Tuesday, July 21, 2020

ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಕ್ಷತಾ ಪೂಜಾರಿ

ತುಳುನಾಡಿನಲ್ಲಿ ಯುವ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಅಂತೆಯೇ ಇಂದು ನಾವು ಮಾತನಾಡುತ್ತಿರುವ ಸಾಧಕರೆಂದರೆ ಕಾರ್ಕಳ ಅಕ್ಷತಾ ಪೂಜಾರಿ.ಗ್ರಾಮೀಣ ಪ್ರದೇಶದಿಂದ ರಾಷ್ಟ್ರ  ಮಟ್ಟದಲ್ಲಿ ಸಾಧನೆ ಮಾಡಿದ ಹೆಗ್ಗಳಿಕೆ ಇವರದು.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲಗುಡ್ಡೆಯ ಕೆರ್ವಾಶೆ ಗ್ರಾಮ ಪಂಚಾಯತ್ ನಲ್ಲಿ ವಾಸಿಸುತ್ತಿರುವ ಇವರ ತಂದೆ ಅಂಗು ಪೂಜಾರಿ ತಾಯಿ ವಸಂತಿ.ಶಿಕ್ಷಣವನ್ನು ಉಜಿರೆ, ಆಳ್ವಾಸ್ ನಲ್ಲಿ ಪೂರ್ಣಗೊಳಿಸಿ ಪ್ರಸ್ತುತವಾಗಿ ಹುಬ್ಬಳ್ಳಿಯ ಲಾ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಇವರು ಬಾಲ್ಯದಿಂದಲೆ ಆಟೋಟಗಳಲ್ಲಿ ಆಸಕ್ತಿ ಹೊಂದಿದ್ದು ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

 2020 ಫೆಬ್ರವರಿಯಲ್ಲಿ ಒಡಿಶಾದಲ್ಲಿ ನಡೆದ ಖೇಲೋ ಇಂಡಿಯಾ ಯುನಿವರ್ಸಿಟಿ ಮೀಟ್ ನ ಹೆಪಾತ್ಲಾನ್ ಕ್ರೀಡಾ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಮಡಿಲಿಗೇರಿಸಿಕೊಂಡು ತನ್ನ ಹೆತ್ತವರಿಗೆ ,ರಾಜ್ಯಕ್ಕೆ ಹಾಗೂ ತನ್ನ ಹುಟ್ಟೂರಿಗೆ ಹೆಮ್ಮೆಯನ್ನು ತಂದಿರುತ್ತಾರೆ.ಇವರ ಸಾಧನೆ ಹೀಗೆ ಮುಂದುವರಿಯಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಹೆಚ್ಚಿನ ಹೆಸರು ಮಾಡಲಿ ಎಂದು ಹಾರೈಸೋಣ....
ಮಾಹಿತಿ:-ಎಮ್. ಸುವರ್ಣ
✏️ನಮ್ಮ ಬಿಲ್ಲವೆರ್ ಟೀಮ್

0 comments: