Friday, March 2, 2018

ಬಿಲ್ಲವ ಮಹಿಳೆಯ ರಾಜಕೀಯ ಏಳಿಗೆಯನ್ನು ಸಹಿಸದ ಅತೃಪ್ತ ಆತ್ಮಗಳೇ ನಿಮಗೆ ತಾಕತ್ತು ಇದ್ದರೆ ಸಂಸದ ನಳಿನ್ ಕುಮಾರ್ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ

ಮಂಗಳೂರು ಮೇಯರ್ ಕವಿತಾ ಸನಿಲ್ ಶೈಕ್ಷಣಿಕ ವಿಚಾರ ಭಾರೀ ಚರ್ಚೆಯಲ್ಲಿದೆ. ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ ಎಂಬುದು ಸದ್ಯಕ್ಕೆ ಬಿಜೆಪಿಗರು ಮಾಡುತ್ತಿರುವ ಆರೋಪ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡಿದರು.ಅಲ್ಲದೆ ಸಾಮಾಜಿಕ ಜಾಲ ತಾಣದಲ್ಲಿ ಕೆಲ ಮೇಲ್ವರ್ಗದವರೆಂದು ಹಣೆಪಟ್ಟಿ ಕಟ್ಟಿಕೊಂಡ ಜನರು ಬಿಲ್ಲವ ಮಹಿಳೆಯ ಅಪಹಾಸ್ಯ ಮಾಡಿದ್ದಾರೆ .

ತಮ್ಮ ಮೇಲೆ ಮಾಡಿದ ಆರೋಪಕ್ಕೆ ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯೆ ನೀಡಿದ್ದಾರೆ , ನಾನು ಎಸ್ಸೆಸ್ಸೆಲ್ಸಿಯವರೆಗೆ ರೆಗ್ಯುಲರ್ ವಿದ್ಯಾಭ್ಯಾಸ ಮಾಡಿದ್ದೇನೆ. ಪಿಯುಸಿ, ಡಿಗ್ರಿಯನ್ನು ದೂರ ಶಿಕ್ಷಣದ ಮೂಲಕ ಮಾಡಿದ್ದೇನೆ. ನಾನು ಯಾವತ್ತೂ ಸುಳ್ಳು ಹೇಳಿಲ್ಲ. ಇದಕ್ಕೆ ಬೇಕಾದ ದಾಖಲೆಯನ್ನು ನೀಡಲು ಸಿದ್ಧ ಎಂದು ಹೇಳಿದರು. "ಪಾಲಿಕೆ ಮೇಯರ್ ಆಗಲು ಡಿಗ್ರಿ ಆಗಬೇಕು ಎಂದೇನಿಲ್ಲ. ಅಭಿವೃದ್ಧಿ ಕೆಲಸಗಳು ಆಗಬೇಕು. ನನ್ನ ಮಗುವಿನ, ಗಂಡನ ಹಾಗೂ ನನ್ನ ಶಿಕ್ಷಣದ ವಿಚಾರವನ್ನು ಮುಂದು ಮಾಡಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ" ಎಂದು ಕವಿತಾ ಸನಿಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಿಲ್ಲವ ಮಹಿಳೆಯ ರಾಜಕೀಯ ಏಳಿಗೆಯನ್ನು ಅತೃಪ್ತ ಆತ್ಮಗಳೇ ಮತ್ತು ಮೇಲ್ವರ್ಗದವರೆಂದು ಹಣೆಪಟ್ಟಿ ಕಟ್ಟಿಕೊಂಡ ಜನರೇ ,

ಕ್ರೀಡಾ ಕ್ಷೇತ್ರದಿಂದ ಹಿಡಿದು ಕಲೆ ಸಂಸ್ಕೃತಿಯ ಕ್ಷೇತ್ರದಲ್ಲೂ ತನ್ನ ಪ್ರತಿಭೆಯನ್ನು ತೋರ್ಪಡಿಸಿ ದೇಶವಿದೇಶಗಳಲ್ಲಿ ಹಲವಾರು ಪ್ರಶಸ್ತಿ ‌ಮತ್ತು ಸನ್ಮಾನಗಳನ್ನು ಪಡೆದು ಪ್ರಸಿದ್ದಿಗೊಂಡಿರುವ ಇವರು ಒಬ್ಬ ಅಂತರಾಷ್ಟ್ರೀಯ ಕ್ರೀಡಾಪಟು. ಇವರು ಕರಾಟೆ ಮತ್ತು ವೇಟ್ ಲಿಪ್ಟಿಂಗ್ ನಲ್ಲಿ ಸುಮಾರು 59 ಚಿನ್ನದ ಪದಕಗಳನ್ನು ಮತ್ತು 18 ಬೆಳ್ಳಿ ಪದಕಗಳನ್ನು ‌ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಜೆಲ್ಲೆಯ ಹೆಮ್ಮೆಯ ಪ್ರತಿಭೆ. ಕರಾಟೆ, ಸಂಗೀತ, ನೃತ್ಯ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಕೂಡ ತಮ್ಮ ಮೇಯರ್ ‌ಹುದ್ದೆಗೆ ಚೂರು ಚ್ಯುತಿ ಬಾರದಂತೆ, ಸರ್ಕಾರದ ಕೆಲಸ ದೇವರ‌ ಕೆಲಸ ಎಂಬಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಸಾಜ್ ಸೆಂಟರ್ ಮತ್ತು ಗೇಮಿಂಗ್ ಸೆಂಟರ್ ಗಳಿಗೆ ದಾಳಿ ಮಾಡಿ ಅವುಗಳನ್ನು ರದ್ದುಗೊಳಿಸುವ ಮೂಲಕ ಮಂಗಳೂರಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿರುವ ಕವಿತಾ ಅವರು ತಮ್ಮ ಮೇಯರ್ ಅವಧಿಯಲ್ಲಿ ‌ ಜಿಲ್ಲೆಯಲ್ಲಿ ಒಂದು ಹೊಸ ಸಂಚಲನವನ್ನು ಮೂಡಿಸುತ್ತಿರುವುದಂತು ಸತ್ಯ. ತಾವು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಯಾವುದೇ ಪಕ್ಷ, ಜಾತಿ, ಬೇಧ ಮಾಡದೆ ಎಲ್ಲಾ ಪಕ್ಷದ ಸಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ನೇರ ನಿಲುವನ್ನು ತೋರಿಸುವ ಇವರು ಸದಾ ಚಟುವಟಿಕೆಯಿಂದ ಇದ್ದು ಸಕ್ರಿಯವಾಗಿ ತಮ್ಮ ಕರ್ತವ್ಯ ಪಾಲಿಸಿ ನಿಜಕ್ಕೂ ಅಪರೂಪದಲ್ಲಿ ಅಪರೂಪದವಾದ ಮೇಯರ್ ಎಂದೆನಿಸಿಕೊಂಡಿದ್ದಾರೆ. ಕಾವ್ಯ ಸಾವಿನ ಹೋರಾಟದಲ್ಲಾಗಲಿ ಅಥವಾ ದೀಪಕ್ ಕೊಲೆಯ ವಿಚಾರದಲ್ಲಿ ಆಗಲಿ ನ್ಯಾಯದ ಪರವಾಗಿ ಹೊರಾಟ ನಡೆಸಿದವರಲ್ಲಿ ಕವಿತಾ ಸನಿಲ್ ಅವರೂ ಕೂಡ ಮುಂಚೂಣಿಯಲ್ಲಿದ್ದಾರೆ‌. ಬಿ.ಜೆ.ಪಿ ಪಕ್ಷದ ಬೆಂಬಲಿಗರಿಂದ ನಡೆದ "ಅಮ್ಮನೆಡೆಗೆ ನಮ್ಮ ನಡೆ ಕಾರ್ಯಕ್ರಮದಲ್ಲೂ ಪಕ್ಷ ಭೇದ ಮರೆತು ಭಾಗವಹಿಸಿ ಜನತೆಯ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.

ನಮ್ಮ ಬಿಲ್ಲವ ಸಮಾಜದ ಮಹಿಳೆ ಇಷ್ಟೊಂದು ಸಾಧನೆ ಮಾಡಿದ್ದು ನಿಮಗೆ ನಿದ್ದೆಗೆಡುವಂತೆ ಮಾಡಿದೆ ,ನಮ್ಮ ಸಮುದಾಯದವರ ಮೇಲೆ ನಿಮ್ಮಂತ ಜನ ಸುಳ್ಳು ಆರೋಪ ಮಾಡಿ ತೇಜೋವದೆ ಮಾಡಲು ಹೊರಟರೆ ಬಿಲ್ಲವ ಸಮುದಾಯ ಸುಮ್ಮನೆ ಇರಲಾರದು ನೆನಪಿಟ್ಟು ಕೊಳ್ಳಿ,ನಿಮಗೆ ತಾಕತ್ತು ಅಥವಾ ನೈತಿಕತೆ ಇದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ನಳಿನ್ ಕುಮಾರ್ ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಕಲೆ ಹಾಕಿ ,ನಿಮಗೆ ಅದು ಸಾಧ್ಯವಿಲ್ಲ ಎಂದರೆ ಯೌಟ್ಯೂಬ್ ಅಥವಾ ಫೇಸ್ಬುಕ್ ನಲ್ಲಿ ಸರ್ಚ್ ಮಾಡಿ ಉತ್ತರ ನಿಮಗೆ ಸಿಗುತ್ತದೆ ,ಹಾಗಂತ ನಾವು ನಳಿನ್ ಕುಮಾರ್ ಕಟೀಲ್ ಬಗ್ಗೆ ನಿಮ್ಮ ಮಾನಸಿಕತೆ ರೀತಿಯಲ್ಲಿ ಅಪಹಾಸ್ಯ ಮಾಡಲು ಹೋಗುವುದಿಲ್ಲ ,ಬಿಲ್ಲವರ ಮೇಲೆ ಕೈ ತೋರಿಸುವ ಮೊದಲು ಎಚ್ಚರ ವಹಿಸಿ ಇಲ್ಲವಾದರೆ ನಮ್ಮ ಬಳಿ ಇರುವ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ನಿಮ್ಮ ಭಾಷೆಯಲ್ಲೇ ನಿಮ್ಮವರಿಗೆಲ್ಲ ಉತ್ತರ ನೀಡಬೇಕಾಗಬಹುದು .

0 comments: