Sunday, January 13, 2019

ಕಂಬಳ ಕ್ಷೇತ್ರದ ದೊರೆ ಇರುವೈಲ್ ಪಾಣಿಲ ಬಾಡ ಪೂಜಾರಿ





ಇರುವೈಲ್ ಪಾಣಿಲ ಬಾಡ ಪೂಜಾರಿ ಕಂಬಳ ಕ್ಷೇತ್ರದಲ್ಲಿ ಮಿಂಚುತ್ತಿರುವ ಹೆಸರು ಬಹುಶಃ ಈ ಹೆಸರನ್ನು ಕಂಬಳ ಕ್ಷೇತ್ರದ ಅಭಿಮಾನಿಗಳು ಕೇಳದೆ ಇರಲಿಕ್ಕಿಲ್ಲ.ತನ್ನದೇ ಆದ ಅಭಿಮಾನಿ ವರ್ಗವನ್ನು ಇವರ ಕೋಣಗಳು ಹೊಂದಿದೆ. ಬೊಟ್ಟಿಮಾರ್ ಮತ್ತು ತಾಟೆ ಎಂಬ ಹೆಸರಿನ ಕೋಣಗಳು ತಮ್ಮದೇ ಆದ ವೇಗ ಹಾಗೂ ಫಿನೀಶಿಂಗ್ ನಿಂದಲೇ ಕಂಬಳ ಕ್ಷೇತ್ರದಲ್ಲಿ ಮನೆಮಾತಾಗಿದೆ.ಸುಮಾರು 84ವರ್ಷಗಳ ಬಾಡ ಪೂಜಾರಿಯವರು ತಮ್ಮ ಮಗನ ಜೊತೆ ಈಗಲೂ ಬಂದು ತಮ್ಮ ಕೋಣಗಳೊಡನೆ ಬಂದು ತಮ್ಮ ಮುದ್ದಿನ  ಕೋಣಗಳ ಸ್ಫರ್ಧೆ ವೀಕ್ಷೀಸುತ್ತಾರೆ.ಹಿಂದಿನ ಸೀಸನ್ನಲ್ಲಿ ಈ ಕೋಣಗಳನ್ನು ಓಡಿಸುತ್ತಿದ್ದ ಆನಂದರವರು ಏಕಲವ್ಯ ಪ್ರಶಸ್ತಿ ಯನ್ನು ಪಡೆದುಕೊಂಡಪಡೆದುಕೊಂಡಿದ್ದಾರೆ.ಕಳೆದ ಹಲವಾರು ವರ್ಷಗಳಲ್ಲಿ ನೇಗಿಲು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದೆ ಮುಂದಿನ ದಿನಗಳಲ್ಲಿ  ಕೂಡಾ ಬಾಡ ಪೂಜಾರಿಯವರ ಕೋಣಗಳು ಪ್ರಶಸ್ತಿ ಯನ್ನು ಪಡೆದುಕ್ಕೊಳ್ಳಲಿ ಎಂಬುದು ನಮ್ಮೆಲರ ಆಶಯ.
✨ವಿಜೇತ್ ಪೂಜಾರಿ

0 comments: