Monday, November 20, 2017

ಬಿಲ್ಲವ ಸಮಾಜದ ಜನರ ಜಾಗೃತಿಯ ಪರ್ವ ಆರಂಭ.

ಒಂದಾಗುತ್ತಿದೆ ಬಿಲ್ಲವ ಸಮಾಜ- ಮತ್ತೊಮ್ಮೆ ಬಿಲ್ಲವರ ಶಕ್ತಿ ಪ್ರದರ್ಶನ. ಸಮಾಜದ ಹಿತದ ಬಗ್ಗೆ ಯೋಚನೆ ಮಾಡಲು ಪ್ರಾರಂಭ ಮಾಡಿದ ಬಿಲ್ಲವ ಯುವ ಸಮಾಜ. ಗೆಜ್ಜೆಗಿರಿಯಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ತೋರಿ ಬಂದಂತೆ ತಾಯಿ ದೇಯಿ ಬೈದ್ಯೆತಿಗೆ ಮೂಲಸ್ಥಾನ ನಿರ್ಮಾಣವಾದಲ್ಲಿ ಮತ್ತೆ ಬಿಲ್ಲವ ಸಮಾಜ ಒಂದಾಗಿ ಬಲಗೊಳ್ಳುತ್ತದೆ ಎಂಬ ಮಾತು ನಿಜವಾಗುತ್ತಿದೆ. ಅಂದು ಗೆಜ್ಜೆಗಿರಿಯಲ್ಲಿ ನಡೆದ ಶಿಲಾನ್ಯಾಸದ ಸಂಧರ್ಭದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಬಿಲ್ಲವರ ಮಹಾ ಸಂಗಮಕ್ಕೆ ಸಾಕ್ಷಿಯಾಗಿತ್ತು. ಹಾಗೆಯೇ ಪೊಳಲಿ ಕ್ಷೇತ್ರಕ್ಕೆ ಬಿಲ್ಲವ ಸಮಾಜದಿಂದ ನೀಡಲ್ಪಟ್ಟ ದ್ವಜಸ್ತಂಬದ ಮೆರವಣಿಗೆಯಲ್ಲೂ ಸಾವಿರಾರು ಮಂದಿ ಬಿಲ್ಲವರು ಪಾಲ್ಗೊಂಡಿದ್ದಾರೆ. ಮುಂದೆ ನಡೆಯಲಿರುವ ಗೆಜ್ಜೆಗಿರಿಯ ಮಹಾಮಹೋತ್ಸವು ಸಮಸ್ತ ಬಿಲ್ಲವರ ಮಹಾ ಸಂಗಮಕ್ಕೆ ಸಾಕ್ಷಿಯಾಗಲಿದೆ. ಮಾತೆ ದೇಯಿ ಬೈದ್ಯೆತಿ - ಅವಳಿ ವೀರರು ಕೋಟಿ ಚೆನ್ನಯರ ಪಾದಗಳಿಗೆ‌ ನಮಿಸುತ್ತಾ..ಮತ್ತೆ ಪ್ರಾಚೀನದಲ್ಲಿ ಬಿಲ್ಲವರು ಮರೆದ ಗತವೈಭವ ಮರುಕಳಿಸಲಿ ಎಂಬ ಪ್ರಾರ್ಥನೆ ಬರಹ : ಪ್ರಶಾಂತ್ ಪೂಜಾರಿ

0 comments: