Tuesday, July 21, 2020

ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಿರುವ ಭವ್ಯ ಶಿಬರೂರು

ಮಾಧ್ಯಮ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಕ್ರೈಂ ರಿಫೋರ್ಟರ್ ಆಗಿ ಕಾರ್ಯ ನಿರ್ವಹಿಸುತ್ತೀರುವ ನಮ್ಮ ಸಮಾಜದ ಹಾಗೆಯೇ ತುಳುನಾಡಿನ ಹೆಮ್ಮೆಯ ಹೆಣ್ಣು ಮಗಳು ಭವ್ಯ ಶಿಬರೂರು.ಮೂಲತಃ ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಶಿಬರೂರು ಎನ್ನುವ ಪುಟ್ಟ ಊರಿನಿಂದ ಕೊಡಮಣಿತ್ತಾಯನ ಅನುಗ್ರಹದಿಂದ ಇಲ್ಲಿವರೆಗೆ ಬಂದಿರುವ ಇವರು.ಈ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಂತ್ರ ಪತ್ರಕರ್ತೆಯಾಗುವ ಬಗ್ಗೆ ಸ್ವಲ್ಪವೂ ಯೋಚನೆ ಮಾಡದೇ ವೃತ್ತಿ ಜೀವನ ಆಯ್ಕೆ ಮಾಡಿಕೊಂಡ ಇವರು ಮೊದ ಮೊದಲು ಕ್ಯಾಮೆರಾ ಎದುರು ಮಾತನಾಡಲು ಭಯವಾದರು ತೊದಲು ನುಡಿಯಿಂದ ಆರಂಭಿಸಿದ ಇವರ ಈ  ಪಯಣಕ್ಕೆ ಸದ್ಯ ಆರು ವರುಷ ಸಂದಿದೆ‌.

ಮೋದಲು ಇನ್ವೆಸ್ಟಿಗೆಷನ್ ಜರ್ನಲಿಸಂ ತಂಡದ ಜೊತೆ ಸುವರ್ಣ ನ್ಯೂಸ್ ನಲ್ಲಿ  ವೃತ್ತಿ ಜೀವನ ಆರಂಭಿಸಿದ ನಂತರ ಇವರ ಬದುಕಿನಲ್ಲಿ ತಿರುವು ಅಂದರೆ ಅದು ಸುದ್ದಿ ಟಿವಿ ಬೆಂಗಳೂರು ನಗರದ ಕ್ರೈಂ  ವರದಿಗಾರಿಕೆಯ ಜವಾಬ್ದಾರಿಯನ್ನು ಇವರಿಗೆ ನೀಡಿತ್ತು.ಕೊಲೆ,ಸುಲಿಗೆ, ಕೊಲೆಯತ್ನ ಹೀಗೆ ನಾನ ಅಪರಾಧಗಳ ರಿಫೋರ್ಟ್ ಮಾಡಿ ಭವ್ಯ ಶಿಬರೂರು ಅಂದರೆ ಯಾರು ಎಂದು ಇಡೀ ಕರ್ನಾಟಕ ಕಕ್ಕೇ  ಪರಿಚಯ ಮಾಡಿತ್ತು.

ಅದಾದ ನಂತರ ಇಡೀ ಜಗತ್ತಿಗೆ ಗೊತ್ತಿರುವ  ರಾಮೋಜೀ ಫಿಲ್ಮ್ ಸಿಟಿ ಹೈದರಾಬಾದ್ ಅವರ ಈ ಟಿವಿ ಭಾರತ ಇವರಿಗೆ ಕ್ರೈಂ ರಿಫೋರ್ಟರ್ ಆಗಿ ಅವಕಾಶ ನೀಡಿದೆ. ಸದ್ಯ ಕ್ರೈಂ ವರದಿಗಾರಿಕೆ ಗೆ ಜೊತೆ ಕೊರೋನಾ ,ಫಾಲೋಅಪ್,ರಾಜಕೀಯ ವರದಿಗಾರಿಕೆ ಮಾಡುತ್ತಿರುವ ಇವರು ಇನ್ನಷ್ಟು ಉನ್ನತ ಹುದ್ದೆಗೆ ಏರಲಿ ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಪಡೆಯಲಿ ..ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್
🖍️ನಮ್ಮ ಬಿಲ್ಲವೆರ್  ಪೇಜ್

2 comments: