Tuesday, January 30, 2018

ಬಿಲ್ಲವರ ರಕ್ತದಲ್ಲೆ ಬಿಜೆಪಿ ಕಾಂಗ್ರೇಸ್ ರಾಜಕೀಯ ಚದುರಂಗದಾಟ ? ಇನ್ನೆಷ್ಟು ದಿನ ?

ರಾಜಕೀಯ ದಾಳಕ್ಕೆ ಬಲಿಯಾಗುತ್ತಿದೆಯೇ ಬಿಲ್ಲವ ಸಮಾಜ. ಇಂತದೊಂದು ಪ್ರಶ್ನೆ ಬಿಲ್ಲವ ಸಮಾಜದೊಳಗೆ ಚರ್ಚೆಯಾಗುತ್ತಿದೆ.

ಬಿಜೆಪಿ ಕಾಂಗ್ರೇಸ್ ರಾಜಕೀಯದಾಟಕ್ಕೆ ಬಿಲ್ಲವ ಸಮಾಜದ ಹುಡುಗರು ಬಲಿಯಾಗುತ್ತಿದ್ದಾರೆ. ಹಿಂದುತ್ವ ಎಂದು ಬದುಕಿದ ಗಂಡುಗಲಿ ಪೋಳಲಿ ಅನಂತುನದು ಹೋರಾಟದ ಜೀವನ, ಹಿಂದುತ್ವಕ್ಕೊಸ್ಕರ ಕೇಸ್ ಹಾಕಿಸಿಕೊಂಡು ಕಷ್ಟದಲ್ಲಿದ್ದಾಗ ಯಾವ ಬಿಜೆಪಿ ನಾಯಕನು ನೆರವಿಗೆ ನಿಲ್ಲಲಿಲ್ಲ. ಹಾಡು ಹಗಲಲ್ಲಿ ಮತಾಂಧರು ಮೊಸದಿಂದ ಕೊಲೆಗೈದರು .ಶವ ಮೆರವಣಿಗೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡ ರಾಜಕೀಯ ಪಕ್ಷವೊಂದು ಅನಂತರ ಪೊಳಲಿ ಅನಂತು ಕುಟುಂಬದ ನೆರವಿಗೆ ನಿಲ್ಲಲಿಲ್ಲ.

ಜೀವನ ಪೂರ್ತಿ ಹಿಂದುತ್ವ ಎಂದು ಬದುಕಿದ ಕ್ಯಾಂಡಲ್ ಸಂತುನದು ಇದೆ ಕತೆ . ಹಿಂದುತ್ವ ಎಂದು ಹೋದವ ಮತಾಂದ ಶಕ್ತಿಗಳಿಗೆ ಬಲಿಯಾದ. ಮತ್ತೆ ಬಿಜೆಪಿಯಿಂದ ಹೊರಾಟ ಸಾವಿನ ಮನೆಯಲ್ಲಿ ರಾಜಕೀಯ.ಹೋರಾಟ ಮುಕ್ತಾಯ... ಸಂತು ಅಪ್ಪ ಬೀದಿಪಾಲದರು. ಅವರು ಬಸ್ ಸ್ಟ್ಯಾಂಡ್ ನಲ್ಲಿ ಮಲಗತೊಡಗುತ್ತಿರುವುದು ಸಾಮಾಜಿಕ ತಾಣಗಳಲ್ಲಿ ವೈರಲ್ ಅದಾಗ ಕೆಲವರು ನೆರವಿಗೆ ದಾವಿಸಿದರು.

ಬಿಲ್ಲವ ಯುವಕರು ಬೀದಿಯಲ್ಲಿ ಹೆಣವಾದಾಗ ಕೆಲವರು ರಾಜಕೀಯ ಚಳಿ ಕಾಯಿಸಿಕೊಂಡರು. ಮತ್ತದೆ ಬಿಲ್ಲವರ ಸಾಲು ಸಾಲು ಹತ್ಯೆಗಳು ನಡೆಯಿತು ಬಿಜೆಪಿ ನಾಯಕರು ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡರು. ಕರಾವಳಿಯಲ್ಲಿ ರಾಜೇಶ , ಪ್ರಶಾಂತ್ ಪುಜಾರಿ, ಪ್ರವೀನ್ ಪೂಜಾರಿ, ಹರೀಶ್ ಪೂಜಾರಿ ಇನ್ನೂ ಹತ್ತಾರು ಬಿಲ್ಲವ ಯುವಕರ ರಕ್ತ ಹರಿದಿದೆ. ಬಿಲ್ಲವರ ರಕ್ತದಲ್ಲೆ ಬಿಜೆಪಿ ಕಾಂಗ್ರೇಸ್ ರಾಜಕೀಯ ಚದುರಂಗದಾಟ ಆಡುತ್ತಿವೆ. ಇದು ಇನ್ನೂ ಬಿಲ್ಲವ ಯುವಕರಿಗೆ ಅರ್ಥ ಆಗದಿರುವುದು ಒಂದು ದುರಂತವೆಂದೇ ಎನ್ನಬಹುದು.

ಇದೀಗ ಬಿಲ್ಲವ ಸಮಾಜದ ಯುವಕ ಮಿಥುನ್ ನ ಸರದಿ ,ಹಿಂದುತ್ವ ಎಂದು ಬದುಕುತ್ತಿರುವವ.. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಕೇಸ್ ಗಳಲ್ಲಿ ಪಿಕ್ಸ್ ಮಾಡಲಾಗುತ್ತಿದೆ. ರಮಾನಾಥ ರೈ ಯವರೆ ನೇರ ಪಿಕ್ಸ್ ಮಾಡುತ್ತಿದ್ದಾರೆ ಎಂಬುದು ಸಹ ಬೆಳಕಿಗೆ ಬಂದಿದೆ. ಸದ್ಯ ಜೈಲಿನಲ್ಲಿದ್ದಾರೆ. ಈ ತನಕ ಬೇಳೆ ಬೆಯಿಸಿಕೊಂಡವರು. ಕೂಡ ಆತನ ಬಳಿ ಸುಳಿಯುತ್ತಿಲ್ಲ.. ಎಲ್ಲಿ ಈತ ಬೆಳೆದು ಬಿಡುತ್ತಾನೆ ಎಂಬ ಭಯ ಕೆಲವು ಬಿಜೆಪಿ ನಾಯಕರಿಗೆ ಕಾಡಿರಬೇಕು. ಬಂಟ್ವಾಳದ ಬಿಜೆಪಿ ನಾಯಕರು ಅತನಿಗಾಗಲಿ ಆತನ ಮನೆಯವರ ನೆರವಿಗೆ ನಿಲ್ಲುತಿಲ್ಲ. ಬಸೀರ್ ಹತ್ಯೆಯಲ್ಲು ಮಿಥುನ್ ನನ್ನು ಪಿಕ್ಸ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ vhp ಜಗದೀಶ್ ಶೇಣವ ಬಸೀರ್ ಹತ್ಯೆಯನ್ನು ಸಮರ್ಥಿಸಿಕೊಂಡರು. ರಮಾನಾಥ ರೈಯವರೆ ನಿಮಗೆ ತಾಕತ್ತು ಇದ್ದಾರೆ ಕೇಸ್ ಗೆ ಸಂಬಂದನೇ ಇಲ್ಲದ ಮಿಥುನ್ ಪೂಜಾರಿಯನ್ನು ಪಿಕ್ಸ್ ಮಾಡುವುದನ್ನು ಬಿಟ್ಟು ಸಮರ್ಥನೆ ಮಾಡುವ ಜಗದೀಶ್ ಶೇಣವ ಮೇಲೆ ಕೇಸ್ ಹಾಕಿ.

ಮಿಥುನ್ ನನ್ನು ಎನ್ ಕೌಂಟರ್ ಮಾಡುವ ಪ್ರಯತ್ನಗಳಾಗುತ್ತಿದೆ ಎಂಬ ಮಾಹಿತಿಯನ್ನು ಮಿಥುನ್ ತಾಯಿ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದರು. ಪತ್ರಿಗೋಷ್ಟಿಯಲ್ಲಿ ಮಿಥುನ್ ಅಮ್ಮ ಕಣ್ಣಿರು ಹಾಕಿದರು. ಕೆಲವು ಹಿಂದುಸಂಘಟನೆಯ ಕಾರ್ಯಕರ್ತರು ಸಾಮಾಜಿಕ ತಾಣಗಳಲ್ಲಿ ಪ್ರತಿಭಟನೆ ಮಾಡಿದರು. ಯಾವೊಬ್ಬ ಬಿಜೆಪಿ ನಾಯಕನು ಮಿಥುನ್ ಪೂಜಾರಿ ಕುಟುಂಬದವರಿಗೆ ಸಾಂತ್ವನ ಹೇಳಿ ನೈತಿಕ ಸ್ಫೂರ್ತಿ ತುಂಬುವ ಕೆಲಸಮಾಡಲಿಲ್ಲ.ಅದು ಬಿಡಿ ಹೈಕೋರ್ಟ್ ಮೆಟ್ಟಿಲೇರಿ ಕಾನೂನಾತ್ಮಕವಾಗಿ ಮಿಥುನ್ ಪೂಜಾರಿ ವಿರುದ್ಧ ಷಡ್ಯಂತ್ರ ರಚಿಸುವ ವಿರುದ್ಧ ತಡೆ ತರಬಹುದಿತ್ತಲ್ಲವೇ

.

ಇದರ ವಿರುದ್ದ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ?? ಯಾಕೆ ಪ್ರತಿಭಟನೆ ಮಾಡುತ್ತಿಲ್ಲ.??? ಯಾಕೆ ಬಂದ್ ಕರೆ ಕೊಡುತ್ತಿಲ್ಲ. ?? ಬಾಷಣ ಮಾಡುವ ನಾಯಕರೆಲ್ಲಾ ಈಗ ಎಲ್ಲಿದ್ದಾರೆ?? ಸಾವಿನ ಮನೆಯಲ್ಲಿ ರಾಜಕೀಯ ಮಾಡುವವರು ಬದುಕಿರುವವರ ಮನೆಯಲ್ಲಿ ರಾಜಕೀಯ ಮಾಡುವುದಿಲ್ಲವೇಕೆ?? ಮಿಥುನ್ ಒಳ್ಳೆಯ ಪ್ಯಾಮಿಲಿಯಿಂದ ಬಂದವನು. ಅಪ್ರತಿಮ ದೇಶಭಕ್ತ... ಹಿಂದುತ್ವಕ್ಕೋಸ್ಕರನೇ ಬದುಕುತ್ತಿರುವವನು. ಎಂಬುದನ್ನು ಬಿಜೆಪಿ ನಾಯಕರು ಮರೆತಂತಿದೆ.

ಕಾಂಗ್ರೇಸ್ ಬಿಲ್ಲವ ಯುವಕರನ್ನು ಟಾರ್ಗೇಟ್ ಮಾಡುವುದನ್ನು ನಿಲ್ಲಿಸಬೇಕು. ರಮಾನಾಥ ರೈ ಯವರೇ ನಿಮ್ಮ ಸವಾಲಿಗೆ ಉತ್ತರ ಕೊಡಲು ಸಿದ್ದರಿದ್ದೆವೇ. ನಿಮಗೆ ತಾಕತ್ ಇದ್ದರೆ ಮಿಥುನ್ ನನ್ನು ಎನ್ ಕೌಂಟರ್ ಮಾಡಿ ನೋಡಿ .ಬಿಲ್ಲವರ ತಾಕತ್ತನ್ನು ನಾವು ತೋರಿಸುತ್ತೇವೆ.ನಿಮ್ಮ ರಾಜಕೀಯ ದ್ವೇಷವನ್ನು ರಾಜಕೀಯ ನಾಯಕರಲ್ಲಿ ಸಾಧಿಸಿ. ಅದು ಬಿಟ್ಟು ಬಿಲ್ಲವರಲ್ಲಿ ಸಮಾಜದ ಯುವಕರಲ್ಲಿ ದ್ವೆಷ ಸಾಧಿಸ ಹೊರಟರೆ ಉತ್ತರ ಕೊಡಲು ನಾವು ಸಿದ್ದರಿದ್ದೇವೆ.

ಬಿಸಿ ರಕ್ತದ ಬಿಲ್ಲವ ಯುವಕರೇ ಕಲ್ಲಡ್ಕ ಮಿಥುನ್ ಪೂಜಾರಿ ವಿರುದ್ಧ ರಚಿಸಿದ ರಾಜಕೀಯ ಷಡ್ಯಂತ್ರವನ್ನು ಅರಿತುಕೊಳ್ಳಿ ,ಯಾವುದೇ ರಾಜಕೀಯ ಪಕ್ಷದ ರಾಜಕೀಯ ದಾಳವಾಗಿ ಹರಕೆ ಕುರಿಯಾಗಿ ಬಲಿಯಾಗಬೇಡಿ. -ಪ್ರಶಾಂತ್ ಬಿಲ್ಲವ

0 comments: