ಸೋಹನ_ಶಂಕರ್_ಪೂಜಾರಿ
ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಬಹುಮುಖ ಪ್ರತಿಭೆ.
ಶಂಕರ್ ಎಸ್ ಪೂಜಾರಿ ಮತ್ತು ನಾಗರತ್ನ ಶಂಕರ್ ದಂಪತಿಗಳ ಮುದ್ಧಿನ ದ್ವಿತೀಯ ಪುತ್ರಿ ಸೊಹನ ಪೂಜಾರಿ. ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲದೇ ಕ್ರಾಫ್ಸ್ , ಭಕ್ತಿಗೀತೆ , ಡ್ರಾಯಿಂಗ್ ಹಾಗೂ ನೃತ್ಯದ ಮೂಲಕ ತನ್ನ ಪ್ರತಿಭೆಯನ್ನೂ ತೋರಿಸಿದ್ದಾರೆ.
ಬಾಲ್ಯದಲ್ಲಿಯೇ ದೂರದರ್ಶನದಲ್ಲಿ ಪ್ರಸಾರವಾಗುವ ಗೀತೆಗಳಿಗೆ ಹೆಜ್ಜೆ ಹಾಕುತ್ತ ಬೆಳೆದವರು. ತನ್ನ 4ನೇ ವಯಸ್ಸಿಗೆ ವಸಂತ್ ನಾಯ್ಕ್ ಇವರಿಂದ ನೃತ್ಯಭ್ಯಾಸದ ತರಬೇತಿ ಪಡೆದು ನಂತರ ಹೆಸರಾಂತ ಎಕ್ಸ್ಟಿಮ್ ಗುರುಗಳಾದ ಮಂಜಿತ್ ಶೆಟ್ಟಿ ಮತ್ತು ವಸಂತ್ ನಾಯ್ಕ್ ಇವರಿಂದ ಕಲಿತಿದ್ದಾರೆ. ಭರತನಾಟ್ಯವನ್ನು ಶ್ರೀರಕ್ಷ ಮತ್ತು ಆನನ್ಯ ಅವರಿಂದ, ಸಂಗೀತವನ್ನು ಜ್ಞಾನವನ್ನು ಲಲಿತ್ ಭಟ್ ಅವರಿಂದ ಅಭ್ಯಾಸ ಮಾಡಿದ್ದಾರೆ.
ಭಕ್ತಿಗೀತೆಯನ್ನು ಮಧುರವಾಗಿ ಹಾಡುವ ಇವರು ಕೃಷ್ಣ ವೇಷ ಸ್ವರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಇವರು ತನ್ನ ಡ್ಯಾನ್ಸ್ ಕೇಂದ್ರದ ತಂಡದೊಂದಿಗೆ ಆನೇಕ ನೃತ್ಯ ಪದರ್ಶನ ನೀಡಿ ಬಹುಮಾನಗಳನ್ನೂ ಪಡೆದಿದ್ದಾರೆ.
ತನ್ನದೇ ಆದ ಆಭಿಮಾನಿ ಬಳಗ ಹೊಂದಿರುವ ಇವರು ಜಿಲ್ಲಾ , ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನೂ ಪಡೆದಿದ್ದಾರೆ. ಇತ್ತೀಚಿಗೆ ನಡೆ ಡೈಜಿವಲ್ಡ್ ಚಾನೆಲ್ನಲ್ಲಿ "ಜೂನಿಯರ್ ಮಸ್ತಿ ಸೀಸನ್"ನಲ್ಲಿ ಸೆಮಿಪೈನಲ್ ತಲುಪಿರುತ್ತಾರೆ. ಉತ್ತಮವಾದ ನೃತ್ಯ ಎಕ್ಸ್ಟೇಷನ್ ನೀಡಿ ತೀರ್ಪುಗಾರಗಾರ ಮೆಚ್ಚುಗೆ ಗಳಿಸಿದ್ದಾರೆ. ಇವರು ನೃತ್ಯ ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಗಳಿಸಿಲೆಂದು "ನಮ್ಮ ಬಿಲ್ಲವೆರ್ ಪೇಜ್ ಕಡೆಯಿಂದ #ಶುಭಹಾರೈಕೆಗಳು.
0 comments: