Monday, March 25, 2019

ಫೋಟೋಗ್ರಾಫರ್ ರಾಜೇಶ್ ಪೂಜಾರಿ ಬಾಳಿಗೆ ಬೇಕಿದೆ ನೆರವಿನ ಹಸ್ತ

ಕಿಡ್ನಿಯ ಚಿಕಿತ್ಸೆಗಾಗಿ ಬೇಕಾಗಿದೆ ಆರ್ಥಿಕ ಸಹಾಯ - ದಾನಿಗಳಲ್ಲಿ ಒಂದು ವಿನಂತಿ ಬಂಟ್ವಾಳದ ಸಿದ್ದಕಟ್ಟೆಯಲ್ಲಿ ವಾಸವಿರುವ ರಾಜೇಶ್ ಪೂಜಾರಿ ಅವರು ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ರಾತ್ರಿ ಮನೆಗೆ ಬೈಕ್ ನಲ್ಲಿ ಬರುತ್ತಿರುವಾಗ ಯಾರೋ ಹಿಂದಿನಿಂದ ಹೊಡೆದ ರೀತಿ ವಿಚಿತ್ರ ಅನುಭವವಾಗಿ ನಂತರ ಮನೆಗೆ ಬಂದು ಮರುದಿನದಿಂದ ಯಾರೊಂದಿಗೂ ಮಾತನಾಡದೇ ಇದ್ದರು. ನಂತರ ಅರೋಗ್ಯದಲ್ಲಿ ಅನೇಕ ಏರುಪೇರಗಳು ಉಂಟಾಗಿ ವೈದ್ಯರಲ್ಲಿ ತೋರಿಸಿದಾಗ ಅವರ ಎರಡೂ ಕಿಡ್ನಿಗಳು ವಿಫಲವಾಗಿರುವುದು ಕಂಡು ಬಂತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಇವರಿಗೆ ಯಾವುದೇ ದರಾಭ್ಯಾಸವಿರಲಿಲ್ಲ ಆದರೆ ಈಗ ತಮ್ಮೆರಡೂ ಕಿಡ್ನಿಗಳನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ತಮ್ಮ ಸ್ಟುಡಿಯೋ ಕ್ಯಾಮರವೆಲ್ಲವನ್ನೂ ಮಾರುವ ಪರಿಸ್ಥಿತಿ ಉಂಟಾಯಿತು. ಕೇವಲ 35 ವರ್ಷ ಪ್ರಾಯದ ಇವರು ಮದುವೆಯಾಗಿ ಕೇವಲ 6 ವರ್ಷಗಳಾಗಿವೆ. ದಾಂಪತ್ಯ ಜೀವನದೊಂದಿಗೆ ಸುಖವಾಗಿ ಬಾಳಿ ಬದುಕಬೇಕಾದ ಈ ಜೀವ ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮನೆಯ ಜವಾಬ್ದಾರಿ ಈಗ ಇವರ ಪತ್ನಿ ಆಶ್ವಿನಿ ಅವರ ಮೇಲೆ ಇದ್ದು ಅವರು ಪಂಚಾಯತಿಯಲ್ಲಿ ಸಣ್ಣ ಕೆಲಸದಲ್ಲಿದ್ದಾರೆ. ಸದ್ಯ ರಾಜೇಶ್ ಪೂಜಾರಿ ಅವರಿಗೆ ವಾರಕ್ಕೆರಡು ಭಾರಿ ಮೂಡಬಿದ್ರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದ್ದು ಆದಷ್ಟೂ ಶ್ರೀಘ್ರದಲ್ಲಿ ಕಿಡ್ನಿ ಬದಲಾಯಿಸಬೇಕಾಗಿ ವೈದ್ಯರು ತಿಳಿಸಿದ್ದಾರೆ. ರಾಜೇಶ್ ಪೂಜಾರಿ ಅವರ ತಾಯಿ ಈಗ ತಮ್ಮ ಮಗನಿಗೆ ಕಿಡ್ನಿ ನೀಡಲು ಸಿದ್ಧರಾಗಿದ್ದು ಎಪ್ರಿಲ್ ತಿಂಗಳಲ್ಲಿ ಇವರು ಆಸ್ಪತ್ರೆಯಲ್ಲಿ ದಾಖಲಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಸುಮಾರು 10 ಲಕ್ಷ ರೂಪಾಯಿಗಳ ವೆಚ್ಚ ತಗುಲಲಿದ್ದು ಈ ಬಡ ಕುಟುಂಬ ಅಷ್ಟೊಂದು ಹಣ ಭರಿಸಲು ಅಸಹಾಯಕರಾಗಿದ್ದಾರೆ. ಅದ್ದರಿಂದ ಈ ಕುಟುಂಬಕ್ಕೆ ತಮ್ಮಿದಾದಷ್ಟು ಆರ್ಥಿಕ ಸಹಾಯವನ್ನು ಮಾಡಿ ಅವರ ಚಿಕಿತ್ಸೆಗೆ ನೆರವಾಗಬೇಕಾಗಿ ವಿನಂಮ್ರ ವಿನಂತಿ.ವಿಳಾಸ:-ಆಶ್ವಿನಿ ಬಿ ಪಡುಮಾರ್ನಾಡು ಬ್ರಾಮರಿ ನಿಲಯ, ಅಚಾರ ಕಟ್ಟೆ ಮೂಡಬಿದ್ರೆ - 574213 Phone +91 8971496665 Bank details Ashwini B Karnataka bank - moodabidri Ac no - 4822500102099501 Ifsc code - KARB0000482

0 comments: