Tuesday, January 30, 2018

ಕಂಬಳ ಕ್ಷೇತ್ರದಲ್ಲಿ ವಿಶಿಷ್ಠ ಸಾಧಕ ಕೆದುಬರಿ ಗುರುವಪ್ಪ ಪೂಜಾರಿ ಗುರುಪುರ

ತುಳುನಾಡಿನ ಜಾನಪದ ಕ್ರೀಡೆ `ಕಂಬುಲ-ಕಂಬಳ’.ಆಳುಪ ಅರಸರ ಕಾದಲ್ಲೂ ಕಂಬಳ ನಡೆಯುತ್ತಿತ್ತು ಎಂದುತುಳು ಅಧ್ಯಯನಕಾರರು ಹೇಳುತ್ತಾರೆ. ಹಿಂದಿನ ಕಾಲದ`ಕಂಬುಲ’ ಹಲವು ಮಜಲು ದಾಟಿ ಬಂದಿರುವ `ಕಂಬಳ’ ಇಂದು ತನ್ನದೇ ವಿಶಿಷ್ಠತೆ ಮೈಗೂಡಿಸಿಕೊಂಡಿದೆ.

ಕಂಬಳ ಹಿಂದೆ ಕೃಷಿಕರ ಕೋಣ ಓಡಿಸುವ ಕ್ರೀಡೆಯಾಗಿದ್ದರೆ, ಈಗ ಶ್ರೀಮಂತರ ಪ್ರತಿಷ್ಠೆ ಪ್ರದರ್ಶಿಸುವ ಸ್ಪರ್ಧಾ ಕಣವಾಗಿಮಾರ್ಪಟ್ಟಿದೆ. ಈ ಕ್ರೀಡಾಕ್ಷೇತ್ರದಲ್ಲಿ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿಯ ಹೆಸರು ಕೇಳದವರು ವಿರಳ. ಇವರು ಕಳೆದ 47 ವರ್ಷದಿಂದ ಕಂಬಳ ಕೋಣಗಳ ಮೂಲಕ ಜನಪ್ರಿಯರಾಗಿದ್ದಾರೆ.

ಒಂದಷ್ಟು ಕೃಷಿಭೂಮಿ ಹೊಂದಿರುವ ಗುರುವಪ್ಪನವರು ಬಾಲ್ಯದ ದಿನಗಳಿಂದಲೇ ಕಂಬಳದ ಮೇಲೆ ಆಸಕ್ತರಾಗಿದ್ದರು.ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ಮುಂದೆ, ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ. ಇವರು ಹಿರಿಕಿರಿಯ ಕಂಬಳಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

ಕುಟುಂಬದಲ್ಲಿ ಕಂಬಳಾಸಕ್ತರಿಲ್ಲದಿದ್ದರೂ ತನ್ನ ಸ್ವ-ಹಣಕಾಸಿನ ಬಲದಿಂದಲೇ ಕಂಬಳಕ್ಕೆ ಮುಂದಡಿ ಇಟ್ಟಿರುವ ಇವರು ಪ್ರಥಮ ಬಾರಿಗೆ ಬಾರಾಡಿ ಕಂಬಳದಲ್ಲಿ ಗುರುತಿಸಲ್ಪಟ್ಟಿದ್ದರು. ಇದಕ್ಕಿಂತ ಮುಂಚೆ ಪೂಕರೆ ಕಂಬಳಗಳಲ್ಲಿ ಪಾಲ್ಗೊಂಡಿದ್ದರು. ಆರಂಭದ ದಿನಗಳಲ್ಲಿ ಕೋಣ ಓಡಿಸಿದ್ದರು. ಬಳಿಕ ಜೋಡಿ ಕೋಣ ಸಾಕಿ, ಅವುಗಳನ್ನು ಕಂಬಳಕ್ಕೆ ಕೊಂಡೊಯ್ಯುವ ಗೀಳುಬೆಳೆಸಿಕೊಂಡಿದ್ದಾರೆ.

ಈಗಿನವರಂತೆ ತಾನು ಕಂಬಳಕ್ಕಾಗಿ ತರಬೇತಿ ಪಡೆದುಕೊಂಡಿಲ್ಲ ಎನ್ನುವ 60 ದಾಟಿರುವ ಗುರುವಪ್ಪನವರು, ಇದುವರೆಗೆ ದ ಕ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಲ್ಲಿ ಕೋಣ ಇಳಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಇವರಿಗೆ ಮೆಡಲ್ ಸಿಕ್ಕಿದೆ. ಕದ್ರಿ, ಮೂಲ್ಕಿ, ಮಿಜಾರು, ಬಜಗೋಳಿ,

ಪುತ್ತೂರು, ಕಾವಳಕಟ್ಟೆ-ಮೂಡೂರು ಪಡು, ಉಪ್ಪಿನಂಗಡಿ, ಜೆಪ್ಪು, ಕಟಪಾಡಿ, ಮೂಡಬಿದ್ರೆ, ವೇಣೂರು, ಕಾಜೂರು, ಬೋಳಿಯಾರು, ಪಡುಬಿದ್ರಿ, ಐಕಳ ಬಾವ, ತಿರುವೈಲು, ಬೊಳ್ಳೂರು (ಗುರುಪುರ), ಸುರತ್ಕಲ್, ಪಿಲಿಕುಲ, ಹೊಸಬೆಟ್ಟು ಹೀಗೆ ಎಲ್ಲೆಲ್ಲಿ ಕಂಬಳ ನಡೆಯುತ್ತಿದೆಯೋ ಅಲ್ಲಿ ಕೆದುಬರಿ ಗುರುವಪ್ಪನವರ ಕೋಣಗಳು ಹಾಜರಾಗುತ್ತಿದ್ದವು.“ಗುರುವಪ್ಪನವರ ಕೋಣಗಳು ಬಂದಿದೆಯಾ ?” ಎಂದು ಕೇಳುವವವರೆಗೂ ಅವರಿಂದೂ ಕಂಬಳ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ.

ಇವರು ಅಡ್ಡ ಹಲಗೆ, ಹಗ್ಗದ ಹಿರಿ-ಕಿರಿ ವಿಭಾಗ, ನೇಗಿಲಿನ ಹಿರಿ-ಕಿರಿ ವಿಭಾಗ, ದೊಡ್ಡ ವಿಭಾಗ ಹಾಗೂ ಕಣೆಹಲಗೆ ವಿಭಾಗದ ಕೋಣಗಳ ಸ್ಪರ್ಧೆಯಲ್ಲಿ ಪಳಗಿದವರು. ಕಣೆಹಲಗೆಯಲ್ಲಿ ಯಾರ ಕೋಣಗಳು `ಸೈ’ ಎನಿಸುತ್ತದೋ ಅಂತಹವರು ಕಂಬಳದ ಎಲ್ಲ ವಿಭಾಗ ದಾಟಿ ಬಂದವರು ಎಂಬ ಹೆಗ್ಗಳಿಕೆಯೊಂದಿದೆ. ಗುರುವಪ್ಪನವರು ಅಂತಹ ಕೀತರ್ಿಗೆ ಪಾತ್ರರಾಗಿದ್ದಾರೆ. ಇವರು ಗಳಿಸಿದ ಚಿನ್ನದ ಮೆಡಲ್, ನಗದು ಬಹುಮಾನ ಒಂದೆರಡಲ್ಲ. ಮನೆಯ ತುಂಬೆಲ್ಲ ಪ್ರಶಸ್ತಿ ಪತ್ರಗಳು ಹಾಗೂ ಒಪ್ಪ ಓರಣವಾಗಿಟ್ಟ ಕಂಬಳ ಪರಿಕರಗಳು ಕಂಡು ಬರುತ್ತವೆ.

ಶ್ರೀಮಂತರಿಗೇ ಸೀಮಿತವಾಗಿದ್ದ ಹಿಂದಿನ ಕಂಬಳದಲ್ಲಿ ಪಾಲ್ಗೊಳ್ಳುವಾಗ ಕೆಲವರು ತನ್ನ ಬಗ್ಗೆ ಲಘುವಾಗಿಮಾತನಾಡಿದ್ದುಂಟು. ಆದರೆ ಇಂದು ಅದೇ ವ್ಯಕ್ತಿಗಳು ತನ್ನ ಕಂಬಳ ಸಾಧನೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಗುರುವಪ್ಪ, ಕಂಬಳಕ್ಕಾಗಿ ಸ್ವ-ಸಾಮಥ್ರ್ಯದಿಂದಲೇ ಹಣಕಾಸು ವ್ಯಯಿಸಿದ್ದಾರೆ ಮತ್ತು ಯಾವತ್ತೂ ಹಣಕ್ಕಾಗಿ ಇತರರೆದುರು ಕೈಯೊಡ್ಡಿದವರಲ್ಲ. ಆಡಂಬರವಿಲ್ಲದೆ ಸೂಕ್ಷ್ಮ ಖಚರ್ಿನೊಂದಿಗೆ ಇಂದಿನ ಕಂಬಳಗಳಲ್ಲೂ ಪಾಲ್ಗೊಳ್ಳಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ಕಂಬಳದ ಕೋಣಗಳಿಗೆ ಹಿಂಸೆ ನೀಡುವ ವಿವಾದದ ಬಗ್ಗೆ ಪ್ರಶ್ನಿಸಿದಾಗ, “ಕರೆಯ ಬಳಿ ಕೋಣಗಳಿಗೆ ವಿಪರೀತ ಹೊಡೆಯುವುದು ತಪ್ಪು. ಇನ್ನು ಕೆಲವರು ಬೇರೆ ರೀತಿಯ ಹಿಂಸೆ ನೀಡುವುದುಂಟು. ನನ್ನ ಪ್ರಕಾರ ಓಡುವ ಕೋಣಗಳಿಗೆ ಹೆಚ್ಚು ಹೊಡೆಯಬೇಕಾಗಿಲ್ಲ. ಓಡುವ ಕೋಣಗಳಿಗೆ ಕೋಣ ಓಡಿಸುವವನ ಧ್ವನಿಯೇ ಏಟಾಗಿ ಪರಿಣಮಿಸುತ್ತದೆ. ಯಾಕೆಂದರೆ ಅವು ಅಂತಹ ತರಬೇತಿ ಪಡೆದಿರುತ್ತವೆ. ಮಕ್ಕಳನ್ನು ತಿದ್ದಿ- ತೀಡುವಾಗ ಒಂದೆರಡು ಹೊಡೆಯುವಂತೆ, ಸಾಕಿದ ಕೋಣಗಳಿಗೆ ಪ್ರೀತಿಯಿಂದ ಒಂದೆರಡು ಹೊಡೆಯುವುದು ತಪ್ಪಲ್ಲ. ಈಗಿನ ಕಂಬಳ ಮನರಂಜನೆ ಬದಲಿಗೆ ಜೂಜಿನ ಕೂಟವಾಗಿ ಪರಿಣಮಿಸಿರುವ ಬಗ್ಗೆ ವಿಷಾದವಿದೆ” ಎಂದವರು ಅತ್ಯಂತ ಮಾಮರ್ಿಕವಾಗಿ ಉತ್ತರಿಸುತ್ತಾರೆ.

“ಗುರುವಪ್ಪನವರು ನಿಜವಾದ ಕಂಬಳ ಪ್ರೇಮಿ. ಶ್ರೀಮಂತರಿಗೇ ಮೀಸಲಾಗಿರುವ ಈ ಕ್ರೀಡೆಯಲ್ಲಿ, ಅತಿ ಕಡಿಮೆ ಕೃಷಿ ಹೊಂದಿರುವ ಹಾಗೂ ಆರ್ಥಿಕವಾಗಿ ಸಬಲರಲ್ಲದ ಇವರು ಕಂಬಳಕ್ಕೆ ಕೋಣಗಳನ್ನು ಅಣಿಗೊಳಿಸುವ ಆಸಕ್ತಿ ನಿಜಕ್ಕೂ ಮೆಚ್ಚತಕ್ಕದ್ದು” ಎಂದು ಗುರುಪುರದ ಕಂಬಳ ಪ್ರೇಮಿ ಇಸ್ತ್ರಿ ಬಾಬಣ್ಣ ಹೇಳಿದರೆ, ಎಂದು ಜಗದೀಶ್ ಶೆಟ್ಟಿ ಗುರುಪುರ ಹೇಳುತ್ತಾರೆ. ಏನೇ ಇದ್ದರೂ ಇವರು ಈ ಜಾನಪದ ಕ್ರೀಡೆ ಕಂಬಳದಲ್ಲಿ ಅಪೂರ್ವ ಗನಿಯಂತಿದ್ದು, ಕಂಬಳ ಅಧ್ಯಯನಾಸಕ್ತರಿಗೆ ಮಾರ್ಗದರ್ಶಿಯಾಗುಬಲ್ಲರು. “ಪ್ರಶಸ್ತಿ, ಹಣಕ್ಕಾಗಿ ಕಂಬಳದಲ್ಲಿ ನಾನಿಲ್ಲ” ಎನ್ನುವ ಗುರುವಪ್ಪನವರಿಗೆ ಇದುವರೆಗೂ ಜಿಲ್ಲಾ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ ಎಂಬ ಕೊರಗು ಕಂಬಳ ಅಭಿಮಾನಿಗಳಲ್ಲಿ ಇದೆ. ಕೃಪೆ : ತುಳುನಾಡ ನೆನೆಪು


0 comments: