ಪವರ್‌ಲಿಫ್ಟಿಂಗ್‌ನ ಮಿನುಗು ನಕ್ಷತ್ರ ಅಕ್ಷತಾ ಪೂಜಾರಿ
ಅಥ್ಲೆಟಿಕ್ಸ್ ಫೀಲ್ಡ್‌ನಿಂದ ಶಕ್ತಿಯುತ ಕ್ರೀಡೆ ಪವರ್‌ಲಿಫ್ಟಿಂಗ್ ಇಷ್ಟಪಟ್ಟು ಅದರಲ್ಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಾಡಿದವರು ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿ.
ಬಡತನದ ಬೇಗುದಿಯಲ್ಲೇ ಬೆಳೆದರೂ ಕ್ರೀಡೆಯಲ್ಲಿ ಇವರದು ದೇಶಕ್ಕೆ ಕೀರ್ತಿ ತಂದ ಸಾಧನೆ. ತಮಗೆ ಲಭಿಸಿದ ಸೀಮಿತ ಅವಕಾಶಗಳನ್ನೇ ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 16ಚಿನ್ನದ ಪದಕ, ರಾಷ್ಟ್ರ ಮತ್ತು ರಾಜ್ಯಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ನೂರಾರು ಪದಕ ಬಂದಿರುದು ಇವರ ಸಾಧನೆಯ ಗರಿಮೆ. ಜತೆಗೆ ರಾಜ್ಯ ಪ್ರತಿಷ್ಠಿತ ಏಕಲವ್ಯ ಪುರಸ್ಕಾರ ಪಡೆದಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೋಳಕೋಡಿಯಲ್ಲಿ ಭೋಜ ಪೂಜಾರಿ, ಪ್ರೇಮಾ ದಂಪತಿ ಪುತ್ರಿಯಾಗಿರುವ ಇವರು ಬೆಳ್ಮಣ್‌ನ ಲಿಟ್‌ಲ್ ಫ್ಲವರ್ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಮಣ್ ಪದವಿಪೂರ್ವ ಸರ್ಕಾರಿ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪಿಯು ಶಿಕ್ಷಣ. ನಿಟ್ಟೆಯಲ್ಲಿ ಬಿಕಾಂ, ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಎಂಎಚ್‌ಆರ್‌ಡಿ ಪದವಿ ಪಡೆದಿದ್ದೇನೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ 2 ಚಿನ್ನದ ಪದಕ, 2014ರಲ್ಲಿ ರಾಜ್ಯ ಸರ್ಕಾರದ ಏಕಲವ್ಯ ಪುರಸ್ಕಾರ, 2017ರಲ್ಲಿ ರಾಜ್ಯಮಟ್ಟದ ಬಲಿಷ್ಠ ಮಹಿಳೆ, 2016ರಲ್ಲಿ ಹಿಮಾಚಲ ಪ್ರದೇಶ ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಬಲಿಷ್ಠ ಮಹಿಳೆ, 2016ರಲ್ಲಿ ಜಾರ್ಖಂಡ್ ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಬಲಿಷ್ಠ ಮಹಿಳೆ, 2014ರಲ್ಲಿ ಕೂಳೂರು ರಾಜ್ಯಮಟ್ಟದ ಪವರ್‌ಲಿಫ್ಟಿಂಗ್ ಬಲಿಷ್ಠ ಮಹಿಳೆ, 2013ರ ಮಂಗಳೂರು ರಾಜ್ಯಮಟ್ಟದ ಪವರ್‌ಲಿಫ್ಟಿಂಗ್ ಬಲಿಷ್ಠ ಮಹಿಳೆ, 2013ರ ಜಾರ್ಖಂಡ್ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಬಲಿಷ್ಠ ಮಹಿಳೆ, 2012ರಲ್ಲಿ ರಾಜ್ಯಮಟ್ಟದ ಬಲಿಷ್ಠ ಮಹಿಳೆ, 2011ರಲ್ಲಿ ರಾಜ್ಯಮಟ್ಟದ ಬಲಿಷ್ಠ ಮಹಿಳೆ, 2008ರಲ್ಲಿ ರಾಜ್ಯಮಟ್ಟದ ಬಲಿಷ್ಠ ಮಹಿಳೆ ಪ್ರಶಸ್ತಿ ತನ್ನ ಮುಡಿಗೇರಿಸಿದ್ದಾರೆ.
0 comments: