Friday, January 18, 2019

ಕರಾವಳಿಯ ಜನಪ್ರಿಯ ವಿಜೆ,ನಟಿ, ಟಿವಿ ಆಂಕರ್, ನಿರ್ದೇಶಕಿ ಹೆಮ್ಮೆಯ ಬಹುಮುಖ ಪ್ರತಿಭೆ ವಿಜೆ_ಚೈತ್ರಾ_ಅಂಚನ್


"ವಿಜೆ_ಚೈತ್ರಾ_ಅಂಚನ್"
ನಟಿ,ನಿರೂಪಕಿ,ನಿರ್ದೇಶಕಿ

ಕರಾವಳಿಯ ಜನಪ್ರಿಯ ವಿಜೆ,ನಟಿ, ಟಿವಿ ಆಂಕರ್, ನಿರ್ದೇಶಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಮಿನುಗುತ್ತಿರುವ ನಮ್ಮ ಹೆಮ್ಮೆಯ ಬಹುಮುಖ ಪ್ರತಿಭೆ ವಿಜೆ_ಚೈತ್ರಾ_ಅಂಚನ್

ಉಡುಪಿಯ ಜಿಲ್ಲೆಯ ಬ್ರಹ್ಮಾವರದ ಶಂಕರ್ ಜತ್ತನ್ ಮತ್ತು ಶ್ರದ್ಧಾ ದಂಪತಿಗಳ ಮಗಳಾದ ಚೈತ್ರಾ ಅಂಚನ್'ರವರು ಪ್ರತಿಭಾವಂತ ವಿದ್ಯಾರ್ಥಿ. ಶಾಲಾ ಕಾಲೇಜು ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ರಾಜ್ಯಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನೂ ಪಡೆದಿದ್ದಾರೆ.

ಮಂಗಳೂರಿನ ಜೂನಿಯರ್ ಅನುಶ್ರೀ ಎಂದೇ ಪ್ರಸಿದ್ಧರಾಗಿರುವ ಇವರು ಹಲವು ವೇದಿಕೆಗಳ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟವಾದ ಮಾತಿನ ಶೈಲಿಯ ನಿರೂಪಣೆಯ ಮೂಲಕ ತುಳುನಾಡಿನದ್ಯಂತ ಎಲ್ಲರ ಮನೆಮಾತಾಗಿದ್ದಾರೆ.

ಬರ್ಸಾ ,ದೋಸ್ತಿಲು ಮತ್ತು ತೊಟ್ಟಿಲ್ ಹೀಗೆ ಹಲವು ತುಳು ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಗಜಕೇಶ್ವರ್ ನಿರ್ದೇಶನದ  'ಮುತ್ತು_ಮಹಥಾ' ಕನ್ನಡ ಚಿತ್ರದಲ್ಲೂ ನಟಿಸಿದ ಇವರು ಶಟರ್ದುಲಯಿ, ಅಧ್ಯಾಯ, ಪಮ್ಮಣ್ಣೆ_ದಿ_ಗ್ರೇಟ್, ದೊಂಬರಾಟ, ಅಂಬರ್_ಕ್ಯಾಟರಸ್ಸ್  ಇನ್ನೂ ಅನೇಕ ತುಳುಚಿತ್ರಗಳಲ್ಲಿ ಇವರ ಹಿನ್ನೆಲೆ ಧ್ವನಿ ನೀಡಿದ್ದಾರೆ.

ತುಳು ಚಲನಚಿತ್ರ 'ಮಸ್ಕಿರಿ' ಚಿತ್ರದಲ್ಲಿ ಗೆಸ್ಟ್ ಪಾತ್ರದಲ್ಲಿ ಚೈತ್ರಾ ಕೂಡಾ ಕಾಣಿಸಿಕೊಂಡಿದ್ದಾರೆ. 'ಅಮರ್_ಜವಾನ್' ದೇಶ ಪ್ರೇಮವನ್ನು ಸಾರುವ ಕಿರುಚಿತ್ರದಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಯ್ಯುಟೂಬ್'ನಲ್ಲಿ ಬಹಳಷ್ಟು ವೀಕ್ಷಕರ ಬೆಂಬಲವನ್ನು ಪಡೆದುಕೊಂಡಿದೆ.

ಇವರ ಮೊದಲ ವೃತ್ತಿ ಜೀವನ ಆರಂಭ ತುಳು ಚಿತ್ರಗಳ ವಿಮರ್ಶೆಗಳನ್ನು ಪ್ರಸ್ತುತಪಡಿಸುವ ಸ್ಥಳೀಯ ಟಿವಿ ಚಾನೆಲ್ಗಾಗಿ ಕೆಲಸ ಮಾಡುತ್ತಿದ್ದರು. ಪ್ರಸುತ್ತ ಕಸ್ತೂರಿ_ಕನ್ನಡ_ಚಾನೆಲ್'ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರತಿಯೊಂದು ಕ್ಷೇತ್ರದಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲೆಂದು ನಮ್ಮಲೆರ ಶುಭಹಾರೈಕೆಗಳು.
©BillavasPoojarys.










0 comments: