ಹೆಸರು ಪುಷ್ಪರಾಜ್ ಬಿ.ಎಸ್ ಮೂಲತಃ ಮಂಗಳೂರಿನ ಎಡಪದವು ಗ್ರಾಮದವರು ಪ್ರ ಸುತ್ತ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದಲ್ಲಿ ವಾಸವಿದ್ದಾರೆ.ತಂದೆಯ ಹೆಸರು ಸುರೇಶ್ ತಾಯಿಯ ಹೆಸರು ಕಮಲ ತಮ್ಮ,ತಂಗಿ ಇದ್ದಾರೆ.ಇವರ ಸಾಧನೆಗಳೆಂದರೆ ನಗರದ ರಸ್ತೆಬದಿಯಲ್ಲಿ ಅನಾಥರಾಗಿ ಬಿದ್ದಿರುವ ವ್ಯಕ್ತಿಗಳನ್ನು ಹಾಗೂ ಮಾನಸಿಕ ಅಸ್ವಸ್ಥರನ್ನು ಕಂಡರೆ ತಾವು ಜೋತೆಗೆ ತಮ್ಮ ಸ್ನೇಹಿತರನ್ನು ಕರೆದುಕೊಂಡು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸಮೀಪದಲ್ಲಿ ಇರುವ ಅನಾಥ ಆಶ್ರಮಕ್ಕೆ ಸೇರಿಸುತ್ತಿದ್ದರು..ಇಲ್ಲಿಯವರೆಗೆ ಸುಮಾರು 8 ಜನರನ್ನು ಸೇರಿಸಿರುತ್ತಾರೆ..ಇವರ ಈ ಸೇವೆಯನ್ನು ಪರಿಗಣಿಸಿ ಕಾವೇರಿ ಕಾಲೇಜಿನಲ್ಲಿ ಸುವರ್ಣ ಕಾವೇರಿ ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ.ಈ ಯೋಜನೆ ಅಡಿಯಲ್ಲಿ ಅಸ್ವಸ್ಥ ರಿಗೆ ನೇರವನ್ನು ನೀಡಲಾಗುವುದು.ಹಾಗೂ ಇದರ ಜೋತೆ ಪತ್ರಿಕೆಯಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬರೆಯುತ್ತಿದ್ದರು.. ಇಲ್ಲಿಯವರೆಗೆ 25ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುತ್ತಾರೆ..ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಯಾಗಿರುವ ಇವರು ಅನೇಕ ರಾಷ್ಟ್ರ,ರಾಜ್ಯ, ವಿಶ್ವವಿದ್ಯಾಲಯ ಮಟ್ಟದ ಶಿಬಿರದಲ್ಲಿ ಭಾಗವಹಿಸುತ್ತಾರೆ...ಹಾಗೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
0 comments: