Thursday, March 1, 2018

ಬಿಲ್ಲವರೆಂದರೆ ಉರಿದುಕೊಳ್ಳುವ ಅಭಯಚಂದ್ರ ಜೈನ್ ಅವರೇ, ನಿಮ್ಮ ಕೋಪ ಆವೇಶಕ್ಕೆ ಉತ್ತರ ನೀಡಲು ನಿಮ್ಮ ಕ್ಷೇತ್ರದ 62000 ಸಾವಿರ ಬಿಲ್ಲವರು ಬಲ್ಲವರಾಗಿದ್ದಾರೆ

ಮುಲ್ಕಿ ಮೂಡಬಿದ್ರೆ ಶಾಸಕ ಅಭಯ ಚಂದ್ರ ಜೈನ್ ಅವರ ಮಾನಸಿಕತೆ ಹೇಗಿದೆ ಎಂದರೆ ಇವರಿಗೆ ಬಿಲ್ಲವರನ್ನು ಕಂಡರೆ ಎಲ್ಲಿ ಇಲ್ಲದ ಉರಿ ಎಂಬುವುದಕ್ಕೆ ಪೂರಕ ಆಗುವಂತೆ ನಿನ್ನೆ ಮಂಗಳೂರಿನ ಪಿಲಿಕುಳದಲ್ಲಿ 3 ಡಿ ತಾರಾಲಯ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಆಗಮನ ವಿಳಂಬವಾದ ಹಿನ್ನಲೆಯಲ್ಲಿ ಸಚಿವ ಸೀತಾರಾಮ್ ,ಶಾಸಕರು ಹಾಗು ಗಣ್ಯರು ಮಾತನಾಡುತಿದ್ದರು ಈ ವೇಳೆ ಶಾಸಕ ಭಾವ ಅವರು ಕವಿತಾ ಸನಿಲ್ ಅವರ ಮೇಯರ್ ಅವಧಿ ಮುಗಿಯುತಿದೆ ಎಂದು ಸಚಿವರಿಗೆ ಪರಿಚಯಿಸಿದರು " ಅವಧಿ ಮುಗಿದರೆ ಏನಾಯ್ತು ಮುಂದೆ ಅವರಿಗೆ ಉತ್ತಮ ಸ್ಥಾನ ನೀಡಬೇಕು ಎಂದರು " ಇದಕ್ಕೆ ಶಾಸಕ ಭಾವ ಬಾಯಿ ಮಾತಿಗೆ ತಪ್ಪಾಗಿ ಕವಿತಾ ಸನಿಲ್ ರವರಿಗೆ ಮೂಡಬಿದ್ರೆಯಿಂದ ಟಿಕೆಟ್ ಆಕಾಂಕ್ಷಿ ಎಂದರು ,ಈ ಮಾತನ್ನು ಕೇಳಿದ ಕೆರಳಿದ ಅಭಯಚಂದ್ರ ಜೈನ್ ಮೊಇದೀನ್ ಭಾವ ಮೇಲೆ ವಾಗ್ವಾದಕ್ಕೆ ಇಳಿದು ಹಲ್ಲೆ ಮಾಡಲು ಯತ್ನಿಸಿದರು ಎನ್ನುವುದಕ್ಕೆ ಈ ಚಿಕ್ಕ ವಿಡಿಯೋ ತುಣುಕು ಸಾಕ್ಷಿ

ಅಲ್ಲ ಮಾರೆ ಅಭಯಚಂದ್ರ ಜೈನ್ ಅವರೇ ನಿಮ್ಮ ಕ್ಷೇತ್ರದಲ್ಲಿ 192321 ಒಟ್ಟು ಮತದಾರರಲ್ಲಿ ಬಿಲ್ಲವರು ಬರೋಬ್ಬರೀ 62000 ಸಾವಿರ ಇದ್ದಾರೆ ಮರೆಯಬೇಡಿ , ಬಿಲ್ಲವರೆಂದರೆ ಉರಿದುಕೊಳ್ಳುವ ಅಭಯಚಂದ್ರ ಜೈನ್ ಅವರೇ, ನಿಮ್ಮ ಕೋಪ ಆವೇಶಕ್ಕೆ ಉತ್ತರ ನೀಡಲು ನಿಮ್ಮ ಕ್ಷೇತ್ರದ 62000 ಸಾವಿರ ಬಿಲ್ಲವರು ಬಲ್ಲವರಾಗಿದ್ದಾರೆ.ಮುಂಬರುವ ಚುನಾವಣಾ ಫಲಿತಾಂಶ ನಿಮಗೆ ಉತ್ತರವಾಗಲಿದೆ .

0 comments: