Tuesday, January 15, 2019

ದೈವ ಗುಳಿಗ ನ ನೋಟವೇ ಅಂತಹುದು ಎಂತವರ ಎದೆಯಲ್ಲಿ ಕೂಡಾ ನಡುಕಮುಡಿಸುವ ದೈವ ನಂಬಿದವರ ಕೈ ಬಿಡುವ ಮಾತೇ ಇಲ್ಲ


ಗುಳಿಗ ದೈವಸಂಪಾದಿಸಿ

ಗುಳಿಗ ದೈವವು ದೇವಿದೂತ, ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ತುಳುನಾಡ ಜನರು ನಂಬಿಕೊಂಡು ಬರುವಂತಹ ಮಾರ್ಣಮಿಕಟ್ಟೆ ದೇವಿಯ ಸಾನಿಧ್ಯದಲ್ಲಿ ಆಯ್ ಗುಳಿಗ ಅಥವಾ ಐ ಗುಳಿಗ ಎಂದು ನಂಬಿಕೊಂಡು ಬಂದ ದೈವವೆ ಈ ಗುಳಿಗ. ಇದಕ್ಕೆ ಅಧಾರವಾಗಿ ಆದಿಶಕ್ತಿ ಪಾರ್ವತಿ ದೇವಿ ಸಪ್ತ ಕನ್ನಿಕೆಯರ ರೂಪತಾಳಿ ಭೂಲೋಕ ಸಂಚಾರಕ್ಕೆ ಹೊರಟಾಅಗ ಕರ್ಮಭೂಮಿಗೆ ಬರಲು ಸುರಗಂಗೆಯ ಮಾರ್ಗವಾಗಿ ಪಯಣವನ್ನು ಪ್ರಾರಂಭಿಸುತ್ತಾಳೆ.ಆವಾಗ ಶಿವಗಣದಲ್ಲಿದ್ದ ಈ ಗಿಳಗನನ್ನು ನಾವಿಕನನ್ನಾಗಿ ನಿಯಮಿಸಿ ಶಿವಗಂಗೆಯಿಂದ ಹೊರಟು ಸಪ್ತ ಸಾಗರವನ್ನು ದಾಟಿ ಪವಿತ್ರವಾದ ಪರಶುರಾಮ ಸೃಷ್ಟಿ ತುಳುನಾಡಿಗೆ ಬರುವಾಗ ಇಲ್ಲಿಯ ಪವಿತ್ರತೆಯನ್ನು ಕಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ಕೊನೆ ನಿಲ್ಲುತ್ತಾಳೆ.ಆವಾಗ ಸ್ವಾಮಿ ಭಕ್ತಿ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ. ಈ ಹಿನ್ನಲೆಯಲ್ಲೂ ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.


ಸಂಪಾದಿಸಿ

ಇನ್ನು ಗುಳಿಗನ ಆಹಾರ ಆಚಾರಗಳೆಲ್ಲ ವಿಚಿತ್ರವಾದುದು. ಅವನನ್ನು "ಅಂಬರಮಲ್ಲೆ" ಬಯಕುನ ಸಂಚಾರದ ದೈವ ಎಂದು ನಂಬುತ್ತಾರೆ. "ಮಧುಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಕೂಡಾ ನಂಬುತ್ತಾರೆ ಗುಳಿಗನಿಗೆ ಹೇಳುತ್ತಾರೆ. ಇವನ ಕೃಪೆಯನ್ನು ಪಡೆಯಲು ನಂಬಿಕೆ ವರ್ಗದವರು ಬಂಟ ಕೋಳಿಯ ಹರಕೆಯನ್ನು ಹೇಳುತ್ತಾರೆ. ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. ಈ ಹರಕೆಯ ಫಲವಾಗಿ ಹೊರಗಿರುವ ಸಾಕು ಪಶು ಪಕ್ಷಿಗಳನ್ನುಮತ್ತು ನಂಬಿದವರನ್ನು ಹೊರಗಿನ ಕೆಟ್ಟ ಶಕ್ತಿಗಳು ಬಾಧಿಸದಂತೆ ರಕ್ಷಣೆ ಕೊಡುತ್ತೇನೆಂಬುದು ನಂಬಿಕೊಂಡು ಬಂದಿರುವವರ ಧೃಡ ವಿಶ್ವಾಸ. ಭಕ್ತ ಜನರನ್ನು ಒಟ್ಟುಗೂಡಿಸಿ "ಗಡುಪಾಡಿಗೆ" ಹೋಗಿ ಮಾರಿಯಮ್ಮನಿಗೆ ಭೇಟಿ ನೀಡಿ ಅವಳಿಗೆ(ಒಡತಿಗೆ) ಸಲ್ಲುವ ದ್ರವ್ಯಗಳನನ್ನುಅರ್ಪಿಸಿ ಅವಳ ಕೃಪೆಯನ್ನು ಯಾಚಿಸಿ "ಮಾರಿ ದಂಡ್ಗ್ ಎದೆ ಕೊರ್ಪಿನ" ದೈವವಾಗಿ, ರೋಗ ರುಜಿನದಿಂದ ಊರನ್ನು ಪಾರುಮಾಡುವ ದೈವವೆಂದು ನಂಬಿಕೊಂಡು ಬಂದಿರುವ ದೈವ ಗುಳಿಗ. ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ(ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".[










0 comments: