೇ ಕಳೆದುಕೊಂಡು ಬದುಕುತ್ತಿರುವ ಸಮುದಾಯ ನಮ್ಮದು ಎನ್ನುವ ವಿಷಾದ ಭಾವನೆಗಳು ಮೂಡಿ ಬರುತ್ತಿದೆ. ನಮ್ಮವರು ಎಲ್ಲಾ ರಂಗದಲ್ಲಿ ಮಿಂಚುತ್ತಿದ್ದಾರೆ ಆದರೆ ಅವರನ್ನು ಗುರುತಿಸಲು ಕಷ್ಟಸಾಧ್ಯ ಕಾರಣ ಹೆಸರಿನೊಂದಿಗೆ ಅವರ ಜಾತಿ ಪದಗಳು ಇಲ್ಲದಿರುವುದು ಅದಕ್ಕೆ ಬದಲಾಗಿ ಬಳಿ(ಬರಿ) ಅಥವ ಕುಮಾರ/ಕುಮಾರಿ ಎನ್ನುವ ಪದಗಳ ಬಳಕೆಯಿಂದಾಗಿ ಅವರನ್ನು ಗುರುತಿಸುವುದಾದರು ಹೇಗೆ. ತುಳುನಾಡಲ್ಲಿ ಎಲ್ಲಾ ಜಾತಿಯವರಲ್ಲು ಬರಿ(ಬಳಿ) ಸಾಮಾನ್ಯ ಎಲ್ಲರು ಅದನ್ನು ಬಳಸುತ್ತಾರೆ ಆಗಿರುವಾಗ ಇಂತಹ ಜಾತಿಯ ಮಕ್ಕಳು ಎಂದು ಗುರುತಿಸುವುದಾದರು ಹೇಗೆ. ಕೆಲವೊಮ್ಮೆ ಗೊತ್ತಿಲ್ಲದೆ ಬರಿಯನ್ನು ನೋಡಿ ಬಿಲ್ಲವ ಪೇಜ್ಗಳಲ್ಲಿ ಸಾಧನೆಯನ್ನು ಗುರುತಿಸಿ ಹಾಕಿ ಕೊನೆಗೆ ಅವರು ಬಿಲ್ಲವರಲ್ಲ ಎಂದು ಗೊತ್ತಾಗಿ ಆದ ಫಜೀತಿಗಳೇ ಹೆಚ್ಚು.ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಅದೆಷ್ಟೋ ಬಿಲ್ಲವರು ಇವತ್ತಿಗು ತಮ್ಮ ಮೂಲ ಧರ್ಮದ ಬಳಿಗಳಾದ ಕೋಟ್ಯಾನ್, ಜತ್ತನ್, ಪಾಲನ್, ಕರ್ಕೇರ ಇವುಗಳನ್ನು ಇವತ್ತಿಗು ಅವರು ಬಳಸುತ್ತಿದ್ದಾರೆ. ಆದುದರಿಂದ ಬಿಲ್ಲವರೆಂದು ಗುರುತಿಸುವುದಾದರು ಹೇಗೆ ಕೇವಲ ಬಳಿಗಳಿಂದ ತುಳುನಾಡಲ್ಲಿ ಯಾರನ್ನು ಗುರುತಿಸಲು ಸಾಧ್ಯವಿಲ್ಲ. ಬಿಲ್ಲವರಿಗೆ ಜಾತಿ ಪ್ರೇಮದ ಕೊರತೆಯೋ ಅಥವ ಪೂಜಾರಿ ಎಂದು ಗುರುತಿಸಿಕೊಂಡಲ್ಲಿ ನೋಡುವವರ ನೋಟ ಬದಲಾಗುತ್ತದೆ ಎನ್ನುವ ಭಾವವ ಗೊತ್ತಿಲ್ಲ. ನಮ್ಮಲ್ಲಿರುವ ಅದೆಷ್ಟೋ ಉನ್ನತ ಸ್ಥಾನ ಅಲಂಕರಿಸಿರುವ ವ್ಯಕ್ತಿಗಳು ಇವತ್ತಿಗು ಪೂಜಾರಿ ಎಂದು ಗುರಿತಿಸಿಕೊಳ್ಳದ್ದು ನಮ್ಮ ದೌರ್ಬಾಗ್ಯ.

ಆದರೆ ನಮಗಿಲ್ಲದ ಜಾತಿ ಅಭಿಮಾನ ಬೇರೆ ಜಾತಿಯವರಿಗೆ ಇಲ್ಲವ ಎಂದು ನೋಡುವಾಗ ನಮ್ಮನ್ನು ಬಿಟ್ಟು ಎಲ್ಲರಿಗೂ ಇದೆ. ಇವತ್ತಿಗೆ ಶೆಟ್ಟಿ ಸರ್ ನೇಮ್ ಇಡೀ ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿ ಎಂದಾದರೆ ಅದು ಅವರಿಗೆ ಇರುವ ಜಾತಿ ಅಭಿಮಾನ, ಅವರ ಹುಟ್ಟಿದ ಜಾತಿಯ ಹೆಸರಿನಲ್ಲಿಯೇ ಅವರು ಗುರುತಿಸಿಕೊಳ್ಳಲು‌ ಇಷ್ಟ ಪಡುತ್ತಾರೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಕೂಡ ಜಾತಿ ಹೆಸರನ್ನು ಸೇರಿಸಿಯೇ ತಮ್ಮನ್ನು ಕರೆಸಿಕೊಳ್ಳಲು ಇಷ್ಟ ಪಡುತ್ತಾರೆ. ಇದನ್ನೆಲ್ಲ ನಾವು ಅಭಿಮಾನದ ದೃಷ್ಟಿಯಿಂದ ನೋಡಬೇಕು ಮತ್ತು ಅವರಿಂದ ಕಲಿತುಕೊಳ್ಳಬೇಕಾಗಿರುವುದು. ಮತ್ತೊಂದು ಜಾತಿಯಲ್ಲಿರುವ ಉತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಹಾಗಾದರೆ ನೋಡಿ ಬೇರೆ ಜಾತಿಯವರು ಅಭಿಮಾನವಿಲ್ಲದೆ ಈ ರೀತಿಯಾಗಿ ಗುರುತಿಸಿಕೊಂಡಿರುವುದ? ಬಿಲ್ಲವರಲ್ಲಿ ಅಭಿಮಾನದ ಕೊರತೆಯಿದೆ ಎನ್ನುವುದು ಇಲ್ಲಿ ಸ್ಪಷ್ಟ. ಆದರೆ ಒಂದಂತು ಸಮಾಧಾನದ ವಿಷಯವೆಂದರೆ ಪೂಜಾರಿ ಎನ್ನುವ ಜಾತಿವೊಂದು ಇದೆಯೆಂದು ತೋರಿಸಿಕೊಟ್ಟವರು ಶ್ರೀಯುತ ಜನಾರ್ಧನ ಪೂಜಾರಿಯವರು ಮಾತ್ರ.

ಅವರಿಂದ ವಿಶ್ವದಾದ್ಯಂತ ಈ ಪೂಜಾರಿ ಎನ್ನುವ ಹೆಸರು ಖ್ಯಾತಿಗೆ ಬಂದಿದೆ. ಕೆಲವು ನನ್ನ ಸ್ನೇಹಿತರು ಹೇಳಿರುವ ಮಾತಿದೆ ಜಾತಿಯ ಹೆಸರಿನಲ್ಲೇನಿದೆ ಎಂದು ಆದರೆ ಮುಂದುವರಿದ ಜಾತಿಗಳಲ್ಲಿ ಅವರೆಲ್ಲ ಹಾಕುತ್ತಿಲ್ಲವೆ ಅವರಿಗೆ ಆಗುತ್ತೆ ಅಂದಾದ ಮೇಲೆ ನಮಗ್ಯಾಕಿಲ್ಲ. ನಮ್ಮಲ್ಲಿ ಇಚ್ಛಾ ಶಕ್ತಿಯಿಲ್ಲ ನಾವು ನಮ್ಮ ಮಕ್ಕಳಿಗೆ ನಮ್ಮ ಜಾತಿ ಪ್ರೇಮವನ್ನು ಕಲಿಸುತ್ತಿಲ್ಲ ನಮ್ಮ ಸಂಸ್ಕೃತಿಯನ್ನು ಕಲಿಸುತ್ತಿಲ್ಲ ಮತ್ತೆಲ್ಲಿಂದ ಜಾತಿ ಅಭಿಮಾನ. ಆದರೆ ಈಗೀಗ ಜಾತಿ ಅಭಿಮಾನಗಳು ಸ್ವಲ್ಪ ಮಟ್ಟಿಗೆ ಯುವ ಜನತೆಯಲ್ಲಿ ಮೂಡುತ್ತಿದೆ. ಪೂಜಾರಿ, ಬಿಲ್ಲವ, ಬೈದ್ಯ, ಬೋಂಟ್ರ, ಬಿರ್ವ ಎನ್ನುವ ಪದನಾಮಗಳು ಅಲ್ಲಲ್ಲಿ ಕಾಣಲು ಪ್ರಾರಂಭವಾಗಿದೆ. ಸ್ನೇಹಿತರೆ ಒಂದಂತು ತಿಳಿದುಕೊಳ್ಳಿ ನಮ್ಮ ಜಾತಿ ಹೆಸರುಗಳ ಬಳಕೆ ನಮ್ಮನ್ನು ಒಂದಲ್ಲ ಒಂದು ನಿಟ್ಟಿನಲ್ಲಿ ಬಾಂಧವ್ಯಗಳನ್ನು ಗಟ್ಟಿ ಮಾಡುತ್ತೆ ಅದೇ ರೀತಿಯಲ್ಲಿ ನಮ್ಮ ರಾಜಕೀಯ ಶಕ್ತಿಯನ್ನು ತೋರಿಸುವ ಅಖಾಡವು ಆಗುತ್ತೆ. ಇನ್ನಾದರು ನಮ್ಮ ಮಕ್ಕಳ ಹೆಸರಿನಲ್ಲಾದರು ಜಾತಿ ಸೂಚಕಗಳು ಇರಲಿ. ಇದನ್ನು ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು. ಆದರೆ ಮಂಥನಗಳು ನಡೆಯಲಿ ಅಗತ್ಯ ಏನಿದೆ ಎಂದು ಚರ್ಚೆಗಳು ಆಗುತ್ತಿರಲಿ.

ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

0 comments: