Wednesday, February 6, 2019

ಬಿಲ್ಲವ ಮಹಾಸಮಾವೇಶದ ರೂವಾರಿ ಪ್ರವೀಣ್ ಪೂಜಾರಿ

ಬಿಲ್ಲವ ಯುವ ನಾಯಕರು. ಉಡುಪಿ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಿರುವ ಬಿಲ್ಲವ ಮಹಾ ಸಮಾವೇಶ-2019 ಸಮಸ್ತ ಸ್ವಾಭಿಮಾನಿ ಬಿಲ್ಲವರ ಒಗ್ಗಟ್ಟನ್ನು ಎಲ್ಲರಿಗೂ ತೋರಿಸಿದೆ. ಇಂತಹ ಒಂದು ಅವಿಸ್ಮರಣೀಯ ಕ್ಷಣಕ್ಕಾಗಿ ಪ್ರತಿಯೊಂದು ಸ್ವಾಭಿಮಾನಿ ಬಿಲ್ಲವರು ಎದುರು ನೋಡುತ್ತಿದ್ದರು, ಇದನ್ನು ಸಾಕಾರ ಗೊಳಿಸಿದ್ದು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಬಿಲ್ಲವ ಸಂಘಟನೆ ಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಇದರ ಜಿಲ್ಲಾ  ಅಧ್ಯಕ್ಷರು ಹಾಗೂ ವೃತ್ತಿಯಲ್ಲಿ ನ್ಯಾಯವಾದಿ ಗಳು ಆಗಿರುವ ಸರಳ,ಸಜ್ಜನ ವ್ಯಕ್ತಿತ್ವದ ಪ್ರವೀಣ್ ಎಮ್.ಪೂಜಾರಿ ಅವರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸಮಾಜದ ಹಿತಕ್ಕಾಗಿ ತನ್ನ ಕೈಲಾದ ಸೇವೆ ಸಲ್ಲಿಸುತ್ತ ಇರುವ ಇವರು ಯಾವುದೇ ಪ್ರಚಾರ ವನ್ನು ಬಯಸುವವರಲ್ಲ. ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಯೇ ಪ್ರಪ್ರಥಮ ಎನ್ನುವಂತೆ ಗರೋಡಿ ಗುರಿಕಾರರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಿಲ್ಲವ ಯುವ ವೇದಿಕೆ ಸಾರಥ್ಯ ವಹಿಸಿದ್ದವರು ಇದೇ ಪ್ರವೀಣ್ ಪೂಜಾರಿ. ಇಷ್ಟೇ ಅಲ್ಲದೇ ಉಡುಪಿ ಜಿಲ್ಲೆಯ ಎಲ್ಲಾ ಬಿಲ್ಲವ ಸಮುದಾಯದ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಂಡವರು ಇದೇ ಪ್ರವೀಣ್ ಪೂಜಾರಿ ಅವರು.

ಬಡತನದ ಕುಟುಂಬದ ಹಿನ್ನಲೆ ಯಿಂದ ಬಂದು ಇಂದು ತನ್ನ ಸ್ವ ಪ್ರಯತ್ನ ದಿಂದ ಮೇಲೆ ಬಂದಿರುವ ಇವರು ತಮ್ಮ ಬಡತನದ ದಿನಗಳನ್ನು ಮರೆತಿಲ್ಲ. ತನ್ನ ಬಳಿ ಬರುವ ಅಸಹಾಯಕ ರಿಗೆ ಜಾತಿ ಭೇದ ಇಲ್ಲದೆ ತನ್ನಿಂದಾದ ಆರ್ಥಿಕ ಸಹಾಯ ಮಾಡುವುದಲ್ಲದೆ ತನ್ನ ಹಿತೈಷಿಗಳ ಮೂಲಕ ಸಹಾಯ ಮಾಡಿಸಿದ ನಿದರ್ಶನಗಳು ಹಲವಾರು ಇದೆ.

ಒಬ್ಬ ಉತ್ತಮ ನ್ಯಾಯವಾದಿ ಆಗಿರುವ ಇವರು ಅನೇಕ ಅಸಹಾಯಕ ರ ಪರವಾಗಿ ಉಚಿತವಾಗಿ ವಕಾಲತ್ತು ವಹಿಸಿ ಅವರ ಪರವಾಗಿ ನ್ಯಾಯ ದೇವತೆ ಒಲಿಯುವಂತೆ ಮಾಡಿರುವುದು ಅವರಿಂದ ಪ್ರಯೋಜನ ಪಡೆದವರಿಗೆ ಮಾತ್ರ ಗೊತ್ತು. ಇವುಗಳಲ್ಲಿ ಪ್ರಮುಖ ವಾಗಿರುವುದು ಉಡುಪಿ ಲಕ್ಷ್ಮೀ ನಗರದ ಕಾಲೇಜು ವಿದ್ಯಾರ್ಥಿನಿ ಚೈತ್ರ ಪೂಜಾರಿ ಯ ಆತ್ಮಹತ್ಯೆ ಪ್ರಕರಣ, ಅಮವಾಸ್ಯೆ ಬೈಲಿನ ಸ್ವಾತಿ ಪೂಜಾರಿ ಪ್ರಕರಣ, ಮತ್ತು ತನ್ನ ಗಂಡನಿಂದಲೇ ಆಕ್ರಮಣ ಕ್ಕೆ ಒಳಗಾಗಿ ಸಾವನ್ನು ಗೆದ್ದು ಬಂದಿರುವ ಕಾರ್ಕಳ ಹೆರ್ಮುಂಡೆಯ ಅನುಶ್ರೀ ಪೂಜಾರಿ ಪ್ರಕರಣ ಪ್ರಮುಖ ವಾದುವುಗಳು. ಹೀಗೆ ಎಲೆಮರೆಯ ಕಾಯಿಯಂತೆ ದೀನ ದಲಿತರ ಸೇವೆ ಗೈಯುತ್ತಿರುವ ಇವರು ಅಪಾರ ಸಂಖ್ಯೆಯಲ್ಲಿ ಸ್ನೇಹಿತರ ಬಳಗ ವನ್ನು ಹೊಂದಿದ್ದಾರೆ.ಇಂದು ನಾವು ಎಲ್ಲಾ ಏನು ಬಿಲ್ಲವ ಮಹಾ ಸಮಾವೇಶದ ಯಶಸ್ವಿಯ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆಯೋ ಅದರ ಕಾರಣೀ ಕರ್ತರು ಇದೇ ಪ್ರವೀಣ್ ಪೂಜಾರಿ ಅವರು ಎಂಬುದು ಅನೇಕರು ಬಲ್ಲರು. ಬಿಲ್ಲವ ಮಹಾ ಸಮಾವೇಶದ ಕಾರ್ಯಧ್ಯಕ್ಷರಾಗಿದ್ದು ಕೊಂಡು ಈ ಸಮಾವೇಶ ವನ್ನು ಯಶಸ್ವ ಗೊಳಿಸುವಲ್ಲಿ ಇವರ ಶ್ರಮ ಮೆಚ್ಚು ವಂತದ್ದೇ. ಹೀಗೆ ನಮ್ಮ ಸಮಾಜಕ್ಕೆ ತನ್ನ ಕೈಲಾದ ನಿಸ್ವಾರ್ಥ ಸೇವೆ ಗೈಯುತ್ತಿರುವ ಪ್ರವೀಣ್ ಎಮ್.ಪೂಜಾರಿ ಅವರಿಗೆ ನಮ್ಮದೊಂದು ಶುಭ ಹಾರೈಕೆ ಇರಲಿ.ಜೈ ಬಿಲ್ಲವ

0 comments: