ಕಾಮಿಡಿ ಕಿಲಾಡಿಯೊಂದಿಗೆ ಕಂಗೊಳಿಸಿದ_ಕರಾವಳಿ_ಕುವರ_ಹಿತೇಶ್_ಕಾಪಿನಡ್ಕ.ನಗುವುದಕ್ಕೆ ಹಲವು ಕಾರಣಗಳು, ಆದರೆ ನಗಿಸುವುದು. ನಗೆಗಡಲಲ್ಲಿ ತೇಲಿಸಲು ನಗೆಯ ಚಾತುರ್ಯ ಬಹಳ ಮುಖ್ಯವಾಗಿರುತ್ತದೆ. ಆದರೆ ಪ್ಯಾಂಕೂ ಪ್ಯಾಂಕೂ ಅಂದಾಕ್ಷಣ ನಗೆ ತಡೆಯಲಾಗದು. ಅಂತಹ ಎರಡೇ ಎರಡು ಶಬ್ದದ ಮೂಲಕ ನಗು ಮೂಡಿಸುವ ಇವರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.ರತ್ನಾವತಿ ಹಾಗೂ ಮುತ್ತಪ್ಪ ಪೂಜಾರಿ ದಂಪತಿಯ ಮುದ್ದಿನ ಮುತ್ತಿನ ರತ್ನವೇ (ಮುತ್ತು ರತ್ನ)ಈ ಪುತ್ರ.ಸರಕಾರಿ ಪ್ರೌಢಶಾಲೆ ಅಳದಂಗಡಿ ಯಲ್ಲಿ ಪ್ರೌಢಶಿಕ್ಷಣ, ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಹಳೆಕೋಟೆ ಸಂತ ಥಾಮಸ್ ಕಾಲೇಜ್ ಇಲ್ಲಿ ಪಡೆದರು.
ಎಳವೆಯ ದಿನಗಳಲ್ಲೇ ದೇವರ ನಾಮಗಳನ್ನು (ರಚನೆ) ಹಾಡುವುದರೊಂದಿಗೆ ಸಂಗೀತದ ಬಗೆಗೆ ಒಲವು ಮೂಡಿ, ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿ ಸಂಗೀತ ಸ್ಪರ್ಧೆ ಸಮಾರಂಭಗಳಲ್ಲಿ ಹಾಡುವ ಮೂಲಕ ಗಾಯನದ ಮೂಲಕ ವೇದಿಕೆಗೆ ಪಾದಾರ್ಪಣೆ, ಇದರ ಜೊತೆಯಾಗಿ ಪ್ರಶಸ್ತಿಗಳ ಗರಿಮೆ ಹೆಚ್ಚು ಉತ್ಸುಕರಾಗಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಹುರುಪು ತುಂಬಿತು.
ಗಾಯನ, ಭಜನೆ, ಮಿಮಿಕ್ರಿ, ಪ್ರಹಸನ, ನಾಟಕ ಚಟುವಟಿಕೆಗಳಲ್ಲಿ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಅವಕಾಶಗಳ ಹಾದಿ ಹಿಡಿದು ನಡೆದರು, ಕಾಲೇಜು ದಿನಗಳಲ್ಲಿ ನಾಟಕ ತಂಡ ರಚಿಸಿಕೊಂಡು ಕಾರ್ಯಕ್ರಮಗಳಿಗೆ ಮೆರಗು ನೀಡಿತ್ತು.
ನಾಟಕಗಾರನಾಗಬೇಕೆಂಬ ಕನಸು ಬಾಲ್ಯದಲ್ಲಿ ಚಿಗುರೊಡೆದು ಅದರ ಹಾದಿ ಹಿಡಿದು ಸಾಗಿದಾಗ ಕಾಲೇಜು ಮುಗಿದ ಬಳಿಕ, ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿ ನಾಟಕ ತಂಡವನ್ನು ಸೇರಿಕೊಂಡು ಹಲವಾರು ಕಡೆಗಳಲ್ಲಿ ಹಲವಾರು ಪಾತ್ರಗಳ ಮೂಲಕ ಗಮನಸೆಳೆದರು, ಯುವಜನೋತ್ಸವದಲ್ಲಿ ಪಾಲ್ಗೊಂಡು ಜಿಲ್ಲೆ ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ತನ್ನ ಪಾಲಾಗಿಸಿಕೊಂಡರು ನೂರಾರು ಕಲಾರಂಗದ ವೇದಿಕೆ ನಟನೆಗೆ ಸಾಕ್ಷಿಯಾಗಿದೆ.ನಂತರ ಈ ಪಯಣ ಸಾಗಿದ್ದು, ಜೀ ಕನ್ನಡ ವಾಹಿನಿಯ ಆಡಿಶನ್ ಕಡೆಗೆ, ಅಳುಕಿನಿಂದಲೇ ಆಡಿಷನ್ ನೀಡಿದರಾದರೂ, ಆಯ್ಕೆಯಾದಾಗ ಆದಂತಹ ಖುಷಿ ಎಲ್ಲಾ ಅಳುಕನ್ನು ಹೋಗಲಾಡಿಸಿತು. ಅದೇ *ಕಾಮಿಡಿ ಕಿಲಾಡಿ* ಮೂಲಕ, ಮನೆ-ಮನಗಳಲ್ಲಿ ಮಾತಾದರು. ಪ್ರಥಮ ಪರ್ಫಾರ್ಮೆನ್ಸ್ ನಿಂದ ಪ್ಯಾಂಕೂ ಪ್ಯಾಂಕೂ ಎಂದೆ ಜೋರಾಗಿ ಸದ್ದು ಮಾಡಿದ್ದಲ್ಲದೆ, ಎಲ್ಲರಿಗೂ ಗಮನಾರ್ಹರಾದರು, ಆದರೆ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಈ ವೇದಿಕೆಯಲ್ಲಿ.
ಇಲ್ಲಿಂದ ಅವಕಾಶಗಳ ಮಹಾಪೂರವೇ ಹರಿದುಬಂತು.ಪ್ರಶಸ್ತಿಗಳ ಜೊತೆ ಪ್ರಶಂಸೆಗಳು ಕೂಡ ಹೆಮ್ಮೆಯ ಗರಿಮೆಯಾಯಿತು.
ಕಾಮಿಡಿ ಕಿಲಾಡಿ ಎಲ್ಲಾ ಎಪಿಸೋಡ್ ಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವುದರೊಂದಿಗೆ, ತನಗೆ ಸಿಕ್ಕ ಪಾತ್ರದೊಂದಿಗೆ ಅತ್ಯುತ್ತಮ ಅಭಿನಯದೊಂದಿಗೆ ಪ್ರೇಕ್ಷಕರನ್ನು ಬೆರಗಾಗಿ ಸಿದರು, ಕಾಮಿಡಿ ಕಿಲಾಡಿ ಡಾನ್ಸ್ ಕರ್ನಾಟಕ ಡಾನ್ಸ್, ಕೆಕೆ ಚಾಂಪಿಯನ್ ಶಿಪ್ ಉತ್ತಮ ನಟರಾಗಿ ಹೊರಹೊಮ್ಮಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ಕೂಡ ಅವರೆಂದರೆ ಅಚ್ಚುಮೆಚ್ಚು, ಹಾಗಾಗಿ ಯಜಮಾನ ಚಲನಚಿತ್ರದಲ್ ಬಣ್ಣ ಹಚ್ಚಲು ಅವಕಾಶ ನೀಡಿರುವುದು, ಈ ಸಿನಿಮಾ ಯಾನ ಜಂತರ್ ಮಂತರ್ , ಲೌಡ್ ಸ್ಪೀಕರ್, ಭೂತಕಾಲದ ದರ್ಬಾರ್, ಅಪ್ಪೆ ಟೀಚರ್, ಮೈ ನೇಮ್ ಇಸ್ ಅಣ್ಣಪ್ಪ ಚಲನಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ.
ಪುತ್ತೂರು ಸುಳ್ಯ ಬೆಳ್ತಂಗಡಿ ಯುವವಾಹಿನಿ ಇದು ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನಗಳು ಮುಡಿಗೇರಿದೆ.ನಗುವಿನ ಮೂಲಕ ನಗಿಸುವ ನಿಮ್ಮ ಭವಿಷ್ಯವು ನಗೆಗಡಲಲ್ಲಿ ತೇಲಾಡುತಿರಲಿ. ಜೊತೆಗೆ ಸಾಧನೆಯತ್ತ ಹೆಜ್ಜೆ ಹಾಕುತ್ತಾ ಇನ್ನೂ ಹೆಚ್ಚಿನ ಸಾಧನೆ ಗಳು ನಿಮ್ಮಿಂದಾಗಲಿ,
ಮಡಿಲು
0 comments: