Wednesday, May 22, 2019

ನವ ಮನ್ವಂತರದ ಶಕೆಗೆ ಸಾಕ್ಷಿಯಾದ ಕಕ್ಯಪದವು ಗರೋಡಿ ಕ್ಷೇತ್ರ

"ನಂಬಿನಗಲೆಗು ಇಂಬು ಕೊರ್ಪ ಸತ್ಯ ಗೆಂದಾದ್ ಕೊರ್ಪ" ತುಳು ನಾಡಿನ ಸಾರ್ವಕಾಲಿಕ ಶ್ರೇಷ್ಟತೆಯ ನಾಣ್ಣುಡಿಗೆ ಸದಾಕಾಲ ಜೀವ ತುಂಬಿದವರು ಕೋಟಿ ಚೆನ್ನಯ್ಯರು. ದ್ಯೆವತ್ವಕೇರಿದ ನಂತರದಲ್ಲಿಯೂ ಕೂಡಾ ಜನ ಸಮಾನ್ಯರುಗಳ ಕಷ್ಟ ಕಾರ್ಪಣ್ಯಗಳಿಗೆ ಕ್ಷೀಪ್ರ ಪರಿಹಾರವನ್ನು ತನ್ನ ಕಾರ್ಣಿಕತೆಯ ನುಡಿಯ ಮೂಲಕ ತೋರ್ಪಡಿಸಿದವರು. ತುಳುನಾಡಿನ 226 ಕ್ಕೂ ಮಿಕ್ಕಿದ ಗರೋಡಿಗಳಲ್ಲಿ ಕೂಡಾ ಒಂದೊಂದು ಗರೋಡಿಗಳು ಆಚರಣೆಯಲ್ಲಿ ಆರಾಧನೆಯಲ್ಲಿ ಕ್ಷೇತ್ರ ನಿರ್ಮಾಣದಲ್ಲಿ ಬಿನ್ನತೆಯನ್ನು ಕಾಣಬಹುದಾದರೂ ಭಕ್ತವರ್ಗದ ಭಕ್ತಿ ಪರವಶತೆಯಲ್ಲಿ ಸಾಮ್ಯತೆ ಕಂಡು ಬರುತ್ತದೆ.

ಪ್ರಕೃತಿ ರಮಣೀಯ ವ್ಯೆಭವಗಳ ಸ್ಥಳಗಳ ಮೂಲಕ ಹಾದು ಹೋಗಿ ಸಿಗುವ ಸೇರುವ ಮೂಲವೆ ಕಕ್ಯಪದವು ಕ್ಷೇತ್ರ .ಐತಿಹಾಸಿಕ ಮಹತ್ವವುಳ್ಳ ಬಾರ್ದೊಟ್ಟು ಗುತ್ತು ಹಾಗೂ ಇನ್ನಿತರ ಗುತ್ತಿನವರು ಸ್ಥಳವಂದಿಗರುಗಳ ಸಹಕಾರದಿಂದ ಡೀಕಯ ಪೂಜಾರಿ, ಲಿಂಗಪ್ಪ ಮಾಸ್ತರ್ ಸಂಜೀವ ಪೂಜಾರಿ, ಡಾ. ದಿನೇಶ್ ಬಂಗೇರ ರವರಿಂದ ಮುನ್ನಡೆಸಲ್ಪಟ್ಟ ಕ್ಷೇತ್ರ ಶ್ರೀ ಮಾಯಿಲಪ್ಪ ಸಾಲ್ಯಾನ್ ರವರ ಮುತುವರ್ಜಿಯಿಂದ ಕ್ಷೇತ್ರದ ನವೀಕರಣಕ್ಕೆ ಚಾಲನೆ ನೀಡಲಾಯಿತು. ಆರ್ಥಿಕವಾಗಿ ಪ್ರಾಬಲ್ಯವಿಲ್ಲದಿದ್ದರೂ ಕೂಡಾ ಹ್ರದಯ ಶ್ರೀಮಂತಿಕೆಯನ್ನು ಹೊಂದಿರುವ ಭಕ್ತವರ್ಗ ಕಕ್ಯಪದವಿನಲ್ಲಿ ಕಂಡುಬರುತ್ತದೆ. ಆಧುನಿಕ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಸ್ವಾಭಿಮಾನ ಸ್ವಾವಲಂಭನೆಯ ಜೀವನಕ್ಕೆ ಪ್ರತಿ ರೂಪದಂತಿರುವ ಕೋಟಿ ಚೆನ್ನಯ್ಯರ ಆರಾಧನ ಕ್ಷೇತ್ರವು ಸ್ವಂತದಾದ ನಿವೇಶನ ಹೊಂದಬೇಕು ಎಂಬ ಹಂಬಲಕ್ಕೆ ಸ್ಪೂರ್ತಿಯಾದವರು ಶ್ರೀ ಮಾಯಿಲಪ್ಪ ಸಾಲ್ಯಾನ್ ರವರು ಮತ್ತು ಬಳಗ.

ಶ್ರೀ ಚಿತ್ತರಂಜನ್ ಮತ್ತು ಸಹವರ್ತಿಗಳ ಸಹಕಾರದಿಂದ ಕರ್ನಾಟಕ ರಾಜ್ಯ ಘನ ಸರಕಾರದಿಂದ 2 ಎಕ್ರೆಗೂ ಮಿಕ್ಕಿದ ಕ್ರೀಡಾಂಗಣದ ಸ್ವರೂಪವಿರುವ ಜಾಗವನ್ನು ಪಡೆದುಕೊಳ್ಳಲಾಯಿತು. ಸದರಿ ಜಾಗದಲ್ಲಿ ಗ್ರಾಮದ ಪ್ರಧಾನ ದ್ಯೆವಗಳಾದ ಕಡಂಬಿಲ್ತಾಯ ಕೊಡಮಂದಾಯ ದ್ಯೆವೊಂಕುಲು ಗಳಿಗೂ ಕೂಡಾ ಪ್ರತ್ಯೇಕವಾದ ಆಯಾ ಪ್ರಮಾಣದ ಗುಡಿ ಗೋಪುರಗಳ ನಿರ್ಮಾಣ ಅದ್ಬುತವಾಗಿ ಮೂಡಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಶಿಲಾಮಯವಾಗಿ ಆನೇಕ ಗರೋಡಿಗಳು ನಿರ್ಮಾಣವಾದರೂ ಕೂಡಾ ಕಕ್ಯಪದವು ಗರೋಡಿ ಮಾತ್ರ ಎಲ್ಲಾ ಗರೋಡಿಗಳಿಗಿಂತ ವ್ಯೆಶಿಷ್ಟ್ಯ ಪೂರ್ಣವಾಗಿ ಭೂಮಿಯೊಡೆದು ಮೇಲೆದ್ದು ಬಂದಂತೆ ಭಾಸವಾಗುತ್ತಿದೆ. ಬಂಟ್ವಾಳ ಪುತ್ತೂರು ಸುಳ್ಯ ಭಾಗದ ಗರೋಡಿಗಳ ವಾಸ್ತು ಹಾಗೂ ಆಯಾ ಪ್ರಕಾರಗಳಿಗಿಂತ ಬಿನ್ನವಾಗಿ ನಿರ್ಮಾಣಗೊಂಡಿದೆ. ಬ್ರಹ್ಮರ ಗುಂಡದ ರಚನೆಯಂತೂ ಮನೋಹರವಾಗಿದ್ದು ಮಂದ ಸ್ಮಿತವಾದ ಬ್ರಹ್ಮರ ಮೂರ್ತಿಯು ಶಿಲಾ ಪೀಠದಲ್ಲಿ ಆಸೀನವಾಗಿದ್ದು ಗುಂಡದ ಮೇಲ್ಭಾಗದಲ್ಲಿ ಅಪೂರ್ವವಾದ ಮರದ ಕೆತ್ತನೆಗಳು ಶಿಲ್ಪಿಯ ಕ್ಯೆಚಳಕದಿಂದ ಅದ್ದೂರಿಯಾಗಿ ಕಂಗೋಳಿಸುತಿದೆ. ಬ್ಯೆದ್ಯೆರುಗಳ ಸರಳ ಶ್ಯೆಲಿಯ ಕಂಚಿನ ಮೂರ್ತಿಗಳೊಂದಿಗೆ ಬಹು ವೆಚ್ಚದ ಭಾರಿ ಗಾತ್ರದ ಹಲಸಿನ ಮರದ ಏಕ ಹಲಗೆಯಿಂದ ರಚಿತವಾದ ಪೀಠವು ಸುಂದರ ಕೆತ್ತನೆಗಳೊಂದಿಗೆ ವಾಸ್ತು ಕಲಾ ಪ್ರಕಾರವಾಗಿ ಕೂಡಾ ಭಕ್ತವರ್ಗದ ಕಣ್ಮನ ಸೆಳೆವಿಕೆಯಲ್ಲಿ ರಚನೆಗೊಂಡಿರುತ್ತದೆ. ತಾಯಿ ಮಾಯಂದಲ್ ನ ದೇವತಾ ಸ್ವಾರೂಪದ ಮೂರ್ತಿಯು ಕೂಡಾ ಭಾವುಕತೆಗೆ ಕೊಂಡೊಯ್ಯುತ್ತದೆ.

ಗರೋಡಿಯ ಛಾವಡಿಯ ಮೇಲ್ಬಾಗದ ಮುಚ್ಚಿಗೆಯಲ್ಲಿನ ಕೆತ್ತನೆಗಳು ಬೋಗುದಿಯ ಶಿಲಾ ಕಂಭಗಳು ಶಿಲಾ ಕಲ್ಲಿನ ಅಪರೂಪವಾದ ಶಿಲ್ಪಕಲೆಗಳನ್ನು ಮೇಲ್ಯೆಸುವ ಕೆತ್ತನೆಗಳು ಶಿಲಾ ಶಿಲ್ಪಿಯ ಚಮತ್ಕಾರಿಕೆಗಳು ಕಂಡು ಬರುತ್ತದೆ. ಬೇರಾವುದೇ ಶಿಲಾಮಯ ಗರೋಡಿಗಳಲ್ಲಿ ಕಂಡುಬಾರದ ಮಾಡಿನ ಪಕ್ಕಾಸುಗಳಲ್ಲಿನ ಕೆತ್ತನೆಯ ಚಿತ್ರಗಳು ಹಿತ್ತಾಳೆ ಹೊದಿಕೆಯ ಗೋಪುರ ಶ್ಯೆಲಿಯ ಮಾಡುಗಳು ಆಯಾ ಪ್ರಮಾಣದ ಶಿಖರಗಳು ಕೂಡಾ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಕ್ಷೇತ್ರಕ್ಕೆ ಕಿರೀಟವೆಂಬಂತೆ ಧ್ವಜ ಸ್ತಂಭದ ರಚನೆಯೂ ಕೂಡಾ ಶಾಸ್ತ್ರೊಕ್ತವಾಗಿ ಮೂಡಿಬಂದಿರುತ್ತಾದೆ. ಕಡಂಬಿಲ್ತಾಯ ಕೊಡಮಣಿತ್ತಾಯ ದ್ಯೆವ ಶಕ್ತಿಗಳ ಪೂರ್ಣ ಕಳೆಯಿಂದ ಶೋಭಿಸುತ್ತಿದ್ದ ಮುಗ ಮೂರ್ತಿಗಳಂತು ಬಹು ಸುಂದರ. ಜ್ಯೆನ ಮನೆತನದ ಬಾರ್ದೊಟ್ಟು ಗುತ್ತಿನ ಹಿರಿಯರು ಮಾರ್ಗದರ್ಶಿ ಸ್ಥಾನದ ಅಸ್ರಣ್ಣರುಗಳು ಇತರೆ ಗುತ್ತಿನವರು ಸಂಬಂಧ ಪಟ್ಟ ಸಮಸ್ತ ವಿಲಯದಾರರು ಊರಿನ ಗ್ರಾಮಸ್ಥರು ವಿವಿಧ ಸಂಘ ಸಂಸ್ಥೆಗಳು ಆಹೊರಾತ್ರಿಯಾಗಿ ಆರ್ಹನಿರ್ಶಿಯಾಗಿ ದುಡಿದುದರ ಫಲವಾಗಿ ಕ್ಷೇತ್ರ ಸುಂದರವಾಗಿ ಮೂಡಿ ಬಂದಿದೆ.

ಶ್ರೀ ಭಾಸ್ಕರ ಸುವರ್ಣರವರ ನೇತ್ರತ್ವದ ಗರೋಡಿ ಗ್ಯೆಸ್ ತಂಡ ಕ್ಷೇತ್ರಕ್ಕೆ ಸಂದರ್ಶನ ಗ್ಯೆದ ಸಂದರ್ಭದಲ್ಲಿ ಗ್ರೂಪಿನ ಸದಸ್ಯರಾದ ಶ್ರೀ ಪವನ್ ಕಕ್ಯಪದವು ಇವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಹಿರಿಯರು ಸಮಾಜಿಕ ಮುಂದಾಳು ಕೊಡುಗ್ಯೆ ದಾನಿಯಾದ ಶ್ರೀ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಶ್ರೀ ಭುವನೇಶ್ ಪಚ್ಚಿನಡ್ಕ ಸ್ಥಳದಲಿದ್ದು ಉಭಯ ಕುಶಲೊಪಚಾರಗಳನ್ನು ವಿಚಾರಿಸಿಕೊಂಡರು. ಕ್ಷೇತ್ರ ನವೀಕರಣದ ಕೇಂದ್ರ ಬಿಂದು ಶ್ರೀ ಮಾಯಿಲಪ್ಪ ಸಾಲ್ಯಾನ್ ರವರು ಸ್ಥಳ ಸಾನಿದ್ಯಗಳ , ನವೀಕರಣದ ಹಿನ್ನಲೆಗಳು ಹಾಗೂ ಅವರ ಅನುಭವಗಳ ಬುತ್ತಿಗಳನ್ನು ಬಿಚ್ಚಿಟ್ಟರು. ಶ್ರೀಕ್ಷೇತ್ರದ ಧರ್ಮ ದೇವತೆಗಳ ಅನುಗ್ರಹವನ್ನು ಬೇಡುತ್ತಾ ಪ್ರಸಾದವನ್ನು ಹಿರಿಯರಿಂದ ಪಡೆದುಕೊಂಡೆವು. ಈ ಸಂದರ್ಭದಲ್ಲಿ ಶ್ರೀ ಅಣ್ಣು ಶೆಟ್ಟಿ ಮುಕ್ಕಾಲ್ದಿ ಇವರನ್ನು ಭೇಟಿಯಾಗುವ ಅಪೂರ್ವವಾದ ಅವಕಾಶ ಒದಗಿ ಬಂತು . ಕೊಡಮಣಿತ್ತಾಯ ಮುಕ್ಕಾಲ್ದಿಗಳಲ್ಲಿಯೆ ಹಿರಿಯರಾಗಿ ಶ್ರೀದ್ಯೆವದ ಸೇವೆಯನ್ನು ಕಾಯಾ ವಾಚಾ ಮನಸ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿರುವವರು ಶ್ರೀ ಅಣ್ಣು ಶೆಟ್ಟಿ ಯವರು ನಿಷ್ಕಲಂಕ ವ್ಯೆಕ್ತಿತ್ವದ ಮುಗ್ದತೆಯ ಸಾಕಾರರೂಪಿಯಾದ ಶ್ರೀ ಅಣ್ಣು ಶೆಟ್ಟಿಯವರು ಹಲವಾರು ಪ್ರಸಿದ್ದ ಗರೋಡಿ ಹಾಗೂ ಹಲವಾರು ದ್ಯೆವಸ್ತಾನಗಳಲ್ಲಿ ಸೇವಾ ಕ್ಯೆಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಚಲಿತ ಕಾಲಘಟ್ಟದಲ್ಲಿ ಸಮಾಜಿಕ ಅಂತರ್ಜಾಲಗಳ ಸೊಂಕಿಲ್ಲದೆ ಯಾವುದೇ ಆಡಂಬರ ಪ್ರಚಾರ ಬಯಸದ ಮ್ರದು ಸ್ವಭಾವದ ಶ್ರೀ ಅಣ್ಣು ಶೆಟ್ಟಿಯವರು ಮುಂದಿನ ಪೀಳಿಗೆ ಗೆ ಆದರ್ಶಪ್ರಾಯರಾಗಿರುವವರು. ಮಾದರಿಯಾಗಿ ಬಾಳುವವರಿಗೆ ಸ್ಪೂರ್ತಿಯ ಚಿಲುಮೆಯಾಗಿ ಅವರ ಆತ್ಮೀಯ ನಡವಳಿಕೆಗೆ ಅಂತೂ ಮನಸೊತೆವು ಹಿರಿಯರಾದ ಶ್ರೀ ಅಣ್ಣು ಶೆಟ್ಟಿಯವರು ಬಹು ವರ್ಷಗಳ ಕಾಲ ದ್ಯೆವಗಳ ಸೇವೆಯನ್ನು ನಡೆಸಿಕೊಂಡು ಬರುವಂತಾಗಲಿ . ಸನಿಹದಲ್ಲೆ ಇದ್ದ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಲೆಯು ಅಮೋಘವಾಗಿ ನಡೆಯುತ್ತಿತ್ತು. ಅದೇ ದಿನ ಸಂಜೆ ಕ್ಷೇತ್ರದ ಪ್ರಧಾನ ಶಕ್ತಿಯಾದ ದ್ಯೆವೊಂಕುಲು ( ಶ್ರೀ ವ್ಯೆದ್ಯನಾಥ) ದ್ಯೆವದ ನೇಮೊತ್ಸವಕ್ಕೆ ಪ್ರಸಿದ್ದ ಕಕ್ಯಗುತ್ತು ಬೋಂಟ್ರರ ಆಡ್ಯ ಮನೆತನದಿಂದ ಭಂಡಾರ ಬರುವ ಪ್ರಕ್ರಿಯೆಗಳು ನಡೆಯುತ್ತಿತ್ತು.

ಸಮಾಜಿಕ ಸಾಮರಸ್ಯದ ಬದುಕಿಗೆ ಅಪೂರ್ವವಾದ ಕೊಡುಗೆಯನ್ನು ನೀಡಿದ ಗ್ರಾಮ ದೇಗುಲಗಳಾದ ಗರೋಡಿಗಳು ಬದಲಾವಣೆಗೊಳ್ಳುತ್ತಿರುವ ಕಾಲಘಟ್ಟಕ್ಕೆ ಮೂಲ ಪರಂಪರೆ ಸಾಂಪ್ರಾದಾಯಗಳಿಗೆ ದಕ್ಕೆ ಭಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಕೋಟಿ ಚೆನ್ನಯ್ಯರ ಜೀವನದ ಕಲ್ಪನೆಗೆ ಪೂರಕವಾಗುವಂತೆ ಒಂದು ವ್ಯಾಯಾಮ ಶಾಲೆಯನ್ನು ನಿರ್ಮಿಸುವ ಸಂಕಲ್ಪವನ್ನು ತೊಟ್ಟಿದ್ದಾರೆ ಶ್ರೀಮಾಯಿಲಪ್ಪ ಸಾಲ್ಯಾನ್ ರವರು. ದೇಶದ ಭವಿಷ್ಯತ್ತಿನ ಆಸ್ತಿಗಳಾದ ಯುವಜನತೆಯನ್ನು ವಿಕಾಸದ ಹಾದಿಗೆ ಕೊಂಡ್ಯೊಯುವ ಸಾಲ್ಯಾನ್ ರವರ ಅಭಿವ್ರದ್ದಿಯ ಕನಸನ್ನು ಶ್ರೀಕ್ಷೇತ್ರದ ಶಕ್ತಿಗಳು ಈಡೇರಿಸಲಿ.ಸುಂದರವಾದ ಹೂದೊಟ ಮರಗಿಡಗಳನ್ನು ಭವಿಷ್ಯತ್ತಿನಲ್ಲಿ ಬೆಳೆಸುವ ಇರಾದೆಯು ಕೂಡಾ ಸಾಲ್ಯಾನ್ ರಿಗೆ ಇದೆ.

ಧಾರ್ಮೀಕ ಕ್ಷೇತ್ರಗಳು ಮಾನವ ಕಲ್ಯಾಣ ಕೇಂದ್ರಗಳಾಗಿ ರೂಪಿಸುವ ಅವಕಾಶಗಳಾಗಲಿ. ಕರ್ನಾಟಕ ರಾಜ್ಯ ಘನ ಸರಕಾರದ ನಿಕಟ ಪೂರ್ವ ಸಚಿವರಾದ ಶ್ರೀ ರಮಾನಾಥ ರೈ ಗಳ ಸಂಪೂರ್ಣ ಸಹಕಾರ ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಊರ ಪರವೂರ ಭಕ್ತರ ತ್ಯಾಗ ವಿವಿಧ ಸಂಘ ಸಂಸ್ಥೆಗಳ ಸಂಘಟಿತವಾದ ಹೋರಾಟದ ಫಲಶ್ರುತಿಯಿಂದಾಗಿ ಓಜೊಪೂರ್ಣವಾಗಿ ಸ್ರಜಿಸಲ್ಪಟ್ಟ ಕ್ಷೇತ್ರಗಳ ಶಿಲಾ ಶಿಲ್ಪಕಲೆ ದಾರು ಶಿಲ್ಪಗಳ ವ್ಯೆಭವ ವಿಶಿಷ್ಟವಾದ ವಾಸ್ತು ಶ್ಯೆಲಿಯೊಂದಿಗೆ ನಿರ್ಮಾಣದ ತಾಂತ್ರಿಕತೆಯನ್ನು ನಿರ್ವಹಿಸಿದ ಶ್ರೀ ಪ್ರಮಾಲ್ ಕುಮಾರ್ ರವರ ಶ್ರಮ ಅನುಕರಣೀಯ . ಶ್ರೀಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ವಿವಿಧ ದಾರ್ಮಿಕ ರಂಗದ ಮಠಾದೀಶರುಗಳು ವಿವೀಧ ಕ್ಷೇತ್ರಗಳ ಗಣ್ಯರುಗಳ ದಂಡು ಸಂದರ್ಶನಗ್ಯೆದುದು ಕಕ್ಯಪದವು ಕ್ಷೇತ್ರದ ಇತಿಹಾಸದಲ್ಲಿ ಒಂದು ಮ್ಯೆಲಿಗಲ್ಲು.ಚಾರಿತ್ರಿಕವಾದ ಪುಟದಲ್ಲಿ ಶಾಶ್ವತವಾದ ಕೊಡುಗೆಯನ್ನು ನೀಡಿದ ಸಮಸ್ತ ಭಕ್ತ ವರ್ಗ ತುಳುನಾಡಿನ ಗರೋಡಿಗಳ ಇತಿಹಾಸದ ಸಾಲಿಗೆ ಕಕ್ಯಪದವು ಗರೋಡಿ ನವ ಮನ್ವಂತರಕ್ಕೆ ಸಾಕ್ಷಿಯಾಯಿತು.

ಬರಹ: ಅರ್ಕೊಟ್ಟು ಪಾಂಡು ಕೋಟ್ಯಾನ್

0 comments: