Sunday, January 20, 2019

ಬಿಲ್ಲವ ಎಂಬ ಕಾರಣಕ್ಕೆ ಈ ಧೋರಣೆಯೇ ? ಅಥವಾ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ ಎಂಬ ಕಾರಣಕ್ಕೆಯೇ

೪೦ ವರ್ಷಗಳಿಂದ ತನ್ನ ಜೀವನವನ್ನೇ  ಹಿಂದುತ್ವಕ್ಕೆ ಮುಡುಪಾಗಿಟ್ಟ ಸತ್ಯಜಿತ್ ಸುರತ್ಕಲ್ ಅವರು ಮುಂಬರುವ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ ಎಂಬ ಕಾರಣಕ್ಕೆ ಅವರನ್ನು ಕೆಲ ಪಕ್ಷದ ವಿಚಾರದಲ್ಲಿ ಕಾಲು ಕಸ ಮಾಡಲು ಹೊರಟಿರುವುದು ತಿಳಿದು ಬಂದಿದೆ.ಈ ಹಿಂದೆ ಜಿಲ್ಲೆಯಲ್ಲಿ ಖಾಲಿ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಗೆ ಸತ್ಯಜಿತ್ ಅವರ ಹೆಸರು ಕೇಳಿ ಬಂದಿತ್ತು ,ಇದನ್ನು ತಪ್ಪಿಸಲಾಯಿತು.ಇದೀಗ  ಉಳ್ಳಾಲದ ಮುಡುಪಿನಲ್ಲಿ ಬಿಜೆಪಿ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಸತ್ಯಜಿತ್  ಸುರತ್ಕಲ್ ಅವರನ್ನು ಆಹ್ವಾನಿಸಬೇಕೆಂದು ಅದೆಷ್ಟೇ ಕಾರ್ಯಕರ್ತರು ಪಟ್ಟು ಹಿಡಿದರೂ  ಪಕ್ಷದ  ಸರ್ವಾಧಿಕಾರಿ ನಾಯಕರೊಬ್ಬರ  ಧೋರಣೆಯಿಂದ ಸತ್ಯಜಿತ್ ಸುರತ್ಕಲ್ ಅವರನ್ನು ಕಾರ್ಯಕ್ರಮದಿಂದ ದೂರ ಇಡಲಾಯಿತು. ಸರ್ವಾಧಿಕಾರಿ ನಾಯಕರೇ ನಿಮ್ಮ ವೈಯಕ್ತಿಕ ವಲಯದಲ್ಲಿ ರಾಜಕೀಯ ಅದೆಷ್ಟು ಬೇಕಾದರೂ ಮಾಡಿ ,ನಮ್ಮ ಸಮುದಾಯದ ನಾಯಕನನ್ನು ಹೊಸಕಿ  ರಾಜಕೀಯ ಮಾಡಲು ಹೊರಟರೆ ನಿಮಗೆ ನಿಮ್ಮ ರೀತಿಯಲ್ಲೇ  ರಾಜಕೀಯ ಮಾಡಿ ನಾವು ಬುದ್ಧಿ ಕಲಿಸುತ್ತೇವೆ

0 comments: