"#ಸ್ವರ_ಮಾಣಿಕ್ಯ_ಶ್ರೀ_ಹರೀಶ್_ಪೂಜಾರಿ"
ಜನಪ್ರಿಯ ಸ್ಯಾಕ್ಸೋಪೋನ್, ನಾದಸ್ವರ ವಾದಕರು.
#Billavas_Poojarys
ಕಿನ್ನಿಗೋಳಿ ಕೆಳೆಂಜೂರು ಜಗನಾಥ ಪೂಜಾರಿ ಮತ್ತು ಮೂಲ್ಕಿ ಶಂಕುತಳಾ ಪೂಜಾರಿ ದಂಪತಿಗಳ ಸುಪುತ್ರರಾಗಿರುವ ಹರೀಶ್ ಪೂಜಾರಿಯವರು ತನ್ನ ಶಿಕ್ಷಣವನ್ನು ಮಾಯನಗರಿ ಮುಂಬೈನಿಂದ ಪಡೆದು, ತನ್ನ 3ನೇ ವಯಸ್ಸಿನಲ್ಲಿಯೇ "ಬ್ಯಾಂಡ್ ಮಾಸ್ಟರ್" ಎಂದೇ ಖ್ಯಾತರಾಗಿದ್ದ ತನ್ನ ಅಜ್ಜ ಮುತ್ತಪ್ಪ ಕೋಟ್ಯಾನ್ ಯವರಿಂದ ವಾದ್ಯ, ನಾದಸ್ವರದ ಅಭ್ಯಾಸವನ್ನು ಪಡೆದುಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಜೀವಾಳವಾಗಿರುವ ಇವರಿಗೆ ಈ ಕ್ಷೇತ್ರದಲ್ಲಿಯೇ ಮುಂದುವರಿಯಬೇಕೆಂಬ ಅಚಲ ನಿರ್ಧಾರದೊಂದಿಗೆ ಸ್ಯಾಕ್ಸೋಪೋನ್ ಗುರುಗಳಾದ ಅಲೆವೂರು ಸುಂದರ ಶೇರಿಗಾರ ಇವರಿಂದ ಕಲಿತು ಇನ್ನೂ ಹೆಚ್ಟಿನ ಕಲಿಕೆಯ ತರಭೇತಿಯನ್ನು ಮಧುರೈ ಸೇವುಕ ಪೂರುಮಾಲ್ ಪಿಳೈಯವರಿಂದ ಪಡೆದಿರುತ್ತಾರೆ. ಇದಲ್ಲದೇ ನಾದಸ್ವರ ವಾದನವನ್ನು ಸುನೀಲ್ ದೇವಾಡಿಗ ಸೂಡ ಇವರಿಂದ ಕಲಿತು ನಗರದಾದ್ಯಂತ ಪ್ರಮುಖ ಮಂದಿರಗಳು ಸೇರಿದಂತೆ ಮದುವೆ ಇನ್ನಿತರ ಶುಭ ಕಾರ್ಯಕ್ರಮಗಳಲ್ಲಿ ಸ್ಯಾಕೋಪೋನ್ ಹಾಗೂ ನಾದಸ್ವರವನ್ನು ನೀಡಿದ ಶ್ರೇಯಸ್ಸು ಇವರದ್ದಾಗಿದೆ.
ಉಡುಪಿಯವರಾದ ಹರೀಶ್'ರವರು ಇವರ ಮಾವ ರಾಮದಾಸ ಕೋಟ್ಯಾನ್ ಜೊತೆ ಸೇರಿ ಪ್ರಪ್ರಥಮವಾಗಿ ತಾಂಜವೂರು ತ್ಯಾಗರಾಜ ಉತ್ಸವದಲ್ಲಿ ಸಂಗೀತ ಕಛೇರಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
6ನೇಯ ರಾಷ್ರ್ಟೀಯ ಸಂಗೀತ ನತ್ಯ ಸಮ್ಮೇಳನ 2009 ಗದಗ ಹುಬ್ಬಳ್ಳಿಯಲ್ಲಿ ಡಾ॥ ಪಂಡಿತ್ ಪುಟ್ಟರಾಜು ಗವಾಯಿ ಯುವ ಪುರಸ್ಕಾರ ರಾಜ್ಯ ಪ್ರಶಸ್ತಿ, 2019 ಬಿಲ್ಲರ ಅಸೋಸಿಯಶನ್ ಅಂಧೇರಿ 15 ವಾರ್ಷಿಕೋತ್ಸವ ಸಂಭ್ರಮದಲ್ಲಿ ಸ್ವರ ಮಾಣಿಕ್ಯ ಎಂಬ ಬಿರುದು ದೊರಕಿರುವುದು ಇವರ ಹಿರಿಮೆಯ ಗರಿಗೆ ಸಾಕ್ಷಿಯಾಗಿದೆ.
ವೇಲೂರು ಗೋಲ್ಡನ್ ಟೆಂಪಲ್, ಮಂತ್ರಾಲಯ, ಕೊಲ್ಲೂರು, ಕಟೀಲು, ಬಪ್ಪನಾಡು, ಹೊರನಾಡು, ಶ್ರಂಗೇರಿ, ತಿರುವನ್ನಮಲೈ, ತಾಂಜವೂರು, ಮಧುರೈ, ದಿಲ್ಲಿ, ಗುಜರಾತ್ ಸೇರಿದಂತೆ ದೇಶದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಖಾಸಗಿ ಕಾರ್ಯಕ್ರಮದಲ್ಲಿ ಸ್ಯಾಕ್ಸೋಪೋನ್ ವಾದನ ನುಡಿಸಿದ್ದಾರೆ. ಇವರ ಸಾಧನೆಗಾಗಿ ಸಂಘ ಸಂಸ್ಥೆ ಗಣ್ಯರಿಂದ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳೂ ದೊರಕಿದೆ.
ನಿಮ್ಮ ಕಲಾಸಾಧನೆ ರಾಷ್ಟಮಟ್ಟ ಮಾತ್ರವಲ್ಲದೆ ಅಂತರಾಷ್ಟೀಯ ಮಟ್ಟದಲ್ಲಿ ಪಸರಿಸಿ ಕೀರ್ತಿ ಪತಾಕೆಯನ್ನು ಬೆಳಗಲಿ ನಮ್ಮಲೆರ ಶುಭಹಾರೈಕೆಗಳು.
0 comments: