Sunday, February 17, 2019

ರಂಗಭೂಮಿಯ ಸಕಲ ಕಲಾ ವಲ್ಲಭ ಬಿಲ್ಲವ ಪ್ರತಿಭೆ ಯದು_ವಿಟ್ಲ

ರಂಗಭೂಮಿಯ ಸಕಲ ಕಲಾ ವಲ್ಲಭ ಯದು_ವಿಟ್ಲ ಕರಾವಳಿಯ ರಂಗ ಕಲೆಯ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡು ನಾಟಕ ಹಾಗೂ ಯಕ್ಷಗಾನದ ಉಭಯ ರಂಗದಲ್ಲಿ ತನಗೊಪ್ಪಿಸಿದ ಪಾತ್ರಗಳಿಗೆ ಜೀವ ತುಂಬುವುದರೊಂದಿಗೆ ಕಲಾ ರಂಗದ ಶಿಸ್ತಿಗೆ ಗೌರವ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡುವ ಪ್ರತಿಭಾವಂತ ಕಲಾವಿದರಲ್ಲಿ ಓರ್ವರಾಗಿ ಗುರುತಿಸಿಕೊಂಡವರಾಗಿದ್ದಾರೆ ಯದು ವಿಟ್ಲ ಎಂಬ ಈ ಸಕಲ ಕಲಾ ವಲ್ಲಭ ಬಿರುದಾಂಕಿತ ,ವಿಟ್ಲ ಬಳಿಯ ಮಂಗಲಪದವು ನಿವಾಸಿಯಾದ ದಿ.ಐತ್ತಪ್ಪ ಪೂಜಾರಿ ಹಾಗೂ ಲಕ್ಷ್ಮೀ ದಂಪತಿಯ ಪುತ್ರರಾಗಿ ಜನಿಸಿದ ಯದು ವಿಟ್ಲ ಅವರು ಪ್ರೌಢ ಶಿಕ್ಷಣಕ್ಕೆ ಮಂಗಳ ಹಾಡಿದ ಬಳಿಕ  ಎಳವೆಯಲ್ಲಿಯೇ ಕಲೆಗಳತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. "ಕಪ್ಪುದ ಪೊಣ್ಣು' ಎಂಬ ನಾಟಕದಲ್ಲಿ ಪ್ರಪ್ರಥಮ ಬಾರಿಗೆ  ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗಭೂಮಿಯ ಪ್ರವೇಶಗೆ„ದ ಇವರು ಬಳಿಕ ತನ್ನ ವೃತ್ತಿಯನಡುವೆ ಪ್ರವೃತ್ತಿಯಾಗಿ ನಟನೆಯನ್ನು ಬಳಸಿಕೊಂಡರು. ಮಾತ್ರವಲ್ಲದೆ ಯಕ್ಷಗಾನದಲ್ಲೂ ಆಸಕ್ತಿ ಬೆಳೆಸಿ ನಾಟಕ ಹಾಗೂ ಯಕ್ಷ ರಂಗದಬೆಳವಣಿಗೆಗೆ ನಿತ್ಯ ನಿರಂತರ ಕೊಡುಗೆ ನೀಡಲು ಪ್ರಯತ್ನಶೀಲರಾದರು. ಈ ನಡುವೆ ತನ್ನೂರಿನ ಹಾಗೂ ಪರವೂರಿನಲ್ಲಿ ಅನೇಕಕನ್ನಡ, ತುಳು ಸಾಮಾಜಿಕ, ಪೌರಾಣಿಕ ,ಚಾರಿತ್ರಿಕ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಜನ ಮನ್ನಣೆಗಳಿಸಿದ್ದಾರೆ. ಬಯ್ಯ ಮಲ್ಲಿಗೆ, ಬಾಡಂದಿಬಳ್ಳಿ,ಕುಂಕುಮ ಭಾಗ್ಯ, ಬಣ್ಣದ ಬದ್‌ಕ್‌,ನೆಮ್ಮದಿ ಏಪ,ಅಜ್ಜಿಗ್‌ ಏರಾÉ ಇಜ್ಜಿ ಮೊದಲಾದ ನಾಟಕದ ರಂಗಭೂಮಿಕೆಯಲ್ಲಿ ನಾಯಕ, ಖಳನಾಯಕ, ಪೋಷಕ ಪಾತ್ರಗಳನ್ನು  ಪರಕಾಯ ಪ್ರವೇಶಗೆ„ಯುವ ಯದು ಅವರು ಅದನ್ನು ಲೀಲಾಜಾಲವಾಗಿ ನಿಭಾಯಿಸಿ ನೋಡುಗರಿಂದ ಪ್ರಶಂಸನೆ ಗಳಿಸಿಕೊಳ್ಳುವಲ್ಲಿ  ನಿಸ್ಸೀಮರು.

ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶದ ಹಲವಾರು ಸಂಘ ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಸ್ತುತಪಡಿಸುವ ಹೆಚ್ಚಿನ ನಾಟಕಗಳಲ್ಲಿ ಪಾತ್ರವಹಿಸಿ ಪ್ರಧಾನ ಭೂಮಿಕೆಗೆ ಬಂದ ಈ ಕಲಾವಿದನೊಳಗಣ ನಟನ ಪ್ರತಿಭೆಯನ್ನು ಹೊರಗೆಡಹುವಲ್ಲಿ ಹಲವಾರು ಸಂಘ ಸಂಸ್ಥೆಗಳು ಪ್ರಧಾನ ಪಾತ್ರವಹಿಸಿವೆ. ನಾಟಕ ಮಾತ್ರವಲ್ಲದೆ ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನದಲ್ಲೂ ಗೆಜ್ಜೆ ಕಟ್ಟಿ ರಂಗಸ್ಥಳಕ್ಕೆ ಹೆಜ್ಜೆಯಿರಿಸಿದ ಯದು ವಿಟ್ಲರು ಹಲವಾರು ಯಕ್ಷ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿದ್ದಾರೆ.ಕೀಲು ಕುದುರೆನೃತ್ಯದಲ್ಲೂ ಪಳಗಿರುವ ಇವರು ತುಳು ಚಲನಚಿತ್ರ ರಂಗ ಸೇರಿದಂತೆ ಕನ್ನಡ ಸೂಪರ್ ಹಿಟ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಮಮ್ಮುಟಿಯ ತಂದೆಯ ಪಾತ್ರದಲ್ಲೂ ನಟನೆಯಲ್ಲಿ ಮಿಂಚಿದ್ದಾರೆ .ಬೈಲ ಕುರಲ್‌ ಎಂಬ ತುಳು ಸಿನೆಮಾದಲ್ಲಿ ಗಮನಾರ್ಹ ಪಾತ್ರಗೈದಿರುವ ಇವರುದೈಜಿವಲ್ಡ್‌ನಲ್ಲಿ ಪ್ರಸಾರವಾಗುವ ಬಾಬಣ್ಣ ಬೂಬಣ್ಣ ಎಂಬ ಹಾಸ್ಯ ಧಾರವಾಹಿಯಲ್ಲೂ  ಪಾತ್ರವಹಿಸಿದ್ದಾರೆ. ಇದೀಗ  ವೃತ್ತಿಪರ ರಂಗಭೂಮಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಮಂಜೇಶ್ವರದ ಶಾರದಾ ಆರ್ಟ್ಸ್  ನಾಟಕ ತಂಡದಕಲಾವಿದರಾಗಿ ಕಲಾ ಸೇವೆಗೆ„ಯುತ್ತಿದ್ದಾರೆ.ಗೌರವ ತಂದ ಕಲಾರಾಧನೆ  ತಮ್ಮ ಕಾಯಕದೊಂದಿಗೆ ಕಲಾರಾಧನೆಯ ಬಗ್ಗೆಯೂ ಪ್ರೀತಿ ಬೆಳೆಸಿಕೊಂಡಿರುವ ಯದು ವಿಟ್ಲ ಅವರಿಗೆ ಕೃಷ್ಣ ಜಿ. ಮಂಜೇಶ್ವರ ರಚಿಸಿದ ತಿರ್ಗ್‌ದ್‌ ತೂಲೆ, ಎಡ್ಡೆಡ್ಡುಪ್ಪುಗ,ಸಾದಿ ತಪ್ಪೊಡಿ,ಏರ್‌ ಎಂಚಂದ್‌ ಏರೆಗ್‌ ಗೊತ್ತು,ಆರ್‌ ಪನ್ಲಕ್ಕ ನಾಟಕಗಳ ಪಾತ್ರಗಳು ಜನ ಮನ್ನಣೆ ಗಳಿಸಿಕೊಟ್ಟಿವೆ. ಉತ್ತಮ ಕಲಾವಿದರಾಗಿರುವ  ಇಂತಹ ನಟನ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸಬೇಕಾದುದು ಕಲಾರಾ ಧಕರಾದ ನಮ್ಮೆಲ್ಲರ  ಕರ್ತವ್ಯ .ಇವರ ಪ್ರತಿಭೆಗೆ ಹೊಂದಿಕೊಂಡು ಇನ್ನಷ್ಟು ಅವಕಾಶಗಳು, ಪೋತ್ಸಾಹಗಳು ದೊರಕಿ ಕಲಾ ಸೇವೆ ಸಾಧನೆಯ ಉತ್ತುಂಗಕೇರಲಿ ಎಂಬುದೇ ಶುಭ ಹಾರೈಕೆಗಳು.

0 comments: