Tuesday, February 5, 2019

ಮಾಸ್ಟರ್ ಮನ್ವಿತ್ ರಾಜ್ ಕೋಟ್ಯಾನ್ ಬಿಲ್ಲವ ಯುವ ಪ್ರತಿಭೆ

ಮಾಸ್ಟರ್ ಮನ್ವಿತ ರಾಜ್ ಕೋಟ್ಯಾನ್ ಇವತ್ತಿನ ನಮ್ಮ ಹೊಸ ಅದ್ವಿತಿಯ ಬಾಲಪ್ರತಿಭೆ. ಯಶಸ್ಸು ಪ್ರಾಪ್ತಿಯಗಳು ವಯಸ್ಸಿನ ಪರಿ ಭೇದ ಇರುವುದಿಲ್ಲ. ಚಲನವನದಲ್ಲಿ ದೃಢತೆ ಮಾತಿನಲ್ಲಿ ಶಬ್ದ ಉಚ್ಚಾರಣೆ ನಿರಳವಾಗುತ್ತಲೇ "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬುದು ಸ್ಪಷ್ಟವಾಗಿ ಬಿಡುತ್ತದೆ. ಆರ್ಯಮನದ ಆರಂಭದ ಅವಧಿಯಲ್ಲಿ ಯಶಸ್ಸಿನ ಮೆಟ್ಟಿಲೇರುವವರು ಬಹಳ ಕಡಿಮೆ.

ಕಾಲ ಕ್ಷೇತ್ರದಲ್ಲಿ ಇಂತವರನು ಅಭಿಜಾತ ಕಲಾವಿದ ಎಂದು ಸಂಭೋದಿಸಿದರೆ, ಕ್ರೀಡಾಕ್ಷೇತ್ರದಲ್ಲಿ ಅಭಿಜಾತ ಕ್ರೀಡಾಪಟುಗಳು ಎಂದು ಕರೆಯಲಾಗಿದೆ ಇಂತಹ ಅಭಿಜಾತ ಪ್ರತಿಭೆ ಗಳ ಸಂಖ್ಯೆ ಸಾಕಷ್ಟಿದ್ದರೂ ಅಂತವರನ್ನು ಗುರುತಿಸಿ ಬೆಳೆಸುವವರು ಬಹಳ ವಿರಳ. ಆದರೆ ನಮ್ಮ ಬಿಲ್ಲವ ಪ್ರತಿಭೆ ಮಾತ್ರ ಅಂಥವರಿಗಾಗಿಯೇ ಕೆಲವು ಪುಟ್ಟುಗಳನ್ನು ಮೀಸಾಲಿಡುತ್ತೆವೆ. ಸಾಧಕರ ನೋವು ನಲಿವು ಭಾವನೆಗಳು ಇತರ ಸಾಧಕರಿಗೆ ಸ್ಪೂರ್ತಿ ಆಗಬೇಕೆಂದು ನಮ್ಮ ಸಂಕಲ್ಪ. ಅಂತೆಯೇ ಈ ಬಾರಿಯ ಸಾಧಕರ ಶೋಧನೆಯಲ್ಲಿ ನಮಗೆ ಕಂಡುಬಂದದ್ದು ತನ್ನ ಹನ್ನೊಂದರ ಹರೆಯದಲೇ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುವ ಎಳೆಯ ಮನಸ್ಸಿನ ಪ್ರತಿಭೆ ಮಾಸ್ಟರ್ ಮನ್ವಿತ ರಾಜ್.

ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪ್ರಸಿದಿವೆನಿಸಿದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಕೆಪು ಉಳ್ಳಲ್ತಿ ದೇವಸ್ಥಾನದ ಸಮೀಪದ "ಪ್ರಶಾಂತಿ ನಿಲಯ"ದ ಶ್ರೀ ಬೇಬಿ ರಾಜ ಕೋಟ್ಯಾನ್ ಮತ್ತು ಉಪ್ಪಿನಂಗಡಿ ಮರುವೆಲ್ ಗುತ್ತಿನ ಶ್ರೀಮತಿ ಮೀನಾಕ್ಷಿ ದಂಪತಿಗಳ ಸುಪುತ್ರ ಮನ್ವಿತ್ ರಾಜ್ ಇದೀಗ ನವಿ ಮುಂಬೈ ಉಪನಗರ ಖಾರ್ ಘರ್ ನ್ ರಾಯನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಆರನೇ ತರಗತಿಯ ವಿದ್ಯಾರ್ಥಿ.

ತನ್ನ ಮೂರನೇ ವಯಸ್ಸಿನಲ್ಲೇ ಕಲಾ, ಕ್ರೀಡಾಕ್ಷೇತ್ರ ಪ್ರವೇಶಿಸಿದ ಈ ಬಾಲ ಪ್ರತಿಭೆ ಮುಂಬೈನ ಸುಪ್ರಸಿದ್ಧ ಕರಾಟೆ ಗುರು ಅನ್ವಲ್ ಹಸನ್ ಶೇಖರ್ ಅವರಿಂದ ಕರಾಟೆ ತರಬೇತಿ ಪಡೆದು ಕರಾಟೆಯಲಿ ಯಶಸ್ಸಿನ ಮೊದಲ ಹಂತವಾದ ಬ್ಲಾಕ್ ಬೆಲ್ಟ್ ನ್ನು ಪಡೆದಿದ್ದಾನೆ. ಇಂಡಿಯನ್ ಕ್ಲಾಸಿಕಲ್ ಕಲ್ಚರ್ ಟ್ರಸ್ಟ್(ರಿ) ನಿಂದ ಭಾರತನಾಟ್ಯವನು ಆರು ವರ್ಷಗಳ ಕಾಲ ಅಭ್ಯಸಿದ ಈ ಪಟ್ಟು ಪೋರ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ "ಹರಹರ್ ಮಹದೇವ್" ಧರವಹಿನಿಯಲಿ ಬ್ರಹ್ಮ ದೇವನ ಮಾನಸ್ ಪುತ್ರನಾಗಿ ಶನಿದೇವನನ್ನು ನಿಂದಿಸುವ ಹಳ್ಳಿಯ ಶ್ರೀಮಂತನೊರ್ವನ ಮಗನ ಪತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ತನ್ನ ಕಲಾ ಜಾಣ್ಮೆ ಮೆರೆದಿಯುವದು ನಿಜಕ್ಕೂ ಅಭಿನಂದನಾರ್ಹ ವಿಚಾರ. ಇದೀಗ ಮನ್ವಿತ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಜೈ ಹನುಮಾನ್" ಎಂಬ ಪ್ರಸಿದ್ಧ ಧಾರವಾಹಿಯಲ್ಲಿ ಹನುಮಂತನ ಗೆಳೆಯ ಶಿಶಿರನಾಗಿ ಮಿಂಚುತ್ತಿರುವುದಲ್ಲದೇ ತಮಿಳಿನ ಸ್ಟಾರ್ ವಿಜಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ತಮಿಳು ಕುಡಿವಲ್ ಮೂರ್ ಗನ್ " ಧಾರವಾಹಿಯಲ್ಲಿ ದುರ್ವಾಸ ಮುನಿ ಮತ್ತು ಅವರ ಪುತ್ರ ವಿಲ ವಲನ್ ಪತ್ರದಲ್ಲಿಯೂ ಅಭಿನಯಿಸಿದ್ದಾರೆ. ಕೇವಲ ಭರತನಾಟ್ಯ ಮಾತ್ರವಲ್ಲದೆ ಕೊರಿಯೋಗ್ರಾಫರ್ ಜಿತೇಶ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಾಶ್ಚಿಮಾತ್ಯ ನ್ರತ್ಯದಲೂ ಪ್ರಾವೀಣ್ಯತೆ ಪಡೆದಿರುವ ಮನ್ವಿತ ರಾಜ್ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಗೈದಿದ್ದಾನೆ ಎಂಬುದು ಸಂತಸದ ವಿಚಾರ. ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಈತ ಶಾಲಾ ವತಿಯಿಂದ ಜರುಗಿದ ಹಾಕಿ ಕ್ರೀಡೆಯಲ್ಲಿ ಪಂದ್ಯಶ್ರೇಷ್ಠ ಬಿರುದು ಗಳಿಸಿಕೊಂಡ ಚಾಲಾಕಿ ಪ್ರತಿಭೆ.

ಕರಾಟೆಯಲಿ ಮನ್ವಿತ ರಾಜ್ನದು ಅದ್ವಿತೀಯ ಸಾಧನೆ. ರಾಷ್ಟ್ರೀಯ- ಅಂತರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕ, ಒಂಬತ್ತು ಕಂಚಿನ ಪದಕಗಳನ್ನು ಈಗಾಗಲೇ ತನ್ನ ಮಡಿಲಿಗೆ ಸೇರಿಸಿಕೊಂಡಿದ್ದಾನೆ.ಇದಲ್ಲದೇ ವೆಸ್ಟ್ ಇಂಡೀಸ್ನಲ್ಲಿ ಇಲ್ಲಿವರೆಗೆ ಸುಮಾರು ನೂರಕ್ಕೂ ಮಿಕ್ಕಿದ ವೇದಿಕೆಯಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.ಮನ್ವಿತ್ ರಾಜನ ಆಸಕ್ತಿ ಕ್ಷೇತ್ರಗಳು ಒಂದಲ್ಲ ಎರಡಲ್ಲ ಬಹಳ ವಿಸ್ತಾರವಾದದ್ದು ಈಜುಗಾರಿಕೆ,ಸ್ಕೇಟಿಂಗ್, ಹಾಕಿ, ಸಂಗೀತ ಹೀಗೆ ಹಲವು ಕ್ಷೇತ್ರದಲ್ಲಿ ಈತ ತನ್ನ ಪ್ರತಿಭೆ ಹೊರಹಾಕುತ್ತಿದ್ದಾನೆ. ಖರ್ ಘುರ್ ನ್ ಶೈಲೇಶ್ ಪುತ್ರನ ನವರಿಂದ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿರುವ ಈ ಬಾಲ ಪ್ರತಿಭೆ ಕಲಿಕೆಯಲ್ಲೂ ಪ್ರಥಮ ಸ್ಥಾನ ಕಾಯ್ದುಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ಈತನ ಜನ್ಮ ಜಾತ ಪ್ರತಿಭೆಗೆ ಆಸಕ್ತಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಈತನ ಮಾತಾ ಪಿತರು ವಿದ್ಯಾ ವಿನಯ ಸಂಪನ್ನರು ತಂದೆ ಬೇಬಿ ರಾಜ್ ಕೋಟ್ಯಾನ್ ವಾಣಿಜ್ಯ ಪದವಿ ರಾಗಿದರು ಕೂಡ ಮುಂಬೈಯಲ್ಲಿ ತಮ್ಮ ಉದ್ಯಮ ನಿರ್ವಹಿಸುತ್ತಿದ್ದಾರೆ. ತಾಯಿ ಶ್ರೀಮತಿ ಮೀನಾಕ್ಷಿ ಅವರು ಕಾನೂನು ಪಡವಿರಾಗಿರುತ್ತಾರೆ.ಅದಕ್ಕಾಗಿ ಬಿಲ್ಲವ ಪ್ರತಿಭೆಯ ತಂಡದಿಂದ ಮನ್ವಿತ ರಾಜ್ ಕೋಟ್ಯಾನ್ ಅವರಿಗೆ ಮುಂದಿನ ಜೀವನದಲ್ಲಿ ಐನಷ್ಟು ಹೆಸರು ಗಳಿಸುವಂತೆ ಆಗಲಿ ಹಾಗೆ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಹಾಗೂ ಅವರ ಮುಂದಿನ ಜೀವನಕ್ಕೆ ಶುಭ ಹಾರೈಕೆ.

0 comments: