Wednesday, January 9, 2019

ಯಕ್ಷನಾಟ್ಯ ಮಯೂರಿ ಹೇಮಲತಾ ಪೂಜಾರಿ






"#ಕು||#ಹೇಮಲತಾ_ಪೂಜಾರಿ"
#ಕುಂದಾಪುರದಲ್ಲಿ ನಡೆದ ಯಕ್ಷರೋಹಣ 2018 ಜಿಲ್ಲಾಮಟ್ಟದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿ #ಪುಂಡುವೇಷದಲ್ಲಿ_ಪ್ರಥಮ_ಸ್ಥಾನ ಗಳಿಸಿದ #ಯಕ್ಷ_ನಾಟ್ಯ_ಮಯೂರಿ.

ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಾಸಿ ಕಲಾವಿದೆಯಾಗಿರುವ "ಕು||ಹೇಮಲತಾ ಪೂಜಾರಿ " ಉಡುಪಿ ಜಿಲ್ಲೆಯ ಇಂದಿರಾ ನಗರದವರು. ಶ್ರೀ ವಿಠಲ ಪೂಜಾರಿ ಮತ್ತು ಜಾನಕಿ ದಂಪತಿಗಳ ಪುತ್ರಿಯಾದ ಹೇಮಲತಾ, ಡಾ|| ಜಿ. ಶಂಕರ್. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿಯಲ್ಲಿ 2018 ರ ಸಾಲಿನಲ್ಲಿ ಎಂ. ಕಾಂ. ಪದವಿಗಳಿಸಿದ್ದಾರೆ. 

ಪ್ರಾಥಮಿಕ ಶಾಲಾವಧಿಯಲ್ಲೇ ಯಕ್ಷಗಾನದಲ್ಲಿ ಆಸಕ್ತಿ ವಹಿಸಿ ಗೆಜ್ಜೆ ಕಟ್ಟಿ ಕುಣಿಯಲು ಪ್ರಾರಂಭಿಸಿದ ಇವರು ಪ್ರಥಮವಾಗಿ ಸೀತಾವಿಯೋಗ  ಪ್ರಸಂಗದ ರಾಮನಾಗಿ ಯಕ್ಷಗಾನ ಗುರುಗಳಾದ ಕೇಶವರಾವ್ ಬಡಾನಿಡಿಯೂರ್ ಇವರ ಮೂಲಕ ಯಕ್ಷಗಾನಕ್ಕೆ ಯಕ್ಷಶಿಕ್ಷಣ ಟ್ರಸ್ಟ್ (ರಿ) ಉಡುಪಿ ಮೂಲಕ ಪರಿಚಯಿಸಲ್ಪಟ್ಟವರು. ಅಷ್ಟೆ ಅಲ್ಲದೇ ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ, ಸುರೇಶ್ ಕುಂಡೇಲು , ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್ ಐರೋಡಿ, ಕೃಷ್ಣಮೂರ್ತಿ ಭಟ್ ಬಗ್ವಾಡಿ ಇವರಿಂದ ಸಾಂಪ್ರದಾಯಿಕ ಯಕ್ಷಗಾನ ನಾಟ್ಯ, ಅಭಿನಯ, ಮಾತುಗಾರಿಕೆಯನ್ನು ಕಲಿತವರು. 

ಶಾಲಾದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲಿ ಹಾಗೂ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯಲ್ಲಿ ಯಕ್ಷಗಾನ ಪ್ರದರ್ಶಿಸಿ , ಹವ್ಯಾಸಿ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಇತ್ತೀಚಿಗೆ ಕುಂದಾಪುರದಲ್ಲಿ ನಡೆದ ಯಕ್ಷರೋಹಣ ~2018 ಜಿಲ್ಲಾಮಟ್ಟದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪುಂಡುವೇಷದಲ್ಲಿ ಪ್ರಥಮಸ್ಥಾನಗಳಿಸಿದ ಇವರು,ಕಳೆದ 11 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಇವರಿಗೆ ಅತ್ಯಂತ ಮುದ ನೀಡಿರುವ  ಪಾತ್ರಗಳೆಂದರೆ ಕೃಷ್ಣ, ಬಾಲ ಕಂಸ, ಸುದರ್ಶನ ಮತ್ತು ಭ್ರಮರಕುಂತಳೆ. ಪ್ರಸ್ತುತ ಶ್ರೀ ಗಜಮುಖ ಹರಿಹರ ಯಕ್ಷಗಾನ ಕಲಾವೇದಿಕೆ ಯಡ್ತಾಡಿ-ಬಾರಕೂರು ಮತ್ತು ಶ್ರೀ ಕಲಾಸಂಗಮ ಯಕ್ಷಗಾನ ಮಕ್ಕಳ ಮೇಳ ಮುಚ್ಲುಕೋಡು, ಕುಕ್ಕಿಕಟ್ಟೆ-ಉಡುಪಿ ಈ ಸಂಘಗಳಲ್ಲಿ ಸದಸ್ಯೆಯಾಗಿದ್ದಾರೆ.

ಯಕ್ಷಗಾನ ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿ ಇನ್ನೂ ದೊಡ್ಡಮಟ್ಟಕ್ಕೆ ಬೆಳೆದು ಶ್ರೀ ಯಕ್ಷ ಕಲಾ ಮಾತೆ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವರು ನಿಮ್ಮಗೆ ಅರ್ಶಿವದಿಸಲಿ.ನಮ್ಮಲೆರ ಪರವಾಗಿ ಶುಭಹಾರೈಕೆಗಳು.
ಬರಹ:-ಶ್ರೀ ಪ್ರಸಾದ್ ಪೂಜಾರಿ ಭಟ್ಕಳ
©Billavas Poojarys.



0 comments: