Wednesday, May 22, 2019

ಬಿಲ್ಲವ ಯುವಕ ಕೌಶಿಕ್‌ ಸಾಧನೆ ನೋಡಿ


ಗಾಳ ಮತ್ತು ಬಲೆ ಹರಡಿ ಮೀನು ಹಿಡಿಯುವ ಎರಡೂ ವಿಧಾನಗಳಿಂದ ಮೀನುಗಳ ಜೀವಹಾನಿಯಾಗುತ್ತದೆ. ಹಾಗಾಗದಂತೆ ಮೀನು ಹಿಡಿಯು ವುದು ಹೇಗೆ? ಬಂಟ್ವಾಳ ಬಳಿಯ ಗ್ರಾಮೀಣ ಬಾಲಕನೊಬ್ಬ ಇದಕ್ಕಾಗಿ ಆವಿಷ್ಕರಿಸಿರುವ ವಿಶೇಷ ಯಂತ್ರ ಮಾದರಿ ಜಪಾನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದೆ.ಬಂಟ್ವಾಳ ತಾಲೂಕು ಮಣಿ ನಾಲ್ಕೂರು ಗ್ರಾಮದ ಬತ್ತನಾಡಿ ಕೃಷ್ಣಪ್ಪ ಪೂಜಾರಿ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ ಕೌಶಿಕ್‌ನ ಸಾಧನೆಯಿದು. ಈತ ಈಗಷ್ಟೇ ಮಣಿ ನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸೆಸೆಲ್ಸಿ ಮುಗಿಸಿದ್ದಾನೆ. ಅವನ ಪ್ರತಿಭೆಯನ್ನು ಮನ್ನಿಸಿ ಬಂಟ್ವಾಳ ಎಸ್‌ವಿಎಸ್‌ ಕಾಲೇಜಿನವರು ಉಚಿತ ಪಿಯುಸಿ ಶಿಕ್ಷಣ ನೀಡಲು ಮುಂದೆ ಬಂದಿದ್ದಾರೆ.

8ನೇ ತರಗತಿ ಯಿಂದಲೇ ಕೌಶಿಕ್‌ ವಿಜ್ಞಾನ ಮಾದರಿಗಳನ್ನು ತಯಾರಿ ಸುತ್ತಿದ್ದ. ಈ ಆಸಕ್ತಿ ಯನ್ನು ಗಮನಿಸಿದ ವಿಜ್ಞಾನ ಶಿಕ್ಷಕಿ ವನಿತಾಭಿನ್ನ ಮಾದರಿ ತಯಾರಿಸುವಂತೆ ಪ್ರೇರೇಪಿಸಿದ್ದರು. ಹೀಗೆ ರೂಪುಗೊಂಡ ಯಂತ್ರ ರಾಜ್ಯ, ರಾಷ್ಟ್ರ ಮಟ್ಟದ ಹಂತ ಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ಮೇ 25ರಿಂದ ಜಪಾನ್‌ನಲ್ಲಿ ಸ್ಪರ್ಧೆ : ವಿಜ್ಞಾನ ಮಾದರಿ ತಯಾರಿಯ ಜಿಲ್ಲಾ ಮಟ್ಟದ ಸ್ಪರ್ಧೆ ಯಲ್ಲಿ ಕೌಶಿಕ್‌ನ ಫಿಶ್‌ ಕ್ಯಾಚಿಂಗ್‌ ಮೆಶಿನ್‌ ಗಮನ ಸೆಳೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು. ಅಲ್ಲಿ ಕೌಶಿಕ್‌ ಸಹಿತ 40 ಮಂದಿಯನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು.ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 800 ವಿದ್ಯಾರ್ಥಿಗಳು ಭಾಗವಹಿಸಿದ್ದು, 19 ಮಂದಿಯನ್ನು ಅಂತಾರಾಷ್ಟ್ರೀಯ ಸ್ಪರ್ಧೆಗೆ ಆರಿಸಲಾಗಿತ್ತು. ಇವರಲ್ಲಿ ಕೌಶಿಕ್‌ ಸಹಿತ ರಾಜ್ಯದ ನಾಲ್ಕು ಮಂದಿ ಸೇರಿದ್ದಾರೆ. ಈ ತಂಡ ಮೇ 25ರಿಂದ ಜಪಾನ್‌ನಲ್ಲಿ ನಡೆಯುವ ಸಕುರಾ ಎಕ್ಸ್‌ಚೇಂಜ್‌ ಪ್ರೋಗ್ರಾಮ್‌ ಇನ್‌ ಸೈನ್ಸ್‌ನಲ್ಲಿ ಪಾಲ್ಗೊಳ್ಳಲಿದೆ.

ಏನಿದು ಫಿಶ್‌ ಕ್ಯಾಚಿಂಗ್‌ ಮೆಷಿನ್‌? ಸಾಮಾನ್ಯವಾಗಿ ಬಲೆ ಅಥವಾ ಗಾಳ ಬಳಸಿ ಮೀನು ಹಿಡಿಯಲಾಗುತ್ತದೆ. ಇವೆರಡರಿಂದಲೂ ಮೀನುಗಳು ಸಾಯುತ್ತವೆ. ಆದರೆ ಕೌಶಿಕ್‌ನ ಫಿಶ್‌ ಕ್ಯಾಚಿಂಗ್‌ ಮೆಶಿನ್‌ನಿಂದ ಮೀನುಗಳು ಸ್ಮತಿ ತಪ್ಪುವುದು ಮಾತ್ರ, ಮತ್ತೆ ನೀರಿಗೆ ಬಿಟ್ಟರೆ ಎಚ್ಚರಗೊಂಡು ಓಡಾಡುತ್ತವೆ. ಬೇಕಾದ ಮೀನು ಮಾತ್ರ ಹಿಡಿದು, ನಿರುಪಯೋಗಿಯಾದವುಗಳನ್ನು ಮರಳಿ ನೀರಿಗೆ ಬಿಡಬಹುದು ಎನ್ನುವುದೇ ಈ ಯಂತ್ರದ ಪ್ಲಸ್‌ ಪಾಯಿಂಟ್‌. ಈ ಯಂತ್ರವು 12 ವೋಲ್ಟ್ ಬ್ಯಾಟರಿಯಿಂದ ಕೆಲಸ ಮಾಡುತ್ತದೆ. ಅದಕ್ಕಾಗಿ ಇನ್ವರ್ಟರ್‌ ಇದೆ. ಜೋಡಿಸಿದ ಅಲ್ಯುಮೀನಿಯಂ ರಾಡ್‌ಗಳನ್ನು ನೀರಿನೊಳಗೆ ಇರಿಸಿದಾಗ ಸಂಪರ್ಕಕ್ಕೆ ಬಂದ ಮೀನುಗಳು ಸ್ಮತಿ ಕಳೆದುಕೊಳ್ಳುತ್ತವೆ.

-via -udayavani

0 comments: