Saturday, February 17, 2018

ಉಮಾನಾಥ ಕೋಟ್ಯಾನ್ ಅವರಿಗೆ ಟಿಕೆಟ್ ಇಲ್ಲವಂತೆ - ಸ್ಪಂದನ ಟಿವಿ

ಅಂದು ಜನಾರ್ಧನ ಪೂಜಾರಿಯವರನ್ನು ಅಪಪ್ರಚಾರದ ಷಡ್ಯಂತ್ರಕ್ಕೆ ಸಿಲುಕಿಸಿ, ಜನನಾಯಕರಾಗಿದ್ದ ಅವರನ್ನು ಮುಸ್ಲಿಂರ ಓಲೈಕೆ ಮಾಡುವ ನಾಯಕ ಎಂದು ಬಿಂಬಿಸಿದ ಕೆಲ ನಾಲಾಯಕ್ ಜನರು ಇವತ್ತಿಗೂ ಅದೇ ಚಾಳಿಯನ್ನು ಬಿಲ್ಲವ ಸಮಾಜದ ನಾಯಕರ ಮೇಲೆ ಮುಂದುವರಿಸಿದ್ದಾರೆ‌. ರಾಜಕೀಯ ಪಕ್ಷದಲ್ಲಿ ಬಿಲ್ಲವ ಸಮಾಜದ ನಾಯಕರನ್ನು ಹಣಬಲದಲ್ಲಿ, ಭ್ರಷ್ಟಾಚಾರ ವಿಷಯದಲ್ಲಿ, ಸಂಘಟನಾತ್ಮಕವಾಗಿ ಮುಗಿಸಲು ಅಸಾಧ್ಯ ವಾದ ಕಾರಣ ಅವರ ವ್ಯಕ್ತಿತ್ವ ವನ್ನೇ ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ.


ಅಂದು ಜನಾರ್ಧನ ಪೂಜಾರಿಯವರಿಗೆ ಆದ ನಕಾರಾತ್ಮಕ ಪ್ರಚಾರ ಇಂದು ಮುಲ್ಕಿ ಮೂಡಬಿದಿರೆಯ ಬಲಿಷ್ಠ ಜನನಾಯಕ ಉಮನಾಥ್ ಕೋಟ್ಯಾನ್ ಅವರ ಮೇಲೆ ಪ್ರಯೋಗಿಸಲು ಹೊರಟಿದ್ದಾರೆ. ಸಂಘಟನಾತ್ಮಕ ವಾಗಿ ಪಕ್ಷವನ್ನು 40 ವರ್ಷಗಳ ವರೆಗೆ ಸೇವೆ ಸಲ್ಲಿಸಿದ ನಾಯಕ ಈಗ ಕೆಲವರಿಗೆ "ಜಾತಿವಾದಿ" ಯ ಹಾಗೆ ಕಾಣುತ್ತಿದ್ದಾರೆ, ಅರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಹಿಂದುತ್ವಕ್ಕಾಗಿ ಜೀವನದ ಹೆಚ್ಚಿನ ಸಮಯವನ್ನು ನೀಡಿ, ಆನಂತರ ಪಕ್ಷದ ಹಲವಾರು ಜವಬ್ದಾರಿಯನ್ನು ವಹಿಸಿ ಯಶಸ್ವಿ ಸಂಘಟಕ ಮತ್ತು ಜನನಾಯಕನಾಗಿ ಹೊರಹೊಮ್ಮಿದರು‌. ಆಗ ಅವರ ಜಾತಿ ಯಾರಿಗೂ ಬೇಡವಾಗಿತ್ತು, ಯಾಕೆಂದರೆ ಸಂಘಟನಾತ್ಮಕ ವಾಗಿ ಕೆಲಸಮಾಡಿದವರು. ಆದರೆ ಈಗ ಜನ ನಾಯಕನಾಗಿ ಅವರ ಸ್ವ ಪ್ರಯತ್ನ ಮತ್ತು ಜನರ ನಡುವೆ ಬೆರತು ನಾಯಕರಾದ ಸಂದರ್ಭಗಲ್ಲಿ ಅವರ ಜಾತಿ ಕೆಲವರಿಗೆ ಮಹತ್ವ ಪಡೆಯಲು ಆರಂಭವಾಯಿತು.

ಕಳೆದ ಬಾರಿ ಚುನಾವಣೆಗೆ ಕೇವಲ 10 ದಿನ ಇವರ ಹೆಸರನ್ನು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಅಭ್ಯರ್ಥಿ ಯಾಗಿ ಘೋಷಿಸಿದ ಬಳಿಕ ಇವರು ಕೇವಲ 4000 ಮತಗಳ ಅಂತರದಿಂದ ಸೋಲನ್ನು ಕಂಡರು, ಆದರೂ ಅಂದಿನಿಂದ ಇಂದಿನ ವರೆಗೂ ಅವರು ಪಕ್ಷ ಬಲಪಡಿಸಲು ಹಗಲು ಇರುಳು ಶ್ರಮಿಸುತ್ತಲೇ, ಕಾರ್ಯಕರ್ತರ ಸಂಪರ್ಕದಲ್ಲೇ ಇದ್ದ ನಾಯಕ.

ಇಲ್ಲಿ ಇನ್ನೊಂದು ವಿಚಾರ ಬಂಟ್ವಾಳ ಕ್ಷೇತ್ರದ ಕಳೆದ ಬಾರಿಯ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಸುಮಾರು 18000 ಮತಗಳ ಅಂತರದಿಂದ ಸೋಲನ್ನು ಕಂಡರೂ ಚುನಾವನೆಗೆ 3-4 ತಿಂಗಳು ಇರುವಾಗಲೇ ಅವರು ಅಭ್ಯರ್ಥಿ ಯಾಗಿ ಪರಿವರ್ತನೆ ಯಾತ್ರೆಯಲ್ಲಿ ಸಂಸದರಿಂದ ಹಿಡಿದು ಭಾಷಣ ಮಾಡಿದ ಎಲ್ಲಾ ನಾಯಕರು ಹೇಳಿದರು, ಅದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಅದರೆ 4000 ಅಂತರದಿಂದ ಸೋತ ಉಮನಾಥ್ ಕೋಟ್ಯಾನ್ ಅವರನ್ನು ಅಭ್ಯರ್ಥಿ ಯಾಗಿ ಗೋಷಿಸುವ ಬದಲು ಅವರ ವ್ಯಕ್ತಿತ್ವಕ್ಕೆ ಕಳಂಕ ಬರುವ ಹಾಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಮಾತು ಹೇಳಲು ಕಾರಣ ಬಿಜೆಪಿ ಬೆಂಬಲಿತ ಸ್ಪಂದನ ನ್ಯೂಸ್ ಚಾನಲ್ ನಲ್ಲಿ ಅವರನ್ನು ಜಾತಿವಾದಿ ಎಂದು ಬಿಂಬಿಸಿ ಪುನಃ ಅವರಿಗೆ ಈ ಬಾರೀ ಟಿಕೆಟ್ ಸಿಗುವುದಿಲ್ಲ ಎಂದು ಘೋಷಣೆ ಮಾಡುವ ಈ ಚಾನಲ್ ಗೆ ನಮ್ಮದೂ ಒಂದು ಪ್ರಶ್ನೆ ಇದೆ‌.


ಉಮನಾಥ್ ಕೋಟ್ಯಾನ್ ಅವರನ್ನು ಯಾವ ಆದಾರದ ಮೇಲೆ ಜಾತಿವಾದಿ ಎಂದು ಹೇಳಿದ್ದೀರ? ಅವರು ನಿಮಗೆ ಜಾತಿವಾದಿ ಆಗಲು ಕಾರಣ ಯಾರು? ಮೂಲಗಳ ಪ್ರಕಾರ ವಿಲಾಸ್ ನಾಯಕ್ ಅವರ ಸಾರತ್ಯದ ಟಿವಿ ನ್ಯೂಸ್ ಚಾನಲ್ ಈ ಸ್ಪಂದನ. ಅವರೂ ಉಡುಪಿ ಜಿಲ್ಲೆಯ ಬಿಜೆಪಿ ನಾಯಕ. ಇದೆಲ್ಲ ಅವರ ಅಪ್ಪಣೆಯಿಂದಲೇ ನಡೆದಿರಬಹುದು ಎನ್ನುವ ಅನುಮಾನ ಬಿಲ್ಲವ ಸಮುದಾಯಕ್ಕೆ ಕಾಡುತಿದೆ

0 comments: