Monday, January 14, 2019

ಪುಟಾಣಿ ಬಿಲ್ಲವ ಪ್ರತಿಭೆ ಆಯುಷ್ ಪೂಜಾರಿ ಕೈಕಂಬ

ನಮ್ಮೂರಿನ ಪುಟ್ಟಾಣಿ ಪ್ರತಿಭೆ ಮಾ||. #ಆಯುಷ್ ಪೂಜಾರಿ‌ ಕೈಕಂಬ

ಬರಹ -- Billavas Gurupura Kaikamba

ಪೋಳಲಿ ರಾಜರಾಜೇಶ್ವರಿ ನೆಲೆನಿಂತ ಪುಣ್ಯಭೂಮಿಯ ಹೆಬ್ಬಾಗಿಲಿನ ಹತ್ತಿರದ ಊರು #ಗುರುಪುರ_ಕೈಕಂಬ* ಇಲ್ಲಿ‌ ಹರೀಶ್ ಮತ್ತು ಭಾಗ್ಯ ಎಚ್ ದಂಪತಿಗಳ ಪುತ್ರನಾಗಿ ಜನಿಸಿದ  ಪುಟ್ಟ ಬಾಲಕ ತನ್ನ ಎರಡುವರೆ ವರುಷದಲ್ಲಿಯೆ ಸಿಟಿ ಗಾಯ್ಸ್ ತಂಡಕ್ಕೆ ಸೆರ್ಪಡೆಯಾದರು

ನೃತ್ಯದ ಮೂಲಕ ಸಣ್ಣ ವಯಸ್ಸಿನಲ್ಲೆ ಆಶಕ್ತಿಯನ್ನು ಬೆಳೆಸೂದರ ಜೊತೆ ಒಂದು ವಿಶೇಷ ಪ್ರತಿಭೆಯನ್ನು ಬೆಳೆಸಿಕೊಂಡರು ಈ ಪ್ರತಿಭೆಯನ್ನರಿತ ನೃತ್ಯ ಗುರು ಸುಧಿರ್ ಉಳ್ಳಾಲ್ ಬೆನ್ನುಲುಬಾಗಿ ನಿಂತು ಪ್ರೋತ್ಸಾಹಿಸಿದರು. ಅದೇನಪ್ಪ ಅಂತಹ ವಿಶೇಷ ಪ್ರತಿಭೆಯೆಂದರೆ #ಮಾತಿನ_ಚಾಣಕ್ಯ_ತನ ಹೌದು ತನ್ನ ಎಲೆಯವಯಸ್ಸಿನಿಂದಲೆ ಈ ಪ್ರತಿಭೆ ಸಲೀಸಾಗಿ ಬೆಳೆಸಿಕೊಂಡು ಬಂದ ಮಾಸ್ಟರ್ ಆಯುಷ್ ಜನರನ್ನು‌ ತನ್ನ ಮಾತಿನ ಮೋಡಿಯಿಂದ ಅದೆಷ್ಟೇ ಕಷ್ಟದ ವಾಕ್ಯಗಳನ್ನು ನೀರಿನಂತೆ ಅತಿಸರಳವಾಗಿ ನಿರೂಪಿಸಿ ಜನರನ್ನು ಅಚ್ಚರಿಗೊಳಿಸುತ್ತಿದ್ದ. ಈ ಪುಟ್ಟ ಬಾಲಕನ ಪ್ರತಿಭೆ ಕರ್ನಾಟಕ ರಾಜ್ಯಾದ್ಯಂತ *ಸುವರ್ಣ ನ್ಯೂಸ್ ನಡೆಸಿದ* ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ 40,000 ಸಾವಿರಕ್ಕೂ ಅಧಿಕ ಜನರನ್ನು ಮಾತಿನ ಮೋಡಿಯಿಂದ ಬೆರಗಾಗಿಸಿದನು . ಇದನ್ನರಿತ *Daijiworld*  ಚಾನಲ್ ಡ್ಯಾನ್ಸ್ ಜೂನಿಯರ್ ಮಸ್ತಿಯಲ್ಲಿ ನಿರೂಪಿಸಲು ಅವಕಾಶ ಒದಗಿಸಿತು.

ಈ ವೇದಿಕೆ ಇನ್ನಷ್ಟು ಅವಕಾಶಗಳಿಗೆ ನಾಂದಿ ಹಾಡಿತು. #ಚಿಂಟು_ಟಿವಿಯಲ್ಲಿ* ನೃತ್ಯ ಕಾರ್ಯಕ್ರಮದಲ್ಲಿ ಹಾಗು #ಚಂದನ* ವಾಹಿನಿಯ *#ಶ್ರೀ_ನಾರಾಯಣ_ಗುರು_ವಿಜಯದರ್ಶನ* ಧಾರವಾಹಿಯಲ್ಲಿ ನಟಿಸಿ ಕನ್ನಡದ ಹಲವಾರು ಚಿತ್ರಗಳಲ್ಲಿ ಪಾತ್ರವಹಿಸಿದ್ದಾನೆ #Zee_Kannada ವಾಹಿನಯ ಡ್ರಾಮ‌ ಜೂನಿಯರಲ್ಲು ಭಾಗವಹಿಸಿದ್ದಾರೆ.

ಈತನ ನಟನೆ, ನೃತ್ಯ ಹಾಗು ನಿರೂಪಣೆ ಗುರುತಿಸಿ ಹಲವಾರು ಜನರ ಪ್ರೀತಿ ಪ್ರೋತ್ಸಾಹಕ್ಕೆ ಪಾತ್ರನಾಗಿದ್ದಾನೆ..
ಆಯುಷ್ ಇವನ ಪ್ರತಿಯೊಂದು ಸಾಧನೆಗೆ ಸ್ಪೂರ್ತಿ ಅಜ್ಜ ಸಂಜೀವ ಪೂಜಾರಿ. ಈ ಬಾಲ್ಯ ಪ್ರತಿಭೆ ಇನ್ನಷ್ಟು ವೇದಿಕೆಯತ್ತ ಬೆಳೆಯಲಿ ನಮ್ಮೂರಿನ ಕೀರ್ತಿ ಹರಡಲಿ ಎನ್ನುವುದೇ ನಮ್ಮೆಲ್ಲರ ಆಶಯ.



0 comments: