ಇಚ್ಲಂಪಾಡಿ ಗ್ರಾಮದ ಬಾಕಿಜಾಲು ಅಣ್ಣಿಪೂಜಾರಿಯವರ ಅಳಿಯ ಶ್ರೀನಿವಾಸರವರ ಕೊಲೆ ಪ್ರಕರಣ ಖಂಡಿಸಿರುವ ಇಚ್ಲಂಪಾಡಿ ಬಿಲ್ಲವ ಗ್ರಾಮ ಸಮಿತಿ, ಈ ಪ್ರಕರಣದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಿ, ಆರೋಪಿ ಕೆ.ವಿ.ಜಾರ್ಜ್‌ರವರ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಿಗೆ ತರಬೇಕು. ಇಲ್ಲದಿದ್ದಲ್ಲಿ ಪುತ್ತೂರು ಎ.ಸಿ.ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಶ್ರೀನಿವಾಸ ಪೂಜಾರಿಯವರು ಲಾವತ್ತಡ್ಕದ ಕೆ.ವಿ.ಜಾರ್ಜ್‌ರವರ ಹೋಟೆಲ್‌ನಲ್ಲಿ ರಾತ್ರಿ ಸಮಯದಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸರವರ ಮನೆಯವರ ಪ್ರಕಾರ ಹೋಟೆಲ್ ಮಾಲಕ ಕೆ.ವಿ.ಜಾರ್ಜ್‌ರವರು ಇಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದರು. ಇವರ ಅಕ್ರಮ ವ್ಯವಹಾರವನ್ನು ವಿರೋಧಿಸಿದ ಶ್ರೀನಿವಾಸರನ್ನು ನ.24ರಂದು ರಾತ್ರಿ ಕೆ.ವಿ.ಜಾರ್ಜ್‌ರವರು ಇನ್ನಿಬ್ಬರ ಜೊತೆ ಸೇರಿಕೊಂಡು ಹೊಡೆದು ಸಾಯಿಸಿದ್ದಾರೆ. ಕೆಲ ವರ್ಷದ ಹಿಂದೆ ಇದೇ ತರಹ ಇನ್ನೊಬ್ಬರನ್ನು ಇವರು ಹೊಡೆದು ಸಾಯಿಸಿದ್ದಾರೆ ಎಂಬ ಸುದ್ದಿಯೂ ಹರಡುತ್ತಿದೆ.
ಬಿಲ್ಲವ ಸಮುದಾಯಕ್ಕೆ ಸೇರಿದ ಅಮಾಯಕರಾಗಿದ್ದ ಶ್ರೀನಿವಾಸರ ಮೇಲೆ ನಡೆದಿರುವ ಹಲ್ಲೆ, ಕೊಲೆ ಪ್ರಕರಣವನ್ನು ಬಿಲ್ಲವ ಸಮುದಾಯವು ಖಂಡಿಸುತ್ತದೆ. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಹಾಗೂ ಕೆ.ವಿ.ಜಾರ್ಜ್‌ರವರ ಹೋಟೆಲ್‌ನಲ್ಲಿ ನಡೆಯುವ ಅಕ್ರಮ ಬಯಲಿಗೆ ತರಬೇಕು. ಇಲ್ಲದಿದ್ದರೆ ಪುತ್ತೂರು ಎ.ಸಿ.ಕಚೇರಿ ಮುಂದೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಇಚ್ಲಂಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸತೀಶ್ ಮಾನಡ್ಕ ತಿಳಿಸಿದ್ದಾರೆ.
0 comments: