ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವ ಯುವಕರು ದಾರಿ ತಪ್ಪುತ್ತಿದ್ದಾರೆಯೇ !? ಹೀಗೊಂದು ಕಳವಳಕಾರಿಯಾದ ಪ್ರಶ್ನೆಯೊಂದು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮೂಡುವುದು ಸತ್ಯ ..ತಮ್ಮ ಅಮೂಲ್ಯವಾದ ಜೀವ ಹಾಗು ಜೀವನವನ್ನು ಬೇಕಾಬಿಟ್ಟಿಯಾಗಿ ಸ್ವಯಂಕೃತವಾಗಿ ಹಾಳು ಮಾಡುತ್ತಾ ಮನೆಯವರನ್ನು ಕಣ್ಣೀರಲ್ಲಿ ಸ್ನಾನ ಮಾಡಿಸುತ್ತಿರುವುದಂತೂ ವಾಸ್ತವ .ವಿದ್ಯಾರ್ಜನೆ ಯಲ್ಲಿ ಆಗ್ರ ಪಂಕ್ತಿಯಲ್ಲಿರುವ ನಮ್ಮ ಜಿಲ್ಲೆಯಲ್ಲಿ ಬಿಲ್ಲವರ ಸಾಧನೆ ಪಟ್ಟಿ ಮಾಡ ಹೊರಟರೆ ಸಿಗುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ..ಇನ್ನು ಉನ್ನತ ಮಟ್ಟ ಅಂದರೆ ಐಎಎಸ್ ಐಪಿಎಸ್ ಗಳಂತೂ ಕೇವಲ ಸಿನಿಮಾ ದಲ್ಲಿ ಮಾತ್ರ ನೋಡಿ ಆನಂದ ಪಡೋ ಗ್ರಹಚಾರ ನಮ್ಮ ಸಮಾಜದ್ದು.
ಸಾಂಸ್ಕೃತಿಕವಾಗಿಯೂ ಅಲ್ಲೊಂದು ಇಲ್ಲೊಂದು ಮಾತ್ರವೇ ಇದೆ..ರಾಜಕೀಯ ದಲ್ಲಿ ಹೇಳೋದೇ ಬೇಡ ಒಂದೇ ಒಂದು ಸಂಸದರನ್ನು ಕೂಡ ಆರಿಸದಷ್ಟು ಹೃದಯವಂತರು ನಾವು..ಮುಂದೆ ಆರಿಸಬೇಕೆಂದರೆ ಆ ಮಟ್ಟಿನ ನಾಯಕರು ಸಿಗುವುದು ಪ್ರಾಯಶಃ ಅನುಮಾನವೆ..ಹಾಗಿದ್ದರೆ ನಾವು ಬಹುಸಂಖ್ಯರಾಗಿದ್ದು ಪ್ರಯೋಜನ ಆದರೂ ಏನು !? ನಮ್ಮ ಯುವಕರ ಸಾಧನೆ ಬಗ್ಗೆ ತಿಳಿಯಬೇಕೆಂದರೆ ಅದು ಕೇವಲ ಪತ್ರಿಕೆಗಳಲ್ಲಿ ಬರುವ ಕ್ರೈಂ ಪೇಜ್ ನಲ್ಲಿ ಮಾತ್ರ..ಅದರಲ್ಲೂ ಅಂತೂ ನಮ್ಮವರು ಕ್ರಿಕೆಟ್ ನಲ್ಲಿ ಸಚಿನ್ ದಾಖಲೆ ಯನ್ನೇ ಮುರಿಯುವ ಪರಾಕ್ರಮ .ಪತ್ರಿಕೆಯಲ್ಲಿ ಹತ್ತು ಪ್ರಕರಣಗಳಿದ್ದರೆ ,ಕಡಿಮೆ ಅಂದರೆ ಏಳರಲ್ಲಿ ನಮ್ಮ ಯುವಕರು ರಾಜಾರೋಷವಾಗಿ ಕಾಣಸಿಗುತ್ತಾರೆ .ಕೊಲೆ ,ಸುಲಿಗೆ ಗಲಾಟೆ ಗಳಲ್ಲಿ ನಮ್ಮವರ ಹೆಸಿರಿಲ್ಲದಿದ್ದರೆ ಅದೊಂದು ನಾಚಿಗೆಯ ವಿಷಯ ಎಂಬಂತಾಗಿದೆ ..ನಮ್ಮವರ ಆರ್ಥಿಕತೆಯ ಲೆಕ್ಕ ಹಾಕಿದರೆ ಅಲ್ಲೂ ನಮ್ಮವರು ಮೊದಲ ಸ್ಥಾನದಲ್ಲಿದ್ದರೆ ,ಆದರೆ ಕಡೆಯಿಂದ ಲೆಕ್ಕ ಹಾಕಿದಾಗ ಮಾತ್ರ ಎಂಬುದು ವಿಪರ್ಯಾಸ ..ತುಳುನಾಡಿನ ದೈವ ಗಳು ಒಲಿದ ಸಮಾಜ ನಮ್ಮದು ಆದರೆ ವಾಸ್ತವದಲ್ಲಿ ನಮ್ಮವರ ಘನತೆ ಗಳೆಲ್ಲ ನೀರು ಪಾಲಾಗಿರುವುದಂತೂ ಅರಗಿಸಲಾಗದ ಸತ್ಯ.
ನಾರಾಯಣ ಗುರುಗಳು ಹೇಳಿದ ತತ್ವ ಸಂಘಟನೆಯಿಂದ ಬಲಯುತರಾಗಿ ಎಂಬುದು ಅದು ಕೇವಲ ಗುರುಜಯಂತಿ ಯಂದು ನಡೆಯುವ ಭಾಷನಕ್ಕೆ ಸೀಮಿತ ಆದಂತಿದೆ ..ಕಾರಣ ನಮ್ಮ ಯುವಕರು ಸಂಘಟಿತರಾಗು ಇಲ್ಲ ಬಲವಂತರಾಗು ಇಲ್ಲ ಸಾಮಾಜಿಕವಾಗಿ ..ಇನ್ನಾದರೂ ಸರಿ ಆಗಿ ಎಂದು ಬುದ್ದಿ ಮಾತನ್ನ ಕಾಳಜಿ ಯಿಂದ ಹೇಳಹೊರಟರೆ ನಮ್ಮನ್ನು ನೋಡುವ ದ್ರಿಷ್ಟಿಯೇ ಬೇರೆ .ಇದೆ ಕಾರಣದಿಂದ ನಮ್ಮಲ್ಲಿ ಇನ್ನೊಬ್ಬ ಜನಾರ್ಧನ ಪೂಜಾರಿ ಉದಯವಾಗಲೇ ಇಲ್ಲ.. ನಮ್ಮಲ್ಲೂ ಕೆಲವು ಪ್ರತಿಭಾವಂತ ಯುವಕರಿದ್ದಾರೆ ಆದರೆ ಸಂಖ್ಯೆ ಕಡಿಮೆ .ನಾವು ಅವರನ್ನು ಆದರೂ ಉತ್ತೇಜಿಸುವ ಕಾರ್ಯ ಮಾಡಬೇಕಾಗಿದೆ .ದುಸ್ಕ್ರಿತ್ಯ್ಗಳಿಗೆ ಇಳಿಯುವ ಬಿಸಿ ರಕ್ತದ ಯುವಕರು ಮಂಥನ ಮಾಡಬೇಕಾಗಿದೆ ,ಯಾವೋದು ಪಕ್ಷಾಗೋಸ್ಕರ ,ಎಡಬಿಡಂಗಿಗಳಿಗೆ ತಮ್ಮ ಜೀವನವನ್ನು ಹಾಳಆ ಮಾಡೋ ಬದಲು ತಮ್ಮ ಮನೆಯಲ್ಲಿರುವ ತಂದೆ ತಾಯಿ ಬಂದು ಬಳಗದವರನ್ನು ಒಂದ್ಸಲ ಕಣ್ಣ್ ತೆರೆದು ನೋಡಬೇಕಾಗಿದೆ .
ದೇವರು ಕೊಟ್ಟ ಸುಂದರ ಜೀವನ ವನ್ನು ಸನ್ಮಾರ್ಗದಲ್ಲಿ ನಡೆಸಿ ನಾಲ್ಕು ಜನರ ಮುಂದೆ ಗೌರವಯುತವಾಗಿ ನಡೆಸಿದಾಗ ನಿಮ್ಮ ಮನೆಯವರು ಸಂತೋಷ ಪಡುತ್ತಾರೆ ಹಾಗೇನೇ ಬಿಲ್ಲವ ಸಮಾಜನು ಖುಷಿ ಪಡುತ್ತದೆ .. ಇನ್ನಾದರೂ ಜೀವನ ದ ಸಾರವನ್ನು ತಿಳಿದು ಮನುಜರಾಗಿ ಬಾಳಿ ಕೋಟಿ ಚೆನ್ನಯರು ಹುಟ್ಟಿದಂತಹ ಪವಿತ್ರವಾದ ಬಿಲ್ಲವ ಸಮಾಜವನ್ನು ಕಟ್ಟಿ ಬೆಳೆಸಿ ನಮ್ಮ ಸಮಾಜ ದ ಯುವಕರ ಮೇಲಿರುವ ಅಪವಾದವನ್ನು ಹೋಗಾಳಾಡಿಸಿ .. #ಸಂಘಟನೆಯಿಂದ ಬಲಯುತರಾಗಿ #ಸುಂದರ,ಬಲಿಷ್ಠ ಬಿಲ್ಲವ ಸಮಾಜ #ಜೈಬೈದೆರ್ಲು -ತೇಜುಬಿರ್ವ ಕೇಪುಳ
I haven't seen anyone from our community in the field of civil service,why so.
ReplyDeleteWe can ,if we show our talent rather than working under the Lords.