ಉದಯ್ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕ ತನ್ನ ಮಾಸಿಕ ಹದಿನೆಂಟನೆ ಸಹಾಯ ಹಸ್ತವಾಗಿ ಪುತ್ತೂರು ತಾಲೂಕು ನರಿಮೊಗರು ಗ್ರಾಮ, ನಡುಗುಡ್ಡೆ ನಿವಾಸಿ ಶ್ರೀಮತಿ ಸರೋಜರವರ ಸಹೋದರಿ ಕುಮಾರಿ ಸುಮಿತ್ರರವರ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು. ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀ ಸದಾನಂದ ಕೆ ಇವರು ಚೆಕ್ಕನ್ನು ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಬಿರುವೆರ್ ಕುಡ್ಲ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ, ಪ್ರಧಾನ ಕಾರ್ಯದರ್ಶಿ ಶ್ರೀ ತೇಜಸ್ ಬಿರ್ವ ಕೇಪುಲು, ಸಂಘಟನ ಕಾರ್ಯದರ್ಶಿ ಶ್ರೀ ಕಮಲೇಶ್ ಸರ್ವೆದೋಲ ಗುತ್ತು, ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲ ಮುಕ್ವೆ, ಶ್ರೀ ಸುಧಾಕರ್ ಪೂಜಾರಿ ತಾರಿಗುಡ್ಡೆ, ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಮಹಿಳಾ ವೇದಿಕೆ ಕಾರ್ಯದರ್ಶಿಯಾದ ಶ್ರೀಮತಿ ಜಯಲಕ್ಷೀ ಮತ್ತು ಶ್ರೀ ಅನುಪ್ ಕುಮಾರ್ ಎಸ್ ಉಪಸ್ಥಿತರಿದ್ದರು. ಸಹಕರಿಸಿದ ಎಲ್ಲಾ ದಾನಿಗಳಿಗೂ ಮತ್ತು ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯರಿಗೂ ಧನ್ಯವಾದಗಳು
0 comments: