ತುಳುನಾಡಿನಾದ್ಯಂತ ಹಲವಾರು ಕೊರಗಜ್ಜನ ಕಾರ್ಣಿಕ ಕ್ಷೇತ್ರಗಳಿವೆ ಅಂತಹ ಕ್ಷೇತ್ರಗಳ ಪೈಕಿ ಉಡುಪಿ ಜಿಲ್ಲೆಯ ಮುಂಡ್ಕೂರಿನ ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರವು ಒಂದಾಗಿದೆ.ದಿವಾಕರ ಪೂಜಾರಿ ಯವರು ಶ್ರೀ ಕ್ಷೇತ್ರದ ರೂವಾರಿ.ಇವರು ಪಂಜುರ್ಲಿ ದೈವದ ದರ್ಶನ ಪಾತ್ರಿ ಕೂಡಾ ಆಗಿರುವರು.ಕೊರಗಜ್ಜ ದೈವವು ದಿವಾಕರ ಪೂಜಾರಿಯವರ ಭಕ್ತಿಗೆ ಪ್ರೀತಿಗೆ ಒಲಿದು ಬೆನ್ನಟ್ಟಿ ಬಂದ ದೈವವಾಗಿದೆ.ಇವರ ಹುಟ್ಟೂರು ಕೊಲ್ಲೂರು.ದಿವಾಕರ ಪೂಜಾರಿ ಯವರು 10 ವರ್ಷದ ಬಾಲಕನಾಗಿರುವಾಗ ತನ್ನ ಅಜ್ಜಿಯೊಂದಿಗೆ ಕುಟುಂಬದ ಮನೆ ಅಂಡೇಲಿಗೆ ಹೋದ ಸಂದರ್ಭದಲ್ಲಿ ಅಲ್ಲಿ ಆರಾಧನೆ ಗೊಳ್ಳುತ್ತಿರುವ ದೈವ ದೇವರನ್ನು ಕಂಡು # ಈ ದೈವಗಳು ನಮ್ಮ ಮನೆಗೆ ಬಂದರೆ ನಾವು ಕೂಡಾ ನಂಬಬಹುದಿತ್ತು ಎಂದು ಅಜ್ಜಿಯೊಡನೆ ಹೇಳಿದರಂತೆ.ಅದರಂತೆ ಆ ದೈವಗಳು ಆ ಬಾಲಕನ ಮನದ ಇಚ್ಛೆ ಯಂತೆ ಹಿಂದೆ ಬಂದು ಇವರಿಂದ ಸತ್ಕಾರ್ಯಗಳನ್ನು ಇವರ ಕೈಯಿಂದ ಮಾಡಿಸುತ್ತಲೇ ಬಂದಿದೆ. ದಿವಾಕರ ಪೂಜಾರಿಯವರ ತಂದೆ ಕಾಲಪ್ಪ ಪೂಜಾರಿಯವರ ಕಾಲದಲ್ಲಿ ದೈವಗಳು ಇವರ ಮನೆಗೆ ಬಂದಿದೆ.ಅಪಾರ ದೈವ ಭಕ್ತರಾಗಿದ್ದ ದಿವಾಕರ ಪೂಜಾರಿಯವರು ಮುಂಡ್ಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಧರ್ಮಸ್ಥಳ ಮಂಜುನಾಥನ ಸನ್ನಿಧಿ ವರೆಗೆ ಬರಿಗಾಲಲ್ಲಿ ಪಾದಯಾತ್ರೆ ಮಾಡಿ ನೇತ್ರಾವತಿ ಯಲ್ಲಿ ಸ್ನಾನ ಮಾಡಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ಮನೆಗೆ ಬಂದು ನೇಮೋತ್ಸವ ಮಾಡಿದರು.ಈ ನೇಮೋತ್ಸವ ದಲ್ಲಿ ದೈವ ಆಕರ್ಷಣೆ ಗೋಂಡು ಮುಂದೆ ಇವರು ಕೂಡಾ ದರ್ಶನ ಪಾತ್ರಿಯಾದರು.ಒಂದು ದಿನ ಸನ್ಯಾಸಿ ಒಬ್ಬರು ಇವರ ಮನೆಗೆ ಬಂದಾಗ ಅವರು ೨ ರೂಪಾಯಿ ನೀಡಿದರಂತೆ ಅದನ್ನು ಬೇಡವೆಂದಾಗ ಸನ್ಯಾಸಿ ಯವರು ಇದನ್ನು ಸ್ವೀಕರಿಸಿ ಈ ಸ್ಥಳ ಭವ್ಯ ಕ್ಷೇತ್ರ ವಾಗಲಿದೆ ಇಲ್ಲಿ ಜನಪರ ಸೇವೆ ನಡೆಯಲಿದೆ ಎಂದರಂತೆ ಅದರಂತೆ ಕಾಡಿನಿಂದ ಆವೃತವಾದ ಆ ಸ್ಥಳ ಭವ್ಯ ಕ್ಷೇತ್ರ ವಾಗಿ ಮಾರ್ಪಟ್ಟಿದೆ. ಆ ಸನ್ಯಾಸಿ ಬಳಿ ತಾವು ಎಲ್ಲಿಂದ ಬಂದಿದ್ದಿರ ಎಂದು ಉತ್ತರಿಸಿದಾಗ ಕುಡುಮಪುರ ಎಂದು ಹೇಳಿ ಅಲ್ಲಿಂದ ಹೋರಟರಂತೆ ಅವರ ಮಾತಿನಂತೆ ಈಗ ಇದೊಂದು ಭಕ್ತರ ಪಾಲಿನ ಶ್ರಧ್ಧಾ ಕೇಂದ್ರವಾಗಿದೆ.ದಿನಂಪ್ರತಿ ನೂರಾರು ಭಕ್ತರು ಆಗಮಿಸಿ ಇಲ್ಲಿಯ ಕೃಪೆಗೆ ಪಾತ್ರರಾಗುತ್ತಾರೆ.ಪ್ರತಿ ಸೋಮವಾರದಂದು ಅನೇಕ ಭಕ್ತರ ಸಮಸ್ಯೆಗೆ ಪ್ರಶ್ನೆ ಯ ಮುಖಾಂತರ ದಿವಾಕರ ಪೂಜಾರಿ ಯವರು ಪರಿಹಾರ ನೀಡುತ್ತಾರೆ.ಸೋಮವಾರ ಅನ್ನಸಂತರ್ಪಣೆ ಸೇವೆ ಕೂಡಾ ಕ್ಷೇತ್ರದಲ್ಲಿ ನಡೆಯುತ್ತಿದೆ.ಇಲ್ಲಿಯ ಕ್ಷೇತ್ರದಲ್ಲಿ ಕೊರಗಜ್ಜನ ಸನ್ನಿಧಿ ಮಾತ್ರವಲ್ಲದೆ ಸತ್ಯ ದೇವತೆ ,ಕೊರಗರ ಪಂಜುರ್ಲಿ, ಮಂತ್ರ ದೇವತೆ,ಪಿಲಿಚಾಮುಂಡಿ,ಕೊರತಿ ದೈವಗಳನ್ನು ಆರಾಧಿಸಿಕೊಂಡು ಬರಲಾಗಿದೆ.ಈ ಕ್ಷೇತ್ರದಲ್ಲಿ ಹಿಂದೂಗಳು ಮಾತ್ರವಲ್ಲ ಕ್ರಿಶ್ಚಿಯನ್, ಮುಸ್ಲಿಮರು ಕೂಡಾ ಆಗಮಿಸುತ್ತಿರುವುದು ದೂರದ ಊರಿಂದ ಭಕ್ತಾಧಿಗಳು ಆಗಮಿಸುತ್ತಿರುವುದು ಈ ಕ್ಷೇತ್ರದ ಕಾರಣೀಕಕ್ಕೆ ಸಾಕ್ಷಿ.ವರ್ಷಂಪ್ರತಿ ಶ್ರೀ ಕ್ಷೇತ್ರದಲ್ಲಿ ನೇಮೋತ್ಸವ ಅಧ್ಧೂರಿಯಾಗೀ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸಿ ಶ್ರೀ ಕ್ಷೇತ್ರದ ಕೃಪೆಗೆ ಪಾತ್ರ ರಾಗುತ್ತಾರೆ.
ವಿಜೇತ್ ಪೂಜಾರಿ ಮುಂಡ್ಕೂರು
0 comments: