Thursday, January 17, 2019

ಯೋಗಪಟು ಕಾವ್ಯಶ್ರೀ ಪೂಜಾರಿ ಜೋಡುಕಲ್ಲು


ತ್ರಿಶೂರಿನಲ್ಲಿ ಜರುಗಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಹರಿಯಾಣದ ಫರೀದಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಹನ್ನೊಂದನೇ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ ಕಾವ್ಯಶ್ರೀ ಚಿಕ್ಕಂದಿನಿಂದಲೇ ತುಂಬಾ ಪ್ರತಿಭಾನ್ವಿತೆಯಾಗಿದ್ದು  ಚನ್ನರಾಯಪಟ್ಟಣದ ನಡೆದ ಅಖಿಲ ಭಾರತ ಯೋಗ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೆ ಕೆಲವು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಆ ವಿದ್ಯಾರ್ಥಿಗಳಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ರಾಜ್ಯ ಪುರಸ್ಕಾರ ಪಡೆದು ರಾಷ್ಟ್ರಪತಿ ಪದಕ ಪಡೆಯುವ ತಯಾರಿಯಲ್ಲಿದ್ದಾರೆ ಇದರೊಂದಿಗೆ ಇವರು ಉತ್ತಮ ಕ್ರೀಡಾಪಟುವಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಕಾವ್ಯಶ್ರೀ ಪೂಜಾರಿ ಅವರು ರಂಗಭೂಮಿ ಕಲಾವಿದೆಯಾಗಿ ಶಾರದಾ ಆರ್ಟ್ಸ್ ಕಲಾತಂಡದಲ್ಲಿ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ .ದೃಶ್ಯ ಮಾಧ್ಯಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಇವರಿಗಿದೆ. ಯೋಗಗುರು ಶ್ರೀ ಪ್ರದೀಪ್ ಕುಮಾರ್ ಕೆಎಸ್ ಅವರ ಮಾರ್ಗದರ್ಶನದೊಂದಿಗೆ ತಂದೆ ಶ್ರೀ ಬಟ್ವ ಪೂಜಾರಿ ಜೋಡುಕಲ್ಲು ಮತ್ತು ತಾಯಿ ಶ್ರೀಮತಿ ವಿಜಯಾ ಅವರ ಪ್ರೋತ್ಸಾಹ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಕಾವ್ಯಶ್ರೀ ಪೂಜಾರಿಯವರಿಗೆ ನಮ್ಮೆಲ್ಲರ ಪ್ರೋತ್ಸಾಹವಿದ್ದರೆ ಮುಂದಿನ ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುವ ಯೋಗಪಟು ಆಗುವುದರಲ್ಲಿ ಸಂಶಯವಿಲ್ಲ

1 comment:

  1. ಯೋಗ ಪಟು ಕಾವ್ಯಶ್ರೀಯವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲೆಂದು ಹಾರೈಸುವ - ರವೀOದ್ರ - ಎ0. ಜೋಡುಕಲ್ಲು

    ReplyDelete