Saturday, January 12, 2019

ನಟನೆಗೂ ಸೈ ಚಿತ್ರ ಕಲೆಗೂ ಸೈ ಬಿಲ್ಲವ ಯುವ ಪ್ರತಿಭೆ ರವಿ ಸಾಲಿಯಾನ್


"ಕಲಾನಿಧಿ #ರವಿ_ಸಾಲಿಯಾನ್"
#ಚಿತ್ರಕಲಾವಿದರು,#ನಟರು

#ನೇಸರನಂತೆ_ಚಿತ್ರಕಲೆಯಲ್ಲಿ_ರಮಿಸುವ_ರವಿ_ಸಾಲಿಯಾನ್  
#ಇವರ_ಒಂದೊಂದು_ಚಿತ್ರವ_ಮನ_ಪುಳ

ಒಬ್ಬ ವ್ಯಕ್ತಿಗೆ ಬದುಕಲು ನೂರಾರು ದಾರಿ ಇದೆ ಆ ದಾರಿ ಸರಿಯಾಗಿ ಇದೆಯಾ ಎಂಬುದಕ್ಕೆ ನಮ್ಮ ಕಲೆ ಕೂಡ ತುಂಬಾ ಮುಖ್ಯವಾಗಿರುತ್ತೆ.ಸಣ್ಣ ವಯಸ್ಸಿನಲ್ಲಿ ಚಿತ್ರ ಬಿಡಿಸುವ ಅಭ್ಯಾಸವನ್ನು ಬೆಳೆಸಿಕೊಂಡ ರವಿ ಈಗ ಪೆನ್ಸಿಲ್ ಹಿಡಿದರೆ ಸಾಕು ಜೀವ ತುಂಬುವ ಚಿತ್ರ ತನ್ನ ಕೈಚಳಕದಿಂದ ರೂಪಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಎಂಬ ಪುಟ್ಟ ಗ್ರಾಮದ ಬಿಯಪಾದೆಯ ಆನಂದ ಪೂಜಾರಿ ಕುಸುಮ ಪೂಜಾರಿ  ದಾಂಪತ್ಯದ ತೃತೀಯ ಮಗನಾದ ರವಿ ಸಾಲಿಯಾನ್ ಐಟಿಐ  ಮುಗಿಸಿ ಉದ್ಯೋಗ ಆರಿಸಿಕೊಂಡು ಅದರಲ್ಲೂ ಏನಾದರೂ ಸಾಧನೆ ಮಾಡಬೇಕು ನೂರಾರು ಕನಸನ್ನು ಕಟ್ಟಿಕೊಂಡು ಬೆಂಗಳೂರಿಗೆ ಬಂದರು ಇವರ ಕಲೆಯನ್ನು ಗುರುತಿಸಿ ಕಲಾ ಸಾಂಗತ್ಯದ ದಿನೇಶ್ ಶಾಲಾ ಪ್ರಾಜೆಕ್ಟ್ ಗಳಿಗೆ ಚಿತ್ರ ಬಿಡಿಸುವ ಕೆಲಸವನ್ನು ಕೊಟ್ಟು ಇವರನ್ನು ಪ್ರೋತ್ಸಾಹಿಸಿದರು.

ಬೆಂಗಳೂರು ಖಾಸಗಿಯ ಕಂಪನಿಯೊಂದರಲ್ಲಿ ಉದ್ಯೋಗವನ್ನು ಆರಿಸಿಕೊಂಡರು 
ತನ್ನ ಬಿಡುವಿನ ಸಮಯದಲ್ಲಿ ಪೆನ್ಸಿಲ್ ಹಿಡಿದು ತನಗೆ ಇಷ್ಟ ಆದ ಚಿತ್ರವನ್ನು ಬಿಡಿಸಿ ವಾಟ್ಸಾಪ್ ಫೇಸ್ಬುಕ್ ಗೆ ಅಪ್ಲೋಡ್ ಮಾಡುತ್ತಿದ್ದರು ಅವರು ಬಿಡಿಸಿದ ಚಿತ್ರವನ್ನು ತುಂಬಾ ಜನರು ಇಷ್ಟ ಪಡುತ್ತಾರೆ ಬರ್ತಡೇ ಅನೇಕ ಶುಭ ಸಮಾರಂಭಗಳಿಗೆ ಚಿತ್ರಗಳನ್ನು ಬಿಡಿಸಿ ಉಡುಗರೆಯಾಗಿ ನೀಡುತ್ತಾರೆ 

ಪೆನ್ಸಿಲ್ ಕೈನಲ್ಲಿ ಹಿಡಿದು ಸಾಕಷ್ಟು ಚಿತ್ರ ಬಿಡಿಸಿರುವ ರವಿ ಸಾಲಿಯಾನ್ ಬ್ರೆಜಿಲ್ ನ. ಫಾಬಿಯೊ ರಾಂಗಲ್ ಅವರು ಮಾರ್ಗದರ್ಶಕರು ಈಗಾಗಲೇ ಪೆನ್ಸಿಲ್ ಕಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಫಾಬಿಯೊ ರಾಂಗೆಲ್ ಚಿತ್ರಕಲೆಯ ಕುರಿತು ಸಲಹೆ ಪ್ರೋತ್ಸಾಹಗಳನ್ನು ನೀಡುತ್ತಾರೆ

ಅವರಿಗೆ ಇಂಗ್ಲಿಷ್ ಬಾರದಿರುವ ಕಾರಣ ರವಿ ಸಾಲ್ಯಾನ್ ಅವರು ಗೂಗಲ್ ಟ್ರಾನ್ಸ್ ಲೇಟ್ ಮಾಡಿ ಪೋರ್ಚುಗೀಸ್ ಭಾಷೆಯಲ್ಲಿ ಸಂದೇಶ ಗಳಿಸುತ್ತಾರೆ ಅದಕ್ಕೆ ಫಾಬಿಯೊ ರಾಂಗೆಲ್ ಪೋರ್ಚುಗೀಸ್ ಭಾಷೆಯಲ್ಲಿ ಕಳಿಸುವ ಉತ್ತರವನ್ನು ಇಂಗ್ಲಿಷ್ ಭಾಷೆಗೆ ಬದಲಾಯಿಸಿ ಓದುತ್ತಾರೆ ಹೀಗೆ ಅವರಿಂದ ಅನೇಕ ವಿಷಯಗಳನ್ನು ಕಲಿತೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರವಿ ಸಾಲಿಯಾನ್

 ನಾನು ರಷ್ಯಾದ‌ ವಾಡಿಮಿರ್ ಅವರನ್ನು ಆರಾಧಿಸುವೆ ತುಂಬಾ ವಿಚಾರಗಳಲ್ಲಿ ಅವರನ್ನು ಅನುಕರಿಸುತ್ತೇನೆ ಎನ್ನುವ ರವಿ ಸಾಲಿಯಾನ್ ನನ್ನ ನೆಚ್ಚಿನ ಹೀರೋ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಬಿಡಿಸಿ ಅವರ ಕೈಯಲ್ಲಿ ಕೊಟ್ಟ ಬಳಿಕ ಅವರು ಪ್ರೀತಿಯಿಂದ ಕೇಳಿದರು ನಿಮ್ಮ ಹೆಸರನ್ನು ಇದರಲ್ಲಿ ಹಾಕಿದ್ದೀರಾ ಎಂದು... ಆ ಕ್ಷಣ ರವಿ ಸಾಲಿಯಾನ್ ಅವರಿಗೆ ಮರೆಯಲಾಗದ ಕ್ಷಣ ಎನ್ನುತ್ತಾರೆ.......

ಒಬ್ಬ ಕಲಾವಿದನಿಗೆ ತಾನು ಇಷ್ಟಪಟ್ಟು ಬಿಡಿಸಿದ ಚಿತ್ರಕ್ಕೆ ಸಿಗಬೇಕಾದ ಪ್ರೀತಿ ಆಶೀರ್ವಾದ ಇದೆ. ಇನ್ನೇನು ಬೇಕು ಅಲ್ವಾ.ಕೆಲವು ಚಿತ್ರನಟರ ಸಣ್ಣ ವಯಸ್ಸಿನ  ಚಿತ್ರವನ್ನು ಮಾಡಿ ಮುಗಿಸಿದ್ದಾರೆಸುದೀಪ್. ಪುನೀತ್ ರಾಜಕುಮಾರ್. ಯಶ್. ಶಿವಣ್ಣ. ದರ್ಶನ್. ರಕ್ಷಿತ್ ಶೆಟ್ಟಿ. ಜೊತೆಗೆ ಧರ್ಮಸ್ಥಳದ ಪೂಜ್ಯರು ಡಾ ಡಿ ವೀರೇಂದ್ರ ಹೆಗಡೆ ಅವರ ಚಿತ್ರವನ್ನು ಬಿಡಿಸಿ ಕೊಡುವ ಅವಕಾಶ ಸಹದೇವ್ ನಿರ್ದೇಶನದ. ಪುಟ್ಟರಾಜ್ (ಲವರ್ ಆಫ್ ಶಶಿಕಲಾ) ಚಿತ್ರತಂಡ ಮಾಡಿತು  ಆ ಕೆಲಸವನ್ನು ಮುಗಿಸಿದ್ದೇನೆ ಎಂದು ತುಂಬಾ ಖುಷಿಯಿಂದ ಹೇಳುತ್ತಾರೆ.

ಅವರಿಗೆ ನಟನೆಯೂ ತುಂಬಾ ಇಷ್ಟವಂತೆ ನಾಗರಾಜ್ ಕೋಟೆ ರಚನೆಯ  ಜೋಗಿಯ ರಾಣಿ ನಾಟಕಕ್ಕೆ ಬಣ್ಣ ಹಚ್ಚಿದ್ದೇರೆ.ರವಿ ಸಾಲಿಯಾನ್ ರಾಜೇಶ್ ಧ್ರುವ ನಿರ್ದೇಶನದ ಆಮಂತ್ರಣ ಎಂಬ ಕಿರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ ಮತ್ತೆ ರಾಜೇಶ್ ಧ್ರುವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ತದನಂತರ ಚಿತ್ರದಲ್ಲಿ ನಟಿಸಿದ್ದಾರೆ.ಅಲ್ಲದೆ ಅಜಯ್ ಟಿ.ಪಿ ನಿರ್ದೇಶನದ ಚಿಯರ್ಸ್ ಮತ್ತು ಗಾಂಧರ್ವ ಗೌಡ ನಿರ್ದೇಶನದ ಗರ್ನಲ್ ಕಿರುಚಿತ್ರದಲ್ಲಿ ನಟಿಸಿ ರುತ್ತಾರೆ
ಇತ್ತೀಚಿಗೆ ರಿಲೀಸ್ ಆದ ನರೇಶ್ ಕುಮಾರ್ ನಿರ್ದೇಶನದ ರಾಜು ಕನ್ನಡ ಮೀಡಿಯಂ ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಸಂಜೀವ ತಗಡೂರು ನಿರ್ದೇಶನದಲ್ಲಿ ಮೂಡಿಬಂದ ಪುಟ್ಮಲ್ಲಿ ಧಾರಾವಾಹಿಯಲ್ಲಿ  ಸಣ್ಣ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಗೀತಾಂಜಲಿ ಎಂಬ ಧಾರಾವಾಹಿಯಲ್ಲಿ ಕಿರಣ್ ಎಂಬ ಪಾತ್ರಕ್ಕೆ ಜೀವ ತುಂಬಿರುತ್ತಾರೆ ಆ ಪಾತ್ರದಿಂದ ತುಂಬಾ ಅನುಭವ ಪಡೆದುಕೊಂಡಿದ್ದೇನೆ ಸಾಕಷ್ಟು ಮಂದಿ ಸೀರಿಯಲ್ ನೋಡಿ ಗುರುತು ಹಿಡಿದು ಮಾತನಾಡಿಸುತ್ತಾರೆ ಎಂದು ತುಂಬಾ ಖುಷಿಯಿಂದ ಹೇಳುತ್ತಾರೆ.

ಶಾಲಾ ಕಾಲೇಜ್ ದಿನಗಳಲ್ಲಿ ಚಿತ್ರ ಬಿಡಿಸುತ್ತಿದ್ದ ರವಿ ಸಾಲಿಯಾನ್ ಅವರಿಗೆ  ಶಾಲಾ ಶಿಕ್ಷಕರು ಆದ ಶೀನಪ್ಪ ನೂಚಿಲ ಅವರು ಪ್ರೋತ್ಸಾಹಿಸುತ್ತಿದ್ದರು
ಯಾವುದೇ ತರಬೇತಿ ಪಡೆಯದಿದ್ದರೂ ಉತ್ತಮವಾಗಿ  ಪೆನ್ಸಿಲ್ ಸ್ಕೆಚ್ ಆಯಿಲ್ ಪೇಂಟಿಂಗ್ ಕಲರ್ ಪೇಂಟಿಂಗ್ ತುಂಬಾ ಅದ್ಭುತವಾಗಿ ಮಾಡುತ್ತಾರೆ ರವಿ  ಸಾಲಿಯಾನ್ ತುಂಬ ಖುಷಿ ಪಡಬೇಕಾದ ಸಂಗತಿ ಎಂದರೆ ರವಿ ಸಾಲಿಯಾನ್ ಅವರ ಅಣ್ಣ ಜಯಂತ್ ಸಾಲಿಯಾನ್ ಕೂಡ ತುಂಬಾ ಅದ್ಭುತ ಚಿತ್ರ ಕಲಾವಿದ  ಹಾಗೂ ರಂಗೋಲಿ ಕಲಾವಿದ. ಅಲ್ಲದೆ ಊರಿನಲ್ಲಿ ತುಂಬಾ ಮಧು ಮಗ ಮದುಮಗಳ ಕೈಗೆ ಅಣ್ಣ ತಮ್ಮ ಜೊತೆಯಾಗಿ ಮೆಹಂದಿಯನ್ನು ಹಚ್ಚಿರುತ್ತಾರೆ
ಮೆಹೆಂದಿಯನ್ನು ನಾನು ಎಲ್ಲಿ ಕೂಡ ಕಲಿತಿಲ್ಲ ಎನ್ನುತ್ತಾರೆ ರವಿ ಸಾಲಿಯಾನ್ ಅವರ ಮುಂದೆ ಅಂಗೈ ಹಿಡಿದು ಕೂತರೆ ಸುಂದರವಾದ ರೇಖೆಯನ್ನು ಅವರದ್ದೇ ಆದ ಶೈಲಿಯಲ್ಲಿ ಮೆಹೆಂದಿ ಬಿಡಿಸುತ್ತಾರೆ

ನಟನೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ರವಿ ಸಾಲಿಯಾನ್ ಅವರಿಗೆ ಒಬ್ಬ ನಟನ ಆಗಬೇಕಾದರೆ ಅದಕ್ಕೆ ಯಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕು ರವಿ ಸಾಲಿಯಾನ್ ದುಡಿಯುತ್ತಿದ್ದ ಖಾಸಗಿಯ ಕಂಪನಿಯಲ್ಲಿ ಶಿಫ್ಟ್ ವರ್ಕ್ ಇದ್ದ ಕಾರಣ ಅವರಿಗೆ ಚಿತ್ರಕಲೆ ನಟನೆಗೆ ಹೆಚ್ಚು ಸಮಯ ಸಾಕಾಗುತ್ತಿರಲಿಲ್ಲ ಅದೇ ಕಾರಣಕ್ಕೆ ಅವರು ಮಾಡುತ್ತಿದ್ದ ಖಾಸಗಿ ಕಂಪನಿಗೆ ವಿದಾಯ ಹೇಳಿ ಮಯನ್ ಟ್ಯಾಟೂ ಬೆಂಗಳೂರು ಪುನೀತ್ ಕುಮಾರ್ ಅವರ ಬಳಿ ಟ್ಯಾಟು ಕಲಿತರು..... ರವಿ ಈಗ ಅದ್ಬುತ ಟ್ಯಾಟೋ ಕಲಾವಿದ..ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ಮಾತು ನಿಜ. ಆದರೆ ಒಬ್ಬ  ಚಿತ್ರ ಕಲಾವಿದನ ಕಲೆಗೆ ಬೆಲೆ ಕೇಳಿ  ಯಾಕೆ ಅಂದ್ರೆ ಆ  ಕಲಾವಿದ ಆ ಚಿತ್ರಕ್ಕೆ  ಆತನ ಸಮಯ,ಶ್ರಮ,ಒಂದಷ್ಟು  ವೆಚ್ಚವನ್ನೂ ಮೀಸಲಿಟ್ಟಿರುತ್ತಾರೆ

ಹಸಿರು ಪರಿಸರವನ್ನು ತುಂಬಾ ಇಷ್ಟ ಪಡುವ ರವಿ ನನ್ನ ಊರೇ ನನಗೆ ತುಂಬಾ ಇಷ್ಟ. ಸೌತ್ ಕಡೆ ತಿಂಡಿ ತಿನಸುಗಳು ತುಂಬಾನೇ ಇಷ್ಟ.ನಮ್ಮ ಊರ ಪ್ರತಿಭೆಗೆ ನಮ್ಮ ಊರಿನವರೇ ನಮಗೆ  ಪ್ರೋತ್ಸಾಹ ನೀಡಿದರೆ ತುಂಬಾ ಖುಷಿಯಾಗುತ್ತೆ ಎನ್ನುತ್ತಾರೆ.ಬೆಳೆದಿದ್ದವರನ್ನು ಬೆಳೆಸೋ ಬದಲು ಬೆಳೆಯೋರನ್ನ ಬೆಳೆಸಿ ,ದೊಡ್ಡ ಮರಕ್ಕೆ ನೀರು ಹಾಕೋ ಬದಲು ಸಸಿ ಗೆ ನೀರು ಹಾಕಿ ಬೆಳೆಸಿ ಮುಂದೊಂದು ದಿನ ಆ ಮರ ನಮ್ಮ ಊರು ಹೆಸರನ್ನು ಎತ್ತರಕ್ಕೆ ತೋರಿಸಬಹುದು.
ಬರಹ: ಪ್ರತಿಮಾ ಹೆಬ್ರಿ.

1 comment: