Tuesday, February 12, 2019

ಅಮರ್ ಬೊಳ್ಳಿಲು ಕೋಟಿಚೆನ್ನಯೆರ್ನ ಅಪ್ಪೆ ದೇಯಿಬೈದ್ಯೆದಿನ ಕಥೆ ಇಪ್ಪುನ ಸಿನಿಮಾ ಫೆಬ್ರವರಿ 15 ರಿಲೀಸ್

ಪೆ.15 ತುಳು ಚಿತ್ರರಂಗಕ್ಕೆ ‘#ಐತಿಹಾಸಿಕ_ದಿನ.ತುಳುನಾಡಿನ ವೀರ ಪುರುಷರ ಕಥಾಹಂದರದ ಅದ್ದೂರಿ ಚಿತ್ರ ‘#ದೇಯಿ_ಬೈದಿತಿ’ ತೆರೆಗೆ..ಸಾಮಾಜಿಕ ಹಾಗೂ ಕಾಮಿಡಿ ಸಿನಿಮಾಗಳನಷ್ಟೆ ನೋಡಿ ಅನಂದಿಸಿರುವ ತುಳು ಪ್ರೇಕ್ಷಕರಿಗೆ ವಿಶಿಷ್ಟ ಹಾಗೂ ವಿಬಿನ್ನ ಅನುಭವ ನೀಡುವ ಚಿತ್ರವೊಂದು ಬೆಳ್ಳಿ ತೆರೆಗೆ ಬರಲು ಸಿದ್ದವಾಗಿದೆ. ರಿಚ್ ನೆಸ್ , ಕಲಾತ್ಮಕತೆ ಹಾಗೂ ಮೇಕಿಂಗ್ ಮೂಲಕ ಇತರ ಭಾಷ ಚಿತ್ರಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ಸಿನಿಮಾ ಫೆ.15 ರಂದು ಕರಾವಳಿಯ ಬಹುತೇಕ ಚಿತ್ರ ಮಂದಿರದಲ್ಲಿ ಮೂಡಲಿದೆ.ತುಳುನಾಡಿನ ಸಂಸ್ಕೃತಿ ಆಚಾರ – ವಿಚಾರಗಳ ಜೊತೆ ಮಿಳಿತಗೊಂಡಿರುವ ಹೆಸರು ಕಾರಣಿಕ ವೀರ ಪುರುಷರಾದ ಕೋಟಿ ಮತ್ತು ಚೆನ್ನಯ್ಯರದು. ಈ ಅವಳಿ ವೀರ ಪುರುಷರ ತಾಯಿ ಬೈದಿತಿಯನ್ನು ಹಿನ್ನಲೆಯಾಗಿಟ್ಟುಕೊಂಡು #ಸುರ್ಯೋದಯ್_ಪೆರಂಪಳ್ಳಿ'ಯವರು ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಉಳ್ಳವರ ದುಷ್ಟತನದ ವಿರುದ್ದ ಬಡಿದಾಡಿ ವೀರ ಮರಣವನ್ನಪ್ಪುವ ಕೋಟಿ ಚೆನ್ನಯ್ಯರ ತಾಯಿಯ ಬದುಕಿನ ತ್ಯಾಗ ,ತುಮುಲ ,ತಲ್ಲಣಗಳನ್ನು ಈ ಚಿತ್ರದ ಮೂಲಕ ಸೆರೆ ಹಿಡಿಯಲಾಗಿದೆ.

0 comments: