Saturday, January 5, 2019

ಜನಾರ್ದನ ಪೂಜಾರಿ ವಾಸವಾಗಿರುವ ಚೆನ್ನಮ್ಮ ಕುಟೀರ

ರಾಜಕೀಯ ಕ್ಷೇತ್ರದಲ್ಲಿ ಇದ್ದು ಮಹಡಿ ಮೇಲೆ ಮಹಡಿ ಮನೆ ಮಾಡಿ ಐಷಾರಾಮಿ ಜೀವನ ಮಾಡಿ ಎಲ್ಲರ ಹಾಗೆ ಹಣ ಆಸ್ತಿ ಅಂತಸ್ತಿನ ಹಿಂದೆ ಹೋಗಿ ತನಗೋಸ್ಕರ ತನ್ನ ಕುಟುಂಬ ಗೋಸ್ಕರ ತನ್ನ ರಾಜಕೀಯ ಜೀವನದಲ್ಲಿ ಎಲ್ಲರ ಹಾಗೆ ಇರುತ್ತಿದ್ದರೆ ಇಂದು ನಮ್ಮ  ಜನಾರ್ದನ ಪೂಜಾರಿಯವರು ಈ ಚೆನ್ನಮ್ಮ ಕುಟೀರದಲ್ಲೇ ಈಗಲೂ ವಾಸವಾಗಿ ಇರುತ್ತಿರಲಿಲ್ಲ ಎಂಬುದಕ್ಕೆ ಈ ಮನೆಯೆ ಸಾಕ್ಷಿ ಭ್ರಷ್ಟಾಚಾರ ರಹಿತ ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆಗಳಿಲ್ಲದೆ ರಾಜಕೀಯ ಮಾಡಿ ತನಗೋಸ್ಕರ ಏನು ಮಾಡದೆ ತನ್ನ ಅಧಿಕಾರದ ಅವದಿಯಲ್ಲಿ ಬಡವರ ಬಗ್ಗೆ ಚಿಂತಿಸಿದ ಏಕೈಕ ವ್ಯಕ್ತಿ ನಮ್ಮ ಜನಾರ್ದನ ಪೂಜಾರಿ ಇವರಿಗೆ ಇವರೇ ಸಾಟಿ ಅದೇ ಗತ್ತು ಅದೇ ದೌಲತ್ತು ಮನುಷ್ಯ ನೇರವಾಗಿ ನಡೆದರೆ ಯಾರಿಗೂ ತಲೆ ಬಾಗಬೇಕಿಲ್ಲ ಎಂಬುದಕ್ಕೆ ನಮ್ಮ ಪೂಜಾರಿಯವರೇ ಉದಾಹರಣೆ.ರಾಜಕೀಯದಲ್ಲಿ ಇವರಂತಹ ವ್ಯಕ್ತಿ ಹಿಂದೆ ಹುಟ್ಟಿರಲಿಲ್ಲ ಇನ್ನೂ ಮುಂದೆ ಹುಟ್ಟಿದರೂ ನಮ್ಮ ಬಿಲ್ಲವ ಸಮಾಜಕ್ಕೆ ಹೆಮ್ಮೆಯ ವಿಷಯ ಜನಾರ್ದನ ಪೂಜಾರಿಯವರಿಗೆ ಆಯಸ್ಸು, ಆರೋಗ್ಯ ಕೊಟ್ಟು ಆ ದೇವರು ಕಾಪಾಡಲಿ ಎಂಬುದೆ ನಮ್ಮ ಬೇಡಿಕೆ.ಬರಹ -- Sujatha R Suvarna

0 comments: