Monday, November 6, 2017

ಅಸಾಯಕ ಮನನೊಂದ ಬಿಲ್ಲವ ಯುವಕನ ಉದಯವಾಣಿ ವರದಿಗೆ ಸ್ಪಂದಿಸಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ

ಉಡುಪಿ ನಗರದಲ್ಲಿ ಇತ್ತಿಚೆಗೆ ಅಸಾಯಕ ಮನನೊಂದ ಯುವಕನನ್ನು ನ್ಯಾಯಲಯದ ಅನುಮತಿಯನ್ನು ಪಡೆದು ವಿಶುಶೆಟ್ಟಿ ಅಂಬಲ್ಪಾಡಿಯವರು ಚಿಕಿತ್ಸೆಗಾಗಿ ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಉದಯವಾಣಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ಅಚ್ಚುತಾ ಅಮಿನ್ ಕಲ್ಮಾಡಿ , ಅಧ್ಯಕ್ಷ ಪ್ರವೀಣ್ ಎಮ್ .ಪೂಜಾರಿ ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಯುವಕನ ಯೋಗ ಕ್ಷೇಮ ವಿಚಾರಿಸಿರುತ್ತಾರೆ.

ಹಾಗೂ ಯುವಕನಿಗೆ ನಾವು ನಿನ್ನೊಂದಿಗೆ ಇದ್ದೇವೆ ಎಂದು ದೈರ್ಯ ಹೇಳಿರುತ್ತಾರೆ. ಜೋತೆಗೆ ವಿಶುಶೆಟ್ಟಿಯವರನ್ನು ಸಂಪರ್ಕಿಸಿದ ಯುವ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಯುವಕನ ಚಿಕಿತ್ಸೆಯ ಕುರಿತು ಹಾಗೂ ಆತನನ್ನು ಮುಖ್ಯವಾಹಿನಿಗೆ ತರುವ ಕೆಲಸ ಕಾರ್ಯಗಳಲ್ಲಿ ನಿಮ್ಮೊಂದಿಗೆ ಇದ್ದೆವೆ ಎನ್ನುವ ಭರವಸೆಯನ್ನು ನೀಡುತ್ತಾರೆ. ಹಾಗೆಯೇ ಯುವಕನ ಸಂಬಂಧಿಕರನ್ನು ಸಂಪರ್ಕಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿರುತ್ತಾರೆ.

0 comments: