Tuesday, January 22, 2019

ಎರಡು ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು ನೀಡುವಿರಾ!

ಕಳೆದೆರಡು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಾಕಾಳಿ ಬೆಟ್ಟು , ಬರಿಮಾರು ಗ್ರಾಮದ ನಿವಾಸಿ ದಯಾನಂದ ಪೂಜಾರಿ ಇವರ ಚಿಕಿತ್ಸೆಗಾಗಿ ಸಹೃದಯ ದಾನಿಗಳು ನೆರವು ನೀಡಬೇಕಾಗಿ ಇವರ ಮನೆಯವರ ಪ್ರಾರ್ಥನೆ.

ಎಲೆಕ್ಟ್ರಿಷಿಯನ್ ಆಗಿ ದಿನಕೆಲಸ ಮಾಡುತ್ತಿದ್ದ ದಯಾನಂದ್ ಅವರು ತಮ್ಮ ಮನೆಯ ಆದಾರಸ್ತಂಭ ವಾಗಿ ಇದ್ದರು. ಆದರೆ ತಮ್ಮ ಎರಡೂ  ಕಿಡ್ನಿಯ ವೈಫಲ್ಯ ದಿಂದ ಇದೀಗ ಕೆಲಸಕ್ಕೂ ಹೋಗಲು ಆಗದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಂದೆ ತಾಯಿಗೆ ಒಬ್ಬನೇ ಮಗನಾಗಿ ಸಂಸಾರ ನಡೆಸುತ್ತಿದ್ದ ಇವರು ಕಳೆದ ಐದು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 4 ವರ್ಷ ದ ಮಗುವನ್ನು ಹೊಂದಿರುತ್ತಾರೆ. ತಂದೆ ತಾಯಿಯ ಅನಾರೋಗ್ಯದೊಂದಿಗೆ ತಮ್ಮ ಈ ಕಿಡ್ನಿ ವೈಫಲ್ಯ ದ ಬಗ್ಗೆ ತೀವ್ರ ಮನನೊಂದಿರುವ ಈ ಕುಟುಂಬಕ್ಕೆ ಸಹಾಯ ಮಾಡುವ ಕರ್ತವ್ಯ ಈಗ ಸಮಾಜದ್ದಾಗಿದೆ.ತನ್ನ ಗಂಡನ ಎರಡೂ ಕಿಡ್ನಿಯ ವೈಫಲ್ಯದಿಂದ ನೊಂದಿರುವ ಅವರ ಧರ್ಮಪತ್ನಿ ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿರುತ್ತಾರೆ. ಆದರೆ ಈ ಕಿಡ್ನಿ ಟ್ರಾನ್ಸ್ ಪ್ಲಾಂಟಿಗೆ ಸುಮಾರು ಹತ್ತು ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುವುದರಿಂದ ಸಹೃದಯ ದಾನಿಗಳ ನೆರವನ್ನು ಈ ಬಡ ಕುಟುಂಬದ ನಿರೀಕ್ಷಿಸುತ್ತದೆ. 


ಎರಡೂ ಕಿಡ್ನಿ ವೈಫಲ್ಯದಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಹಾಗೂ ಔಷಧಿಯ ಹಣಕ್ಕೆ ತುಂಬಾ ಕಷ್ಟ ಪಡುತ್ತಿದ್ದ  ಕುಟುಂಬಕ್ಕೆ ಬರಿಮಾರು ಊರಿನ ಜನರು ಸಾಕಷ್ಟು ಸಹಯ ಮಾಡಿರುತ್ತಾರೆ, ಆದರೆ ಈ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಅಧಿಕ ಹಣ ಬೇಕಾಗಿರುವುದರಿಂದ ಸಮಾಜದ ಜನರು ಹೆಚ್ಚಿನ ಸಹಾಯ ಮಾಡಬೇಕಾಗಿ ವಿನಂತಿ. ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅವರ ಧರ್ಮಪತ್ನಿ ಯ ಒಂದು ಕಿಡ್ನಿಯನ್ನಾದರೂ ಜೋಡಣೆ ಮಾಡಿಸಿ ಅವರ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಮಾಡಲು ದಯಾನಂದ್ ಅವರನ್ನು ಶಕ್ತರನ್ನಾಗಿಸಬಹುದು. 

ಸಹಾಯ ಮಾಡುತ್ತಿರು ಸಂಘ ಸಂಸ್ಥೆಗಳು, ಸೇವಾ ಟ್ರಸ್ಟ್, ಇವರರಿಗೆ ಈ ಮೆಸೇಜ್ ತಲುಪುವ ಹಾಗೆ ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್‌ ನಲ್ಲಿ ಈ ವಿಷಯವನ್ನು ಶೇರ್ ಕೂಡ ಮಾಡಿ ಎಂದು ಜನರಲ್ಲಿ ಪ್ರಾರ್ಥನೆ. 
ಹೆಚ್ಚಿನ ಮಾಹಿತಿ ಬೇಕೆದ್ದರೆ ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ. 
ದಯಾನಂದ : 9741032128
ಸದಾನಂದ್ ಪೂಜಾರಿ ಬರಿಮಾರ್  : 9480626440
ಉಮೇಶ್ ಕೋಟ್ಯಾನ್  : 9449367986
ನೆರವು ನೀಡುವ ದಾನಿಗಳು ದಯಾನಂದ್ ಇವರ ವಿಜಯ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಬಹುದು. 
ಹೆಸರು : ದಯಾನಂದ
ಖಾತೆ ಸಂಖ್ಯೆ : 110501011007515
Ifsc ಕೋಡ್‌ : VIJB0001105 
Branch : Kalladka , Karnataka

0 comments: