Tuesday, January 8, 2019

ಮೂಲ್ಕಿ ಪಯ್ಯೋಟ್ಟು ಮನೆತನದ ರತ್ನಾಕರ್ ಸಾಲ್ಯಾನ್ ಇನ್ನಿಲ್ಲ


ಮೂಲ್ಕಿ:ಕಂಬಳ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ "ಮೂಲ್ಕಿ ಪಯ್ಯೋಟ್ಟು" ಮನೆತನದ ಪ್ರಸ್ತುತ ಸುರತ್ಕಲ್‌ನ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಶ್ರೀ ರತ್ನಾಕರ ಸಾಲ್ಯಾನ್ ಪಯ್ಯೋಟ್ಟು (75) ಹೃದಯಾಘಾತದಿಂದ ಇಂದೆ ಬೆಳಿಗ್ಗೆ ನಿಧನರಾದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮುಂಬಯಿ ಸಮಿತಿಯ ಪ್ರತಿನಿಧಿಯಾಗಿ ಸೇವೆಯನ್ನು ಸಲ್ಲಿಸುತ್ತ, ಸಮಾಜದ ಎಲ್ಲಾ ವರ್ಗದವರೊಂದಿಗೆ ಪ್ರೀತಿ ಪಾತ್ರರಾಗಿ, ಜನಾನುರಾಗಿಯಾಗಿದ್ದ ಅವರು ಮಿತಭಾಷಿಯಾದರೂ ಸಮಾಜದ ಚಿಂತನೆ, ಸಂಘಟನೆಗೆ ವಿಶೇಷ ಆದ್ಯತೆ ನೀಡಿದವರು. ಸದಾ ಲವಲವಿಕೆಯಿಂದ ಪ್ರತಿಯೊಂದು ಕಾರ್ಯಕ್ರಮಕ್ಕೂ ಆಗಮಿಸಿ ಪ್ರೋತ್ಸಾಹಿಸುತ್ತಾ, ಆದರ್ಶ ಜೀವನವನ್ನು ಸಲ್ಲಿಸಿದ್ದಾರೆ. ಸಮಾಜದ ಅಮೂಲ್ಯ "ರತ್ನ"ವೊಂದನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ.

ಅವರ ಆತ್ಮಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳು ಚಿರಶಾಂತಿಯನ್ನು ನೀಡಲಿ ಎಂದು ಆಶಿಸುತ್ತಾ. ಬಿಲ್ಲವ ಸಮಾಜ ಸಹಿತ ಸರ್ವ ಧರ್ಮ ಸಮಾಜ ಬಾಂಧವರಾದ ಅನೇಕ ಗಣ್ಯರು ಶ್ರೀ ರತ್ನಾಕರ ಸಾಲ್ಯಾನ್ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಇಂದು ಸಂಜೆ ಅಂತಿಮ ದರ್ಶನ ಶ್ರೀ ರತ್ನಾಕರ ಸಾಲ್ಯಾನ್ ಅವರ ಪಾರ್ಥಿಕ ಶರೀರವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು (08-01-2019) ಸಂಜೆ 6 ಗಂಟೆಗೆ ಮೂಲ್ಕಿ ಪಯ್ಯೋಟ್ಟುವಿನಲ್ಲಿ ಕುಟುಂಬದವರ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ.
💐ನರೇಂದ್ರ ಕೆರೆಕಾಡು

0 comments: