ಒಂದು ಕಾಲದಲ್ಲಿ ಮೇಲ್ವರ್ಗದ ದಮನಿತ ನೀತಿಯನ್ನು ಮೆಟ್ಟಿ ನಿಂತ ಬಿಲ್ಲವ ಸಮುದಾಯ ಇಂದು ಎಲ್ಲ ಕ್ಷೇತ್ರದಲ್ಲೂ ಬಿಲ್ಲವರು ಮುಂಚೂಣಿಯಲ್ಲಿದ್ದಾರೆ. ಬಿಲ್ಲವರಿಗೆ ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವ ಮತ್ತು ಸಂಘಟಿತವಾಗಿ ಹೋರಾಡುವ ಶಕ್ತಿ ಬಿಲ್ಲವರಿಗಿದೆ. ಬಿಲ್ಲವರ ಒಗ್ಗಟ್ಟನ್ನು ಸಹಿಸಲಾರದ ಸಮಾಜದ ಕೆಲವು ಶಕ್ತಿಗಳು ಹಲವಾರು ರೀತಿಯ ಕಟ್ಟು ಕತೆಗಳನ್ನು ಹೇಳಿ ನಮ್ಮ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ . ಇಂಥ ಕಟ್ಟುಕತೆಗಳನ್ನು ಹೇಳುವ ಜನರು ಎಂದೂ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವುದಿಲ್ಲ ಜಾತಿ ಆಧಾರಿತ ಮೀಸಲಾತಿಗೆ ರದ್ದುಪಡಿಸಲು ಹೋರಾಟ ನಡೆಸುವುದಿಲ್ಲ .ಇದೇ ಕಟ್ಟು ಕತೆ ಹೇಳುವ ಜನ ಬಿಲ್ಲವ ನಾಯಕ ಜನಾರ್ದನ ಪೂಜಾರಿಯವರು ಕುದ್ರೋಳಿಯ ದೇವಾಲಯದಲ್ಲಿ ವಿಧವೆಯರನ್ನು ಪೂಜೆ ಮಾಡಲು ನೇಮಿಸಿದಾಗ ಹೇಳಿದ ಕಥೆಗಳನ್ನು ನಾವಂತೂ ಮರೆಯಲು ಸಾಧ್ಯವಿಲ್ಲ .ಇನ್ನು ರಾಜಕೀಯ ಕ್ಷೇತ್ರದಲ್ಲೂ ನಡೆದ ಬೆಳವಣಿಗೆಯಲ್ಲಿ ಬಿಲ್ಲವರಿಗೆ ಅನ್ಯಾಯವಾದಾಗ ಕೆಲವರು ಕಟ್ಟು ಕತೆ ಹೇಳುತ್ತಾ ಬರುತ್ತಾರೆ ಜಾತಿ ಆಧಾರದಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂದು ಇನ್ನೇನೋ ಹೇಳುತ್ತಾರೆ .ಕಟ್ಟು ಕಥೆ ಹೇಳುವ ವರ್ಗದ ಜನರು ಮಾತ್ರ ತಮ್ಮ ವರ್ಗಕ್ಕೆ ಸಂಬಂಧಪಟ್ಟ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲು ಸಫಲರಾಗುತ್ತಾರೆ ಆದರೆ ಬಿಲ್ಲವರಿಗೆ ಮಾತ್ರ ಬೇರೆಯ ರೀತಿಯ ಕಟ್ಟು ಕತೆಯನ್ನು ಹೇಳುತ್ತಾರೆ .
0 comments: