Monday, November 20, 2017

ಜನಾರ್ಧನ ಪೂಜಾರಿ ಎಂದರೆ ಈ ಚಿತ್ರ ನೆನಪಿಗೆ ಬರುತ್ತೆ!

ಜನಾರ್ಧನ ಪೂಜಾರಿ ಎಂದ ಕೂಡಲೇ ನನ್ನ ಕಣ್ಣ ಮುಂದೆ ಧುತ್ತೆಂದು ಈ ಚಿತ್ರ ಎದ್ದು ಬರುತ್ತದೆ.ಎಷ್ಟು ಜನರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ, ಅದು ೨೦೧೦ ರ ಕರಾಳ ಶನಿವಾರ. ದೂರದ ದುಬೈಯಲ್ಲಿ ನೆಲೆಸಿದ್ದ ಜನ, ತಾಯ್ನಾಡಿಗೆ ಬಂದಿಳಿಯಲು ಕಾತುರರಾಗಿದ್ದರು. ಇನ್ನೇನು ಒಂದೆರಡು ಕ್ಷಣಗಳಲ್ಲಿ ತಮ್ಮ ಇಷ್ಟ ಬಂಧುಗಳನ್ನು ಎದುರುಗೊಳ್ಳುವವರಿದ್ದರು. ಬೆಳಗಿನ ಸಮಯ ೬ ಗಂಟೆ ೩೦ ನಿಮಿಷ. ಬಜ್ಪೆ ವಿಮಾನನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಬೇಕಿದ್ದ ಏರ್ ಇಂಡಿಯಾ ವಿಮಾನ ರನ್ ವೇ ದಾಟಿ ಹೋಗಿ ಬೆಂಕಿಗೆ ಆಹುತಿಯಾಯಿತು. ನೋಡ ನೋಡುತ್ತಿದ್ದಂತೆ ೧೫೮ ಜನ ಸುಟ್ಟು ಕರಕಲಾಗಿದ್ದರು. ಕೂಡಲೇ ಸಂಘದ ಕಾರ್ಯಕರ್ತರು, ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡರು. ಶವಗಳನ್ನು ಅನಾಮತ್ತು ಹೊತ್ತು ಸಾಗಿಸಿದರು. ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಅವರು ತಮ್ಮ ಇಳಿ ವಯಸ್ಸನ್ನು ಲೆಕ್ಕಿಸದೆ ಶವ ಸಾಗಾಟದಲ್ಲಿ ತಮ್ಮ ಹೆಗಲನ್ನು ನೀಡಿದರು.

0 comments: