Tuesday, January 22, 2019

ದೇವಿಕಿರಣ್_ಗಣೇಶಪುರ" ಕಲಾ ಲೋಕದ "ಸಿರಿ ಕಣಜ".

"#ದೇವಿಕಿರಣ್_ಗಣೇಶಪುರ" ಕಲಾ ಲೋಕದ "ಸಿರಿ ಕಣಜ".
ಕಲೆಯೆಂಬುದು ಕಾಂಚನದ ಬೆನ್ನೇರಿ ಕುಣಿಯುವಂತಹ ಈ ಕಾಲದಲ್ಲಿ ಕಲೆಯನ್ನು ಆರಾಧಿಸಿಕೊಂಡು ಚಿತ್ರಕಲೆ, ಗಾಯನ, ನಟನೆ, ನಾಟ್ಯ, ಕಾರ್ಯಕ್ರಮ ನಿರೂಪಣೆ, ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದೇವಿಕಿರಣ್ ಗಣೇಶಪುರವರ ಧರ್ಮದ ನಡೆ, ಪ್ರೀತಿಯ ಒಡಲು, ಸ್ನೇಹದ ಕಡಲು, ನೇರ ನುಡಿ, ಮಿತ ಭಾಷಿ , ಹಿತವಾದ ಸಂಗ, ಗತ್ತು ಗರ್ವ ಇಲ್ಲದ, ಹೊತ್ತು ಗೊತ್ತುಗಳ ಪರಿವೇ ಇಲ್ಲದೇ ಕರೆದರೂ ಇಲ್ಲ ಎನ್ನದೇ ಬರುವ ಸರ್ವಜನಾನುನಾರಾಗಿ ಕಲಾವಿದ.

ತಂದೆ ಚಂದ್ರಹಾಸ ಪೂಜಾರಿ ತಾಯಿ ರತ್ನಾ ಕೋಟ್ಯಾನ್ ರವರ ಮುದ್ಧಿನ ಮಗ ಕಿರಣ್ ಬಣ್ಣವೇ ಪ್ರಪಂಚ. ಗೀಚಿದೆಲ್ಲಾ ಬಣ್ಣವಾಯಿತು. ಅದೇ ಉದ್ಯೊಗವಾಯಿತು. ಗಾಯನವೇ ಪ್ರವ್ರತ್ತಿಯಾಯಿತು. ಇವರ ಕೈಬೆರಳಗಳ ಕುಣಿತದಲ್ಲಿ ಆಂಜನೇಯ, ಶಿವಾಜಿ, ನರೇಂದ್ರ ಮೋದಿಯಂತ ಮಹಾನ್ ವ್ಯಕ್ತಿಗಳು ಚಿತ್ರಿತರಾದರು. ಕೆಲವೇ ಕೆಲ ನಿಮೀಷದಲ್ಲಿ ಅದ್ಭುತ ಚಿತ್ರಗಳನ್ನೂ ಬಿಡಿಸುವ ಮಾಂತ್ರಿಕನೆಂದರೆ ತಪ್ಪಾಲಾಗರದು. ಮರುಳಾಕ್ರತಿ ಸ್ವರ್ಧೆಯಲ್ಲಿ 4 ಬಾರಿ ಪ್ರಶಸ್ತಿ ಬಾಚಿಕೊಂಡ ಹೆಮ್ಮೆ ಕಿರಣ್ ಅವರದ್ದು. 

ನೂರಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನೂ ಮಾಡಿ ಉತ್ತಮ ನಿರೂಪಕರೆಂದು ಹೆಗ್ಗಳಿಕೆ ಪಾತ್ರರಾದವರು. ಸಮಾನ ಮನಸ್ಕರನ್ನೊಳಗೊಂಡ ಶ್ರೀ ಶಾರದ ಪ್ರಕಾಶನದ ನಿರ್ಮಾಣದಲ್ಲಿ ಮೂಡಿ ಬಂದ "ಆಡು ಕುರಿ" ತುಳು ಅಲ್ಭಮ್ ಗಾಯಕರಾಗಿ ಇಡೀ ಸಮಸ್ತ ಜನಮಾನಸ ತುಳುನಾಡಿತ್ತ ಮುಖಮಾಡುವಂತೆ ಮಾಡಿ ತನ್ನದೆ ಆದ ಆಭಾಮಾನಿ ಬಳಗವನ್ನು ಹೊಂದಿರುವ ಕಲಾವಿದರಲ್ಲಿ ಕಿರಣ್ ಕೂಡಾ ಒಬ್ಬರು.

"ಆ ಒಂದು ಕರೆ" ಕಿರುಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ನಟನೆಗೂ ಸೈ ಎನಿಸಿದ ಕಿರಣ್ ಅವರು ಸಕಲಕಲಾಭವ ಎಂದರೆ ತಪ್ಪಲಾರಗದು. ಸಾವಿರಾರು ವೇದಿಕೆಗಳಲ್ಲಿ ಹಾಡಿ ಗಾಯಕರೆಂದು ಗುರುತಿಸಿಕೊಂಡು "ಜೂನಿಯರ್ ರಾಜ್ ಕುಮಾರ್" ಹಾಗೂ "ಜೂನಿಯರ್ ಉಪೇಂದ್ರ" ಅನ್ನುವ ಗೌರವಕ್ಕೂ ಭಾಜನವಾದವರು.

ಅಂತೆಯೇ ಆರಾಧನ ಗ್ರೂಪ್ ಡಬ್ ಮ್ಯಾಶ್ ಸ್ವರ್ಧೆಯಲ್ಲಿ "ಉತ್ತಮ ಡಬ್ ಮ್ಯಾಶ್" ಪ್ರಶಸ್ತಿಯನ್ನು ಪಡೆದು ಕಿರಿಯರಿಗೆ ಸ್ವೂರ್ತಿಯಾಗಿ ಮಾರ್ಗದರ್ಶಕರಾಗಿ ಜನ ಸೈಗಟ್ಟವಾತೆದರಿ ಸರಳ ಜೀವನ ಇವರ ಆದರ್ಶವೂ ಕೆಟ್ಟ ಜನರಿಲ್ಲ ಇವರ ನೋಟದಲ್ಲಿ ಸಂತುಷ್ಟರುರಿವರು. ಬೆನ್ನ ತಟ್ಟಿ ಹುರಿದಂಬಿಸುವರು.

ಕಲಾವಿದರ ಬಾಳ ಬವಣೆ ನೆಟ್ಟ ಗಾಗುವ ಸಲಹೆ ಮಾರ್ಗದರ್ಶಕರು ಇವರಿಗೆ ಜನ ಸೋಜಿಗವ ಸಷ್ಟಿಸಿದ ಸಾಧಕರು. ಎತ್ತ ನೋಡಿದರತ್ತ ಬೀರಿಹರು ತನ್ನೆಸರ ಕಿರಣವ ಸುರತ್ಕಲ್ ಮಣ್ಣಲ್ಲಿ ಬಿರ್ವ ಕುವರನಾಗಿ ಮಾತೆ ಮನದಿಯ ಪ್ರೀತಿಸುವ ಮಾಣಿಕ್ಯ. ಬರೆದು ಕೊಡುವುದೆನಿದ್ದರೂ ಬರಿಯ ಶಬ್ಧಗಳು ಅದರೆ ಅವರು ಅದಕ್ಕಿಂತಲ್ಲೂ ನಿಂತ ಧೀಮಂತರು.

ಅದ್ಧುತ ಕಲಾ ಪ್ರತಿಭೆಯಾದ ದೇವಿಕಿರಣ್'ರವರಿಗೆ ಕಲಾ ಮಾತೆ ಶಾರದದೇವಿಯ ಅರ್ಶಿವಾದ ಸದಾ ಜೊತೆಗಿರಲಿ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು "ಬಿಲ್ಲವಾಸ್ ಪೂಜಾರಿಸ್ಸ್"  ಹಾಗೂ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಶುಭಹಾರೈಕೆಗಳು.0 comments: