ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇಂದು ಬ್ರಹ್ಮಾವರದಲ್ಲಿ ನಡೆದ ಬಿಲ್ಲವ ಮಹಾ ಸಮಾವೇಶಕ್ಕೆ ಆಗಮಿಸಿ ಒಗ್ಗಟ್ಟು ಮೆರೆದ ಬಿಲ್ಲವ ಬಾಂಧವರೇ, ನಮ್ಮ ಈ ಒಗ್ಗಟ್ಟು ಒಂದು ದಿನದ ಸಮಾವೇಶಕ್ಕೆ ಸೀಮಿತವಾಗದಿರಲಿ, ಇಂದು ಸಮಾವೇಶದಲ್ಲಿ ಬಿಲ್ಲವ ಸಮುದಾಯಕ್ಕೆ ಸಿಗಬೇಕಾದ ಮಾನ್ಯತೆ ಸರಕಾರದಿಂದ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿ .ಬಿಲ್ಲವರು ಯಾವುದೇ ಪಕ್ಷದಲ್ಲಿ ಇರಲಿ ಯಾವುದೇ ಸಂಘಟನೆಯಲ್ಲಿ ಇರಲಿ ಬಿಲ್ಲವರಿಗೆ ಅನ್ಯಾಯವಾದಾಗ ನಾವೆಲ್ಲ ಒಂದುಗೂಡಿ ಧ್ವನಿ ಎತ್ತಬೇಕಾಗಿದೆ.ಮೇಲ್ವರ್ಗದವರ ಸರ್ವಾಧಿಕಾರಿ ಧೋರಣೆ,, ಕಟ್ಟು ಕತೆಗಳನ್ನು ಮೆಟ್ಟಿ ನಿಂತು ನಾರಾಯಣಗುರು ಅವರು ತೋರಿಸಿದ ಮಾರ್ಗದಲ್ಲಿ ನಡೆದು ನಾವೆಲ್ಲಾ ಒಗ್ಗಟ್ಟನ್ನು.ಸಾರಬೇಕಿದೆ. ನಮ್ಮಲ್ಲಿರುವ ಸಂಘಟನೆಯ ಶಕ್ತಿ ಈ ಜಗತ್ತಿಗೆ ಪರಿಚಯಿಸಿ ಬಲಿಷ್ಠರಾಗಿ ಹೊರ ಹೊಮ್ಮಬೇಕಿದೆ.ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಿಲ್ಲವರು ನಾವೆಲ್ಲ ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗೆ ಹೋರಾಟ ನಡೆಸೋಣ ಜೈ ಬಿಲ್ಲವ, ಜೈ ನಾರಾಯಣ ಗುರು
0 comments: